ಮಲಯಾಳಂ ಸಿನಿಮಾ ನಟ ನಿವಿನ್ ಪೌಲಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಪ್ರಕರಣದಲ್ಲಿ ಮಹಿಳೆ ಸೇರಿದಂತೆ ಆರು ಆರೋಪಿಗಳಿದ್ದಾರೆ. ಮೊದಲ ಆರೋಪಿ ಮಹಿಳೆಯಾಗಿದ್ದು, ಪಾಲಿ ಆರನೇ ಆರೋಪಿಯಾಗಿದ್ದಾರೆ.
ನಿವಿನ್ ಪೌಲಿ
ನಿವಿನ್ ಪೌಲಿ
Updated on

ತಿರುವನಂತಪುರಂ: ಒಂದು ವರ್ಷದ ಹಿಂದೆ ದುಬೈನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 40 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಮಲಯಾಳಂ ಸಿನಿಮಾ ನಟ ನಿವಿನ್ ಪೌಲಿ ವಿರುದ್ಧ ಮಂಗಳವಾರ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಮಹಿಳೆ ಸೇರಿದಂತೆ ಆರು ಆರೋಪಿಗಳಿದ್ದಾರೆ. ಮೊದಲ ಆರೋಪಿ ಮಹಿಳೆಯಾಗಿದ್ದು, ಪಾಲಿ ಆರನೇ ಆರೋಪಿಯಾಗಿದ್ದಾರೆ ಎಂದು ಐಪಿಸಿ ಸೆಕ್ಷನ್ 376 ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿರುವ ಉನ್ನೂಕಲ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳೆಯ ಪ್ರಕಾರ, ಈ ಘಟನೆಯು ಒಂದು ವರ್ಷದ ಹಿಂದೆ ದುಬೈನಲ್ಲಿ ಸಂಭವಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ. ಆದರೆ ಹೆಚ್ಚಿನ ವಿವರಗಳನ್ನು ನೀಡಲು ಅವರು ನಿರಾಕರಿಸಿದ್ದಾರೆ.

ನಿವಿನ್ ಪೌಲಿ
ಗಾಯಕಿ ಸುಚಿತ್ರಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಮಲಯಾಳಂ ನಟಿ ರೀಮಾ

ನ್ಯಾಯಮೂರ್ತಿ ಕೆ ಹೇಮಾ ಸಮಿತಿಯ ವರದಿ ಬಹಿರಂಗವಾದ ನಂತರ ಹಲವು ನಟಿಯರಿಂದ ಲೈಂಗಿಕ ಕಿರುಕುಳ ಅಥವಾ ಅತ್ಯಾಚಾರದ ಆರೋಪಗಳನ್ನು ಎದುರಿಸುತ್ತಿರುವ ಅನೇಕ ನಟರು ಮತ್ತು ನಿರ್ದೇಶಕರಲ್ಲಿ ಪಾಲಿ ಕೂಡ ಒಬ್ಬರು.

ಮಲಯಾಳಂ ಚಿತ್ರರಂಗದಲ್ಲಿ ಹೀರೋಯಿನ್​ಗಳು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಹಾಗೂ ಶೋಷಣೆಗಳ ಬಗ್ಗೆ ಈ ನ್ಯಾಯಮೂರ್ತಿ ಕೆ ಹೇಮಾ ಸಮಿತಿ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com