MeToo: ನಾನು ಅದನ್ನು Audition ಎಂದುಕೊಂಡಿದ್ದೆ: ಲೈಂಗಿಕ ದೌರ್ಜನ್ಯದ ಕರಾಳ ನೆನಪು ಬಿಚ್ಚಿಟ್ಟ ನಟ!

ಹೊಸ ಪ್ರಕರಣವೊಂದರಲ್ಲಿ ನಿರ್ದೇಶಕ ರಂಜಿತ್ ವಿರುದ್ಧ ಉದಯೋನ್ಮುಖ ನಟನೋರ್ವ 2012 ರಲ್ಲಿ ತಾನು ಎದುರಿಸಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ.
Film Maker Ranjith
ಚಿತ್ರ ನಿರ್ದೇಶಕ ರಂಜಿತ್ online desk
Updated on

ತಿರುವನಂತಪುರಂ: ಮಲಯಾಳಂ ಚಿತ್ರರಂಗದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ದೇಶಾದ್ಯಂತ ಸುದ್ದಿಯಲ್ಲಿದೆ.

ಹಿರಿಯ ನಿರ್ದೇಶಕರು, ನಿರ್ಮಾಪಕರು, ನಟರಿಂದ ಎದುರಾದ ದೌರ್ಜನ್ಯಗಳನ್ನು ಕಲಾವಿದೆಯರು ಬಹಿರಂಗಪಡಿಸಿದ್ದಾರೆ. ಮಾಲಿವುಡ್ ನ ನಿರ್ದೇಶನ ರಂಜಿತ್ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದು, ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ. ಕೇವಲ ನಟಿಯರಷ್ಟೇ ಅಲ್ಲದೇ ಯುವ ನಟರಿಗೂ ಲೈಂಗಿಕ ದೌರ್ಜನ್ಯದ ಕರಾಳ ಅನುಭವಗಳಾಗಿವೆ.

ಹೊಸ ಪ್ರಕರಣವೊಂದರಲ್ಲಿ ನಿರ್ದೇಶಕ ರಂಜಿತ್ ವಿರುದ್ಧ ಉದಯೋನ್ಮುಖ ನಟನೋರ್ವ 2012 ರಲ್ಲಿ ತಾನು ಎದುರಿಸಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಕೊಚ್ಚಿ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ, ಆಡಿಷನ್ ಗಾಗಿ ಬೆಂಗಳೂರಿನ ಹೊಟೆಲ್ ಒಂದಕ್ಕೆ ಬರುವಂತೆ ಯುವ ನಟನಿಗೆ ಸೂಚಿಸಿದ್ದರು. ಅದರಂತೆ ಆತ ಹೊಟೆಲ್ ಗೆ ತೆರಳಿದ್ದ. ಅಲ್ಲಿ ನಡೆದ ಘಟನೆಗಳನ್ನು ವಿವರಿಸಿರುವ ನಟ, ಅಲ್ಲಿ ನನ್ನ ಬಟ್ಟೆ ತೆಗೆಸಿದ್ದರು ಹಾಗೂ ದೌರ್ಜನ್ಯ ಎಸಗಿದ್ದರು. ಅದನ್ನು ಆಡಿಷನ್ ನ ಭಾಗ ಎಂದೇ ಭಾವಿಸಿದ್ದೆ. ಮರು ದಿನ ಬೆಳಿಗ್ಗೆ ನನಗೆ ಹಣವನ್ನೂ ನೀಡಿದ್ದರು ಎಂದು ಹೇಳಿದ್ದಾರೆ.

ಇದು ರಂಜಿತ್ ವಿರುದ್ಧದ ಎರಡನೇ ಲೈಂಗಿಕ ಆರೋಪ ಪ್ರಕರಣವಾಗಿದೆ. ಈ ಹಿಂದೆ ಬೆಂಗಾಲಿ ನಟರೊಬ್ಬರು ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ದೂರು ದಾಖಲಿಸಿದ್ದರು. ಆಕೆಯ ದೂರಿನ ಮೇರೆಗೆ ಕೊಚ್ಚಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಕೊಚ್ಚಿಯ ಹೋಟೆಲ್‌ವೊಂದರಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ನಟಿ ಆರೋಪಿಸಿದ್ದಾರೆ.

ರಂಜಿತ್ ಆರೋಪವನ್ನು ನಿರಾಕರಿಸಿದ್ದಾರೆ. ಮಿತ್ರಾ ಅವರನ್ನು 'ಪಾಲೇರಿ ಮಾಣಿಕ್ಯಂ' ಚಿತ್ರದ ಆಡಿಷನ್‌ಗೆ ಕರೆದರು ಎಂದು ವಿವರಿಸಿದರು, ಆದರೆ ಅವರು ಈ ಪಾತ್ರಕ್ಕೆ ಸೂಕ್ತವಲ್ಲ ಎಂದು ನಿರ್ಧರಿಸಿ ವಾಪಸ್ ಕಳುಹಿಸಿದ್ದರು.

Film Maker Ranjith
Mollywood #MeToo ಬಗ್ಗೆ ಮಾತನಾಡಿದ ಶಶಿ ತರೂರ್ ಹೇಳಿದ್ದೇನೆಂದರೆ...

ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿದ್ದ ರಂಜಿತ್ ಅವರು ಪಿಣರಾಯಿ ವಿಜಯನ್ ಸರ್ಕಾರದ ಮೇಲೆ ವಿರೋಧ ಪಕ್ಷಗಳಿಂದ ಭಾರಿ ಒತ್ತಡದ ಹಿನ್ನೆಲೆಯಲ್ಲಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com