ಸುಲ್ತಾನ್ ಪುರ: ಉತ್ತರ ಪ್ರದೇಶದ ಸುಲ್ತಾನ್ ಪುರ ಬಳಿ ಮಂಗಳವಾರ ನಡೆದ ಹೊಡೆದಾಟದ ವೇಳೆ ಬಿಜೆಪಿ ಮುಖಂಡನ 23 ವರ್ಷದ ಸೋದರಳಿಯನನ್ನು ಮತ್ತೊಬ್ಬ ಯುವಕ ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಜೆಪಿ ಮಂಡಲ ಅಧ್ಯಕ್ಷ ರಾಮ್ ಅಭಿಲಾಖ್ ಸಿಂಗ್ ಅವರ ಸೋದರಳಿಯ ಅಭಯ್ ಪ್ರತಾಪ್ ಸಿಂಗ್ ಗುಂಡೇಟಿಗೆ ಬಲಿಯಾದ ಯುವಕ.
ಕೋಟ್ವಾಲಿ ನಗರದ ಪಯಾಗಿಪುರ ಪ್ರದೇಶದ ರೆಸ್ಟೋರೆಂಟ್‌ನ ಹೊರಗೆ ಘಟನೆ ನಡೆದಿದ್ದು, ಕ್ಷುಲಕ ವಿವಾದಕ್ಕೆ ಇಬ್ಬರು ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕೆಲವು ಕಾಲ ಗಲಾಟೆ ನಡೆದಿದ್ದು, ಒಬ್ಬ ಯುವಕ ಅಭಿಲಾಸ್ ಸಿಂಗ್ ಮೇಲೆ ಗುಂಡು ಹಾರಿಸಿದ್ದಾನೆ.
ನಂತರ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಗಾಯಾಳುವನ್ನು ಆತನ ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ವೈಯಕ್ತಿಕ ವಿವಾದದಿಂದ ಈ ಘಟನೆ ನಡೆದಿದ್ದು, ಶಂಕಿತನನ್ನು ಬಂಧಿಸಿದ ನಿಖರ ಕಾರಣ ತಿಳಿದುಬರಲಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸೋಮೆನ್ ಬರ್ಮಾ ತಿಳಿಸಿದ್ದಾರೆ.
Advertisement