'ಕ್ಯಾರವಾನ್ ಗಳಲ್ಲಿ ಹಿಡನ್ ಕ್ಯಾಮರಾ, ಲೈಂಗಿಕ ದೌರ್ಜನ್ಯ': ಮಲಯಾಳಂ ಚಿತ್ರರಂಗದ ಭಯಾನಕ ಮುಖ ತೆರೆದಿಟ್ಟ ಹಿರಿಯ ನಟಿಯರು...

ಸಿನಿಮಾ ಸೆಟ್ ನಲ್ಲಿ ಪುರುಷರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಈ ರೆಕಾರ್ಡಿಂಗ್‌ಗಳನ್ನು ವೀಕ್ಷಿಸುತ್ತಿದ್ದುದನ್ನು ನಾನು ಸ್ವತಃ ನೋಡಿದ್ದೇನೆ ಎಂದು ಕೂಡ ಹೇಳಿದ್ದಾರೆ. ಇದನ್ನು ಕಣ್ಣಾರೆ ಕಂಡು ಭಯಕ್ಕೊಳಗಾಗಿ ನಾನು ಹೊಟೇಲ್ ರೂಂನಲ್ಲಿ ಉಳಿದುಕೊಳ್ಳುವುದು ಮತ್ತು ಕಾರವಾನ್ ಬಳಸುವುದನ್ನು ನಿಲ್ಲಿಸಿದೆ ಎಂದು ರಾಧಿಕಾ ಶರತ್ ಕುಮಾರ್ ಹೇಳಿದ್ದಾರೆ.
ಹಿರಿಯ ನಟಿಯರಾದ ರಾಧಿಕಾ ಶರತ್‌ಕುಮಾರ್ ಮತ್ತು ಮಾಲಾ ಪಾರ್ವತಿ
ಹಿರಿಯ ನಟಿಯರಾದ ರಾಧಿಕಾ ಶರತ್‌ಕುಮಾರ್ ಮತ್ತು ಮಾಲಾ ಪಾರ್ವತಿ
Updated on

ತಿರುವನಂತಪುರ: ಹೇಮಾ ಸಮಿತಿಯ ವರದಿಯು ಮಲಯಾಳಂ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದೆ. ಪ್ರತಿದಿನ ಅಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಹೊಸ ಯಾತನಾಮಯ ಸಂಗತಿಗಳು ಹೊರಬರುತ್ತಿವೆ. ಈ ಸಂದರ್ಭದಲ್ಲಿ ಮಲಯಾಳಂ ಚಿತ್ರದ ಸೆಟ್‌ನಲ್ಲಿ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡ ಬಹುಭಾಷಾ ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಅವರು ಈ ಕುರಿತು ಮಾತನಾಡಿದ್ದಾರೆ.

ರಾಧಿಕಾ ಶರತ್ ಕುಮಾರ್ ಹೇಳುವುದೇನು? ಚಿತ್ರದಲ್ಲಿನ ನಗ್ನ ದೃಶ್ಯಗಳನ್ನು ರೆಕಾರ್ಡ್ ಮಾಡಲು ನಾಯಕಿಯರ ಕಾರವಾನ್‌ಗಳಲ್ಲಿ ಹಿಡನ್ ಕ್ಯಾಮೆರಾಗಳನ್ನು ಇರಿಸಲಾಗಿತ್ತು ಎಂಬ ಭಯಾನಕ ಸಂಗತಿಯನ್ನು ಹೊರಹಾಕಿದ್ದಾರೆ. ನಂತರ ಅದನ್ನು ಚಿತ್ರದಲ್ಲಿ ಭಾಗಿಯಾಗಿರುವ ಹಲವಾರು ಪುರುಷರ ಮಧ್ಯೆ ಹಂಚಿಕೆಯಾಗಿತ್ತು. ರೆಕಾರ್ಡಿಂಗ್‌ಗಳನ್ನು ಪ್ರತ್ಯೇಕ ಫೋಲ್ಡರ್‌ಗಳಲ್ಲಿ ಸಂಗ್ರಹಿಸಲಾಗಿತ್ತು ಪ್ರತಿ ಫೋಲ್ಡರ್‌ಗೆ ಬೇರೆ ಬೇರೆ ನಟಿಯರ ಹೆಸರುಗಳನ್ನು ಲೇಬಲ್ ಮೂಲಕ ಸೂಚಿಸಲಾಗಿತ್ತು ಎಂಬ ಬೆಚ್ಚಿಬೀಳಿಸುವ ವಿಷಯ ತಿಳಿಸಿದ್ದಾರೆ.

ಸಿನಿಮಾ ಸೆಟ್ ನಲ್ಲಿ ಪುರುಷರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಈ ರೆಕಾರ್ಡಿಂಗ್‌ಗಳನ್ನು ವೀಕ್ಷಿಸುತ್ತಿದ್ದುದನ್ನು ನಾನು ಸ್ವತಃ ನೋಡಿದ್ದೇನೆ ಎಂದು ಕೂಡ ಹೇಳಿದ್ದಾರೆ. ನಂತರ ಅದನ್ನು ಆ ಚಿತ್ರದಲ್ಲಿ ತೊಡಗಿಕೊಂಡಿದ್ದ ಹಲವು ಪುರುಷರ ಮಧ್ಯೆ ವಿನಿಮಯವಾಗಿತ್ತಂತೆ. ಇದನ್ನು ಕಣ್ಣಾರೆ ಕಂಡು ಭಯಕ್ಕೊಳಗಾಗಿ ನಾನು ಹೊಟೇಲ್ ರೂಂನಲ್ಲಿ ಉಳಿದುಕೊಳ್ಳುವುದು ಮತ್ತು ಕಾರವಾನ್ ಬಳಸುವುದನ್ನು ನಿಲ್ಲಿಸಿದೆ ಎಂದು ರಾಧಿಕಾ ಶರತ್ ಕುಮಾರ್ ಹೇಳಿರುವುದಾಗಿ ಏಷ್ಯಾನೆಟ್ ನ್ಯೂಸ್ ವರದಿ ಮಾಡಿದೆ.

ಹಾಗಾದರೆ ಆ ಚಿತ್ರ ಯಾವುದು ಎಂದು ಕೇಳಿದಾಗ ಬೇಡ, ಆ ಚಿತ್ರದಲ್ಲಿ ತೊಡಗಿಸಿಕೊಂಡವರಿಗೆ ಮುಜುಗರವಾಗುವುದು ಬೇಡ ಎಂದು ಹೆಸರು ಹೇಳುವುದಿಲ್ಲ ಎಂದಿದ್ದಾರೆ.

ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಹಲವು ಮಹಿಳೆಯರು ನನ್ನ ಬಳಿ ಬಂದು ಕೇಳಿಕೊಂಡಿದ್ದರು, ಇಂತಹ ಕೆಟ್ಟ ವಾತಾವರಣ ಕೇವಲ ಕೇರಳದಲ್ಲಿ ಮಾತ್ರವಲ್ಲ ಎಲ್ಲಾ ಭಾಷೆಯ ಚಿತ್ರರಂಗದಲ್ಲಿದೆ ಎನ್ನುತ್ತಾರೆ ರಾಧಿಕಾ.

ಹೇಮಾ ಸಮಿತಿ ವರದಿ ಬಿಡುಗಡೆಯನ್ನು ಸ್ವಾಗತಿಸಿದ ಅವರು, ವರದಿಯಲ್ಲಿ ಉಲ್ಲೇಖಿಸಿರುವಂತಹ ಅನುಭವಗಳು ತನಗೂ ಆಗಿವೆ ಎಂದಿದ್ದಾರೆ.

ನಾನು ಚಿತ್ರರಂಗದಲ್ಲಿ 40 ವರ್ಷಕ್ಕೂ ಹೆಚ್ಚು ವರ್ಷಗಳಿಂದ ಇದ್ದೇನೆ. ಹೌದು ನನ್ನೊಂದಿಗೂ ಪುರುಷರು ಅನುಚಿತವಾಗಿ ವರ್ತಿಸಿದ ಪ್ರಸಂಗಗಳು ನಡೆದಿವೆ. ಲೈಂಗಿಕ ದೌರ್ಜನ್ಯ ಮತ್ತು ತಾರತಮ್ಯದ ವಿಷಯ ಬಂದಾಗ ಚಿತ್ರೋದ್ಯಮದಲ್ಲಿರುವ ಪುರುಷರು ಮೌನವಾಗಿರುವುದೇಕೆ ಎಂದು ಕೂಡ ಅವರು ಪ್ರಶ್ನಿಸಿದ್ದಾರೆ.

ಯಾವ ಪುರುಷನೂ ಬಾಯಿ ಬಿಡುತ್ತಿಲ್ಲ, ತಪ್ಪೆಲ್ಲ ಹೆಣ್ಣಿನದ್ದೇ ಎಂದು ಮಹಿಳೆಯರ ಮೇಲೆ ಹಾಕಿ ಜಾರಿಕೊಳ್ಳುತ್ತಾರೆ, ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.

ಈ ಮಧ್ಯೆ, ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯದ ದೂರುಗಳ ಬಗ್ಗೆ ತನಿಖೆ ನಡೆಸಲು ಕೇರಳ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡವು ಅವರು ರಾಧಿಕಾ ಹೇಳಿಕೆಯನ್ನು ದಾಖಲಿಸಿಕೊಂಡು ಮುಂದಿನ ವಿಚಾರಣೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದೆ.

2010 ರ ಮಲಯಾಳಂ ಚಲನಚಿತ್ರ ಅಪೂರ್ವರಾಗಂ ಚಿತ್ರೀಕರಣದ ವೇಳೆ ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಮತ್ತೊಬ್ಬ ಹಿರಿಯ ನಟಿ ಮಾಲಾ ಪಾರ್ವತಿ ಕೂಡ ಮಾತನಾಡಿದ್ದಾರೆ.

ಹಿರಿಯ ನಟಿಯರಾದ ರಾಧಿಕಾ ಶರತ್‌ಕುಮಾರ್ ಮತ್ತು ಮಾಲಾ ಪಾರ್ವತಿ
MeToo: ನಾನು ಅದನ್ನು Audition ಎಂದುಕೊಂಡಿದ್ದೆ: ಲೈಂಗಿಕ ದೌರ್ಜನ್ಯದ ಕರಾಳ ನೆನಪು ಬಿಚ್ಚಿಟ್ಟ ನಟ!

ಚಿತ್ರದಲ್ಲಿ ನನ್ನ ಮಗಳಾಗಿದ್ದ ನ್ಯಾನ್ಸಿ (ನಿತ್ಯಾ ಮೆನನ್) ತಮಾಷೆಯಾಗಿ ನನ್ನ ಸುತ್ತಲೂ ಓಡಿ ನನ್ನ ಸೀರೆಯನ್ನು ಎಳೆಯುವ ದೃಶ್ಯವಿತ್ತು. ನನ್ನ ಗಂಡನ ಪಾತ್ರವನ್ನು ನಿರ್ವಹಿಸಿದ ವ್ಯಕ್ತಿ ನ್ಯಾನ್ಸಿಯನ್ನು ತಮಾಷೆಯಾಗಿ ಸ್ಪರ್ಶಿಸಬೇಕಿತ್ತು. ಚಿತ್ರೀಕರಣ ಸಮಯದಲ್ಲಿ ಅವರು ನ್ಯಾನ್ಸಿಯನ್ನು ಸ್ಪರ್ಶಿಸಲು ಬಲಗೈಯನ್ನು ಮುಂದೆ ಚಾಚಿದರು, ಎಡಗೈಯಿಂದ ನನ್ನನ್ನು ಬಲವಾಗಿ ಹಿಡಿದರು ಎಂದು ಪಾರ್ವತಿ ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಆಗ ನನಗೆ ಬಹಳ ನೋವಾಗಿತ್ತು, ಆದರೆ ತಕ್ಷಣಕ್ಕೆ ಪ್ರತಿಕ್ರಿಯಿಸಲು, ವಿರೋಧ ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ. ಅವರ ಕೈಗಳನ್ನು ನನ್ನ ಸೊಂಟದಿಂದ ಹೊರಗಿಡಲು ನಿರ್ದೇಶಕ ಸಿಬಿ ಮಲಾಯಿಲ್ ಅವರು ರಿಟೇಕ್ ತೆಗೆದುಕೊಂಡರು ಎಂದು ನೆನಪಿಸಿಕೊಂಡರು. ನಾನು ಆ ಸಂದರ್ಭದಲ್ಲಿ ಆ ದೃಶ್ಯ ಮಾಡಲು 16 ಬಾರಿ ರಿಟೇಕ್ ತೆಗೆದುಕೊಳ್ಳಬೇಕಾಯಿತು. ಚಿತ್ರದ ಚಿತ್ರೀಕರಣ ಮುಗಿದ ಮೇಲೆ ಎಷ್ಟು ನೊಂದುಕೊಂಡಿದ್ದೆ ಎಂದರೆ 6 ತಿಂಗಳು ಶೂಟಿಂಗ್ ನಿಂದ ಬ್ರೇಕ್ ಪಡೆದುಕೊಂಡಿದ್ದೆ ಎನ್ನುತ್ತಾರೆ.

ಕೊನೆಗೆ ನನ್ನ ಪತಿಯೇ ನನಗೆ ಧೈರ್ಯ ನೀಡಿ ನೊಂದುಕೊಳ್ಳಬೇಡ, ಇಂತಹವರ ವಿರುದ್ಧ ಧೈರ್ಯದಿಂದ ಹೋರಾಡಬೇಕು ಎಂದು ಸ್ಥೈರ್ಯ ತುಂಬಿ ಚಿತ್ರದ ಶೂಟಿಂಗ್ ಗೆ ಕಳುಹಿಸಿದರು ಎನ್ನುತ್ತಾರೆ ಪಾರ್ವತಿ.

ಮಲಯಾಳಂ ಚಲನಚಿತ್ರೋದ್ಯಮದಲ್ಲಿ ವ್ಯವಸ್ಥಿತ ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯರ ವಿರುದ್ಧದ ತಾರತಮ್ಯವಾಗುತ್ತಿದೆ ಎಂದು ಹೇಮಾ ಸಮಿತಿಯ ವರದಿಯು ಹೇಳಿದ್ದು, ಅದು ಬಿಡುಗಡೆಯಾದಾಗಿನಿಂದ ಹಲವಾರು ಮಹಿಳೆಯರು ಹೊರಬಂದು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮಹಿಳೆಯರ ದೂರಿನ ಮೇಲೆ 18 ಪ್ರಕರಣಗಳು ದಾಖಲಾಗಿದ್ದು, ಮಲಯಾಳಂ ಚಿತ್ರರಂಗದ ಹಲವಾರು ಖ್ಯಾತ ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು ಮತ್ತು ನಟರ ವಿರುದ್ಧ ದೂರು ದಾಖಲಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com