'IC814- ದಿ ಕಂದಹಾರ್ ಹೈಜಾಕ್' ವೆಬ್ ಸೀರೀಸ್: Netflix ಮುಖ್ಯಸ್ಥರಿಗೆ ಸರ್ಕಾರ ಸಮನ್ಸ್!

OTT ಸರಣಿಯ ವಿವಾದಾತ್ಮಕ ಅಂಶಗಳ ಕುರಿತು ವಿವರಣೆಯನ್ನು ಕೋರಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಂಗಳವಾರ ನೆಟ್‌ಫ್ಲಿಕ್ಸ್ ಇಂಡಿಯಾದ ವಿಷಯ ಮುಖ್ಯಸ್ಥರನ್ನು ಕರೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
'IC814' web series
ದಿ ಕಂದಹಾರ್ ಹೈಜಾಕ್ ವೆಬ್ ಸೀರೀಸ್ (ಸಂಗ್ರಹ ಚಿತ್ರ)online desk
Updated on

ನವದೆಹಲಿ: ಒಟಿಟಿ ವೇದಿಕೆ ನೆಟ್ ಫ್ಲಿಕ್ಸ್ ನ ಮುಖ್ಯಸ್ಥರಿಗೆ IC-814- ದಿ ಕಂದಹಾರ್ ಹೈಜಾಕ್ ಎಂಬ ವೆಬ್ ಸೀರೀಸ್ ಗೆ ಸಂಬಂಧಿಸಿದಂತೆ ಸಮನ್ಸ್ ಜಾರಿ ಮಾಡಲಾಗಿದೆ. ಹೈಜಾಕ್ ಮಾಡಿದವರನ್ನು ಚಿತ್ರಿಸಿದ ರೀತಿ ವಿವಾದಕ್ಕೀಡಾಗಿರುವ ಹಿನ್ನೆಲೆಯಲ್ಲಿ ಸಮನ್ಸ್ ಜಾರಿ ಮಾಡಲಾಗಿದೆ.

OTT ಸರಣಿಯ ವಿವಾದಾತ್ಮಕ ಅಂಶಗಳ ಕುರಿತು ವಿವರಣೆಯನ್ನು ಕೋರಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಂಗಳವಾರ ನೆಟ್‌ಫ್ಲಿಕ್ಸ್ ಇಂಡಿಯಾದ ವಿಷಯ ಮುಖ್ಯಸ್ಥರನ್ನು ಕರೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕಠ್ಮಂಡುವಿನಿಂದ ದೆಹಲಿಗೆ ಹೊರಟಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನದ ಅಪಹರಣಕಾರರನ್ನು ಮಾನವೀಯ ನೆಲೆಗಟ್ಟಿನಲ್ಲಿ ಚಿತ್ರೀಕರಿಸಿರುವುದನ್ನು ವೀಕ್ಷಕರು ತೀವ್ರವಾಗಿ ವಿರೋಧಿಸಿದ್ದಾರೆ.

ಐಸಿ-814ರ ಅಪಹರಣಕಾರರು ಭೀಕರ ಭಯೋತ್ಪಾದಕರು, ಅವರು ತಮ್ಮ ಮುಸ್ಲಿಂ ಗುರುತನ್ನು ಮರೆಮಾಡಲು ಅಲಿಯಾಸ್‌ಗಳನ್ನು (ಉಪನಾಮ) ಪಡೆದುಕೊಂಡಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಹೇಳಿದ್ದಾರೆ.

"ಚಲನಚಿತ್ರ ನಿರ್ಮಾಪಕ ಅನುಭವ್ ಸಿನ್ಹಾ, ಅವರ ಮುಸ್ಲಿಮೇತರ ಹೆಸರುಗಳನ್ನು ಹೆಚ್ಚಿಸುವ ಮೂಲಕ ಅವರ ಕ್ರಿಮಿನಲ್ ಉದ್ದೇಶವನ್ನು ಕಾನೂನುಬದ್ಧಗೊಳಿಸಿದ್ದಾರೆ" ಎಂದು ಮಾಳವಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

'IC814' web series
‘ಇಂಡಿಯಾಸ್ ವೈಲ್ಡ್ ಕರ್ನಾಟಕ' ಸಾಕ್ಷ್ಯಚಿತ್ರ: ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಬಿಬಿಸಿ, ಡಿಸ್ಕವರಿ, ನೆಟ್‌ಫ್ಲಿಕ್ಸ್!

"ದಶಕಗಳ ನಂತರ, ಹಿಂದೂಗಳು IC-814 ನ್ನು ಹೈಜಾಕ್ ಮಾಡಿದ್ದಾರೆ ಎಂದು ಜನರು ಭಾವಿಸುತ್ತಾರೆ" ಎಂದು ಮಾಳವೀಯಾ ಹೇಳಿದ್ದಾರೆ. "ಪಾಕಿಸ್ತಾನದ ಭಯೋತ್ಪಾದಕರ ಅಪರಾಧಗಳನ್ನು ತೊಡೆದುಹಾಕಲು ಎಡಪಕ್ಷಗಳ ಅಜೆಂಡಾ ಇದಾಗಿದ್ದು, ಇದನ್ನು 70 ರ ದಶಕದಿಂದಲೂ ಕಮ್ಯುನಿಸ್ಟರು ಆಕ್ರಮಣಕಾರಿಯಾಗಿ ಬಳಸುತ್ತಿದ್ದಾರೆ ಎಂದು ಮಾಳವೀಯ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com