2027 ರೊಳಗೆ ದೇಶದ 11 ಕೋಟಿ ರೈತರಿಗೆ ಆಧಾರ್ ನಂತೆ 'ಡಿಜಿಟಲ್ ಐಡಿ' ಕಾರ್ಡ್

2024-25 ರಲ್ಲಿ 400 ಜಿಲ್ಲೆಗಳು ಮತ್ತು 2025-26 ರಲ್ಲಿ ಎಲ್ಲಾ ಜಿಲ್ಲೆಗಳನ್ನು ಒಳಗೊಳ್ಳುವ 'ಡಿಜಿಟಲ್ ಬೆಳೆ ಸಮೀಕ್ಷೆಯನ್ನು ಎರಡು ವರ್ಷಗಳಲ್ಲಿ ರಾಷ್ಟ್ರವ್ಯಾಪಿ ಪ್ರಾರಂಭಿಸಲು ಸರ್ಕಾರ ಯೋಜಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ರೈತ ಸಮುದಾಯವನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2027ರೊಳಗೆ 11 ಕೋಟಿ ರೈತರಿಗೆ 'ಡಿಜಿಟಲ್‌ ಐಡಿ' ಕಾರ್ಡ್ ಸೃಷ್ಟಿಸುವ ಗುರಿ ಹೊಂದಿದೆ. ಇದು ಆಧಾರ್ ಕಾರ್ಡ್‌ನಂತೆಯೇ ಇರುತ್ತದೆ.

ರೈತರಿಗೆ ಪ್ರಮುಖ ಸೇವೆಗಳು ಮತ್ತು ಯೋಜನೆಗಳನ್ನು ತಲುಪಿಸುವ ರೈತ ಕೇಂದ್ರಿತ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ)ದಂತೆ ರಚಿಸಿರುವ ಅಗ್ರಿಸ್ಟಾಕ್ ಉಪಕ್ರಮದ ಭಾಗವಾಗಿರುವುದು ಇದರ ಗುರಿಯಾಗಿದೆ.

ಆಧಾರ್ ಕಾರ್ಡ್‌ನಂತೆಯೇ ರೈತರಿಗೆ 'ರೈತ ಗುರುತಿನ ಚೀಟಿ ಪರಿಚಯಿಸುವುದು ಅಗ್ರಿಸ್ಟ್ಯಾಕ್‌ನ ಪ್ರಮುಖ ವೈಶಿಷ್ಟ್ಯವಾಗಿದೆ. 2024-25ರ ಹಣಕಾಸು ವರ್ಷದಲ್ಲಿ 6 ಕೋಟಿ, 2025-26ರ ಹಣಕಾಸು ವರ್ಷದಲ್ಲಿ 3 ಕೋಟಿ ಮತ್ತು 2026-27ನೇ ಸಾಲಿನಲ್ಲಿ 2 ಕೋಟಿ ಡಿಜಿಟಲ್ ಐಡಿಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಸರ್ಕಾರ ಹೇಳಿದೆ.

"ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶಗಳಿಂದ ರಚಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಈ ಗುರುತಿನ ಚೀಟಿಗಳಲ್ಲಿ ಭೂ ದಾಖಲೆಗಳು, ಜಾನುವಾರುಗಳ ಮಾಲೀಕತ್ವ, ಬಿತ್ತಿದ ಬೆಳೆಗಳು ಮತ್ತು ಪಡೆದ ಪ್ರಯೋಜನಗಳು ಸೇರಿದಂತೆ ವಿವಿಧ ರೈತ-ಸಂಬಂಧಿತ ಡೇಟಾವನ್ನು ಲಿಂಕ್ ಮಾಡಲಾಗುತ್ತದೆ" ಎಂದು ಸರ್ಕಾರ ಹೇಳಿದೆ. 2024-25 ರಲ್ಲಿ 400 ಜಿಲ್ಲೆಗಳು ಮತ್ತು 2025-26 ರಲ್ಲಿ ಎಲ್ಲಾ ಜಿಲ್ಲೆಗಳನ್ನು ಒಳಗೊಳ್ಳುವ 'ಡಿಜಿಟಲ್ ಬೆಳೆ ಸಮೀಕ್ಷೆಯನ್ನು ಎರಡು ವರ್ಷಗಳಲ್ಲಿ ರಾಷ್ಟ್ರವ್ಯಾಪಿ ಪ್ರಾರಂಭಿಸಲು ಸರ್ಕಾರ ಯೋಜಿಸಿದೆ.

ಸಾಂದರ್ಭಿಕ ಚಿತ್ರ
ದೇಶದ ರೈತರಿಗೆ ಘೋರ ಅವಮಾನ: ಕಂಗನಾ ಹೇಳಿಕೆಗೆ ಬಿಜೆಪಿ ವಿರುದ್ಧ ರಾಹುಲ್ ವಾಗ್ದಾಳಿ

ಕೃಷಿ ಸಚಿವಾಲಯದ ಪ್ರಕಾರ, ಡಿಜಿಟಲ್ ಕ್ರಾಂತಿಯು ಸುರಕ್ಷಿತ ಪಾವತಿಗಳು ಮತ್ತು ವಹಿವಾಟುಗಳನ್ನು ರಚಿಸುವ ಮೂಲಕ ಇತ್ತೀಚಿನ ವರ್ಷಗಳಲ್ಲಿ ಆಡಳಿತ ಮತ್ತು ಸೇವಾ ವಿತರಣೆಯನ್ನು ಗಣನೀಯವಾಗಿ ಪರಿವರ್ತಿಸಿದೆ. ಇದು ಹಣಕಾಸು, ಆರೋಗ್ಯ, ಶಿಕ್ಷಣ, ಮತ್ತು ಚಿಲ್ಲರೆ ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಡಿಜಿಟಲ್ ಪೂರಕ ಪರಿಸರಕ್ಕೆ ಹಾದಿ ಸುಗಮಗೊಳಿಸಿದೆ. ಕೃಷಿ ಕ್ಷೇತ್ರದಲ್ಲಿ ಇದೇ ರೀತಿಯ ಪರಿವರ್ತನೆಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 2,817 ಕೋಟಿ ರೂಪಾಯಿಗಳ ಗಣನೀಯ ಹಣಕಾಸಿನ ವೆಚ್ಚದೊಂದಿಗೆ 'ಡಿಜಿಟಲ್ ಅಗ್ರಿಕಲ್ಚರ್ ಮಿಷನ್' ಗೆ ಅನುಮೋದನೆ ನೀಡಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಹಭಾಗಿತ್ವದ ಮೂಲಕ ಅಗ್ರಿಸ್ಟಾಕ್ ಅನುಷ್ಟಾನ ಪ್ರಗತಿಯಲ್ಲಿದ್ದು, 19 ರಾಜ್ಯಗಳು ಕೃಷಿ ಸಚಿವಾಲಯದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com