ಯೂಟ್ಯೂಬ್ ಚಾನೆಲ್ ಸಂದರ್ಶನವೊಂದರಲ್ಲಿ ತಮ್ಮ ಮನೆಯಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಾರೆ ಎಂದು ಆರೋಪಿಸಿದ್ದ ತಮಿಳು ಗಾಯಕಿ ಸುಚಿತ್ರಾ ಕಾರ್ತಿಕ್ ಅವರ ವಿರುದ್ಧ ಮಲಯಾಳಂ ನಟಿ ರಿಮಾ ಕಲ್ಲಿಂಗಲ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
"ಅವರ ಹೇಳಿಕೆಗಳು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಬರದಿದ್ದರೂ, ನನ್ನ ಬಗ್ಗೆ ಆಧಾರರಹಿತ ಹೇಳಿಕೆ ನೀಡಿದ್ದಾರೆ. ಅಂತಹ ಘಟನೆ ಎಂದಿಗೂ ನಡೆದಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಮತ್ತು ಈ ಬಗ್ಗೆ ನಾನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ" ಎಂದು ರೀಮಾ ಕಲ್ಲಿಂಗಲ್ ಅವರು ಮಂಗಳವಾರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
"ನಾನು ವಿಶೇಷ ತನಿಖಾ ತಂಡಕ್ಕೆ ದೂರು ಸಲ್ಲಿಸಿದ್ದೇನೆ ಮತ್ತು ಮಾನನಷ್ಟ ನೋಟಿಸ್ ಕಳುಹಿಸಿದ್ದೇನೆ" ಎಂದು ರೀಮಾ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ವುಮೆನ್ ಇನ್ ಸಿನಿಮಾ ಕಲೆಕ್ಟಿವ್(ಡಬ್ಲ್ಯುಸಿಸಿ)ಯ ಸಂಸ್ಥಾಪಕ ಸದಸ್ಯೆಯೂ ಆಗಿರುವ ರೀಮಾ ಅವರು, ಸಂದರ್ಶನದಲ್ಲಿ ತಮ್ಮನ್ನು ಮತ್ತು ನಿರ್ದೇಶಕ ಆಶಿಕ್ ಅಬು ಅವರನ್ನು ಗಾಯಕಿ ಅವಮಾನಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
"ತಮಿಳು ಮಾಧ್ಯಮವೊಂದಕ್ಕೆ ನೀಡಿದ 30 ನಿಮಿಷಗಳ ಸಂದರ್ಶನದಲ್ಲಿ, ಗಾಯಕಿ ಸುಚಿತ್ರಾ ಅವರು, ರೀಮಾ ಕಲ್ಲಿಂಗಲ್ ಅವರ ಮನೆಯಲ್ಲಿ ಡ್ರಗ್ಸ್ ಪಾರ್ಟಿಗಳು ನಡೆಯುತ್ತಿದ್ದವು. ಅಲ್ಲಿ ಹುಡುಗಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗುತ್ತಿತ್ತು ಎಂದು ಆರೋಪಿಸಿದ್ದರು.
Advertisement