ನವದೆಹಲಿ: ನವಿಲು ಕೂಗುವಾಗ ಅದರ ಬಾಯಲ್ಲಿ ಬೆಂಕಿ ಬರುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಪುರಾಣ, ಸಿನಿಮಾ, ಕಥೆ, ಕಾರ್ಟೂನ್ ಗಳಲ್ಲಿ ಡ್ರ್ಯಾಗನ್, ಡೈನೋಸಾರ್ ನಂತಹ ಪ್ರಾಣಿಗಳು ಬೆಂಕಿ ಉಗುಳುವುದನ್ನು ನೋಡಿದ್ದೇವೆ. ಇದು ನಿಜವೋ ಸುಳ್ಳೋ ಎಂಬುದು ಸ್ಪಷ್ಟವಾಗಿಲ್ಲವಾದರೂ, ಈ ಪ್ರಾಣಿಗಳ ಅಸ್ತಿತ್ವದ ಕುರಿತು ಈಗಲೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಏತನ್ಮಧ್ಯೆ ಇದೇ ರೀತಿ ನವಿಲೊಂದು ಬಾಯಲ್ಲಿ ಬೆಂಕಿ ಉಗುಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿದೆ.
ವಿಡಿಯೋದಲ್ಲಿರುವಂತೆ ನವಿಲು ಮೇಲಕ್ಕೆ ನೋಡಿ ಜೋರಾಗಿ ಕೂಗುತ್ತದೆ, ಈ ವೇಳೆ ಅದರ ಬಾಯಿಯಿಂದ ಬೆಂಕಿ ಹೊರಬರುತ್ತದೆ.
ಸೂರ್ಯನ ಬೆಳಕಿನ ಮ್ಯಾಜಿಕ್
ಆದರೆ, ನವಿಲು ವಾಸ್ತವವಾಗಿ ಬೆಂಕಿಯನ್ನು ಹೊರಸೂಸುವುದಿಲ್ಲ. ಅದು ಕಿರುಚಿದಾಗ ಸೂರ್ಯನ ಬೆಳಕಿನಿಂದ ಉಂಟಾದ ಪ್ರತಿಫಲನಗಳು ಬೆಂಕಿಯಂತೆ ಕಾಣುತ್ತವೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ನಾವು ಉಸಿರಾಡಿದಾಗ ಬಾಯಿಂದ ಹೊಗೆ ಬರುತ್ತದೆ. ಇದೇ ರೀತಿಯ ನವಿಲಿನ ಶ್ವಾಸ ಮತ್ತು ಸೂರ್ಯ ಬೆಳಕು ನಮಗೆ ಬೆಂಕಿಯಂತೆ ಭಾಸವಾಗುತ್ತದೆ ಎಂದು ಹೇಳಲಾಗಿದೆ.
ಈ ವಿಡಿಯೋವನ್ನು 12 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.
Advertisement