ನವದೆಹಲಿ: ದೇಶದಲ್ಲಿ ಅತ್ಯಂತ ಹೆಚ್ಚಿನ ತೆರಿಗೆ ಕಟ್ಟುವ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆಯಾಗಿದೆ. ಫಾರ್ಚೂನ್ ಇಂಡಿಯಾ ಮ್ಯಾಗಜಿನ್ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ 2023-24ರಲ್ಲಿ ರೂ.92 ಕೋಟಿ ಮುಂಗಡ ತೆರಿಗೆ ಪಾವತಿಯೊಂದಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಟಾಪರ್ ಆಗಿದ್ದು, ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಎರಡನೇ ಸ್ಥಾನದಲ್ಲಿದ್ದಾರೆ.
ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ. ದೇಶದ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ರೂ. 66 ಕೋಟಿ ಅಂದಾಜು ತೆರಿಗೆ ಪಾವತಿಯೊಂದಿಗೆ ಅತ್ಯಂತ ಹೆಚ್ಚಿನ ತೆರಿಗೆ ಪಾವತಿದಾರರಾಗಿದ್ದಾರೆ ಎಂದು ಫಾರ್ಚೂನ್ ಇಂಡಿಯಾ ಹೇಳಿದೆ.

ನಟರಾದ ಮೋಹನ್ ಲಾಲ್ ಮತ್ತು ಅಲ್ಲು ಅರ್ಜನ್ ರೂ. 14 ಕೋಟಿ, ಕಿಯಾರಾ ಅಡ್ವಾಣಿ ರೂ.12 ಕೋಟಿ, ನಟಿ ಕತ್ರಿನಾ ಕೈಫ್, ಪಂಕಜ್ ತ್ರಿಪಾಠಿ 11 ಕೋಟಿ, ಅಮಿರ್ ಖಾನ್ ರೂ.10 ಕೋಟಿ ತೆರಿಗೆ ಪಾವತಿಸಿದ್ದಾರೆ. ಇನ್ನೂ ಕ್ರಿಕೆಟಿಗರಲ್ಲಿ ಮಹೇಂದ್ರ ಸಿಂಗ್ ಧೋನಿ ರೂ. 38 ಕೋಟಿ, ಸಚಿನ್ ತೆಂಡೊಲ್ಕರ್ ರೂ.28 ಕೋಟಿ, ಸೌರವ್ ಗಂಗೂಲಿ ರೂ.23 ಕೋಟಿ, ಹಾರ್ದಿಕ್ ಪಾಂಡ್ಯ ರೂ.13 ಕೋಟಿ, ರಿಷಭ್ ಪಂತ್ ರೂ.10 ಕೋಟಿ ತೆರಿಗೆ ಪಾವತಿಸಿರುವುದಾಗಿ ಫಾರ್ಚೂನ್ ಇಂಡಿಯಾ ಹೇಳಿದೆ.
Advertisement