Gujarat Floods: ಜನವಸತಿ ಪ್ರದೇಶಕ್ಕೆ ನುಗ್ಗಿದ ಮೊಸಳೆಗಳ ದ್ವಿಚಕ್ರ ವಾಹನದಲ್ಲಿ ಸಾಗಿಸಿ ರಕ್ಷಣೆ, Video Viral

ಗುಜರಾತ್‌ನಲ್ಲಿ ಪ್ರವಾಹದಿಂದಾಗಿ (Gujarat floods) ಬೀದಿಯಲ್ಲಿ ಬಿದ್ದಿದ್ದ ಮೊಸಳೆಗಳನ್ನು ರಕ್ಷಿಸುವ ಕೆಲಸಗಳು ಭರದಿಂದ ಸಾಗುತ್ತಿದ್ದು, ವಡೋದರಾದಲ್ಲಿ ಪ್ರವಾಹ ಪೀಡಿತ ಜನವಸತಿ ಪ್ರದೇಶದಲ್ಲಿ ಆತಂಕ ಸೃಷ್ಟಿಸಿರುವ ಮೊಸಳೆಗಳನ್ನು ತಂಡವೊಂದು ದ್ವಿಚಕ್ರ ವಾಹನದಲ್ಲಿ ಸುರಕ್ಷಿತ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ರಕ್ಷಣೆ ಮಾಡುತ್ತಿದೆ.
Vadodara Animal Rescuers Tripling On Scooter With A Crocodile
ಮೊಸಳೆಗಳ ರಕ್ಷಣೆ
Updated on

ವಡೋದರಾ: ಗುಜರಾತ್ ನಲ್ಲಿ ಸಂಭವಿಸಿದ ಭಾರಿ ಮತ್ತು ಪ್ರವಾಹದ ನಡುವೆ ನದಿಯಲ್ಲಿದ್ದ ಮೊಸಳೆಗಳು ಜನವಸತಿ ಪ್ರದೇಶಕ್ಕೆ ದಾಂಗುಡಿ ಇಡುತ್ತಿದ್ದು, ಇಂತಹ ಮೊಸಳೆಗಳನ್ನು ತಂಡವೊಂದು ದ್ವಿಚಕ್ರವಾಹನದಲ್ಲಿ ಸಾಗಿಸಿ ರಕ್ಷಿಸುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ಗುಜರಾತ್‌ನಲ್ಲಿ ಪ್ರವಾಹದಿಂದಾಗಿ (Gujarat floods) ಬೀದಿಯಲ್ಲಿ ಬಿದ್ದಿದ್ದ ಮೊಸಳೆಗಳನ್ನು ರಕ್ಷಿಸುವ ಕೆಲಸಗಳು ಭರದಿಂದ ಸಾಗುತ್ತಿದ್ದು, ವಡೋದರಾದಲ್ಲಿ ಪ್ರವಾಹ ಪೀಡಿತ ಜನವಸತಿ ಪ್ರದೇಶದಲ್ಲಿ ಆತಂಕ ಸೃಷ್ಟಿಸಿರುವ ಮೊಸಳೆಗಳನ್ನು ತಂಡವೊಂದು ದ್ವಿಚಕ್ರ ವಾಹನದಲ್ಲಿ ಸುರಕ್ಷಿತ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ರಕ್ಷಣೆ ಮಾಡುತ್ತಿದೆ.

ನಗರದಲ್ಲಿ ಯುವಕರಿಬ್ಬರು ಮೊಸಳೆಗಳನ್ನು (Crocodile) ಸ್ಕೂಟಿ ಮೇಲೆ ಹೊತ್ತೊಯ್ದು ರಕ್ಷಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಂದೀಪ್ ಠಾಕೂರ್ ಮತ್ತು ರಾಜ್ ಭಾವ್ಸಾರ್ ಎಂಬ ಯುವಕರಿಬ್ಬರು ಮೊಸಳೆಯನ್ನು ಸ್ಕೂಟಿ ಮೇಲೆ ಹೊತ್ತೊಯ್ದು ರಕ್ಷಿಸಿದ್ದಾರೆ. ಪ್ರವಾಹದಿಂದಾಗಿ ನೀರಿನಲ್ಲಿ ತೇಲಿಕೊಂಡು ಬಂದು ರಸ್ತೆಯಲ್ಲಿ ಬಿದ್ದಿದ್ದ ಮೊಸಳೆಯ ಬಾಯಿಗೆ ಪಟ್ಟಿ ಕಟ್ಟಿ, ಬಳಿಕ ಸ್ಕೂಟಿ ಮೇಲೆ ಅಡ್ಡಲಾಗಿ ಮಲಗಿಸಿಕೊಂಡು ಪ್ರಾಣಿ ರಕ್ಷಣಾ ಸ್ಥಳಕ್ಕೆ ಸಾಗಿಸಿದ್ದಾರೆ.

Vadodara Animal Rescuers Tripling On Scooter With A Crocodile
ಗುಜರಾತ್ ಪ್ರವಾಹ: 25 ಸಾವಿರಕ್ಕೂ ಅಧಿಕ ಮಂದಿ ರಕ್ಷಣೆ, ಸಾವಿನ ಸಂಖ್ಯೆ 73ಕ್ಕೆ ಏರಿಕೆ

ಪ್ರವಾಹದ ನೀರಿನಲ್ಲಿ ಊರಿಗೆ ನುಗ್ಗಿದ ಮೊಸಳೆಗಳು

ಪ್ರವಾಹದಿಂದಾಗಿ ವಡೋದರಾದ (Vadodara) ವಿಶ್ವಾಮಿತ್ರಿ ನದಿಯಿಂದ ಮೊಸಳೆಗಳ ದಂಡೇ ಊರಿಗೆ ನುಗ್ಗಿವೆ. ಮೊಸಳೆ ಜೊತೆಗೆ ಇನ್ನೂ ಹಲವಾರು ಪ್ರಾಣಿಗಳು ಪ್ರವಾಹದಿಂದ ತೊಂದರೆಗೆ ಸಿಲುಕಿವೆ. ಇದರಿಂದಾಗಿ ಪ್ರಾಣಿಗಳ ರಕ್ಷಣೆಗೆ ವಡೋದರಾದಲ್ಲಿ ಕೆಲವು ವಸತಿ ಪ್ರದೇಶಗಳನ್ನು ನಿಗದಿಪಡಿಸಲಾಗಿದೆ.

ಈವರೆಗೆ ನಗರದಲ್ಲಿ 40 ಮೊಸಳೆಗಳು ಕಂಡುಬಂದಿವೆ. ಈ ಪೈಕಿ 33 ಮೊಸಳೆಗಳನ್ನು ಸುರಕ್ಷಿತವಾಗಿ ನದಿಗೆ ಬಿಡಲಾಗಿದೆ. 5 ಮೊಸಳೆಗಳು ಪುನರ್ವಸತಿ ಕೇಂದ್ರದಲ್ಲಿವೆ. ಎರಡು ಮೊಸಳೆಗಳು ಅಪಘಾತದಲ್ಲಿ ಸಾವನ್ನಪ್ಪಿವೆ ಎಂದು ವಡೋದರಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಞೇಶ್ವರ್ ವ್ಯಾಸ್ ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆಯ ಜೊತೆ ಎನ್‌ಜಿಒ ತಂಡಗಳು ಕೂಡ ಪ್ರಾಣಿಗಳ ರಕ್ಷಣೆಯಲ್ಲಿ ತೊಡಗಿವೆ. ಹಾಗೆಯೇ ಪ್ರಾಣಿಗಳ ರಕ್ಷಣೆಗೆ ಸಹಾಯವಾಣಿ ತೆರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಂತೆಯೇ ಅರಣ್ಯ ಇಲಾಖೆಯು ನದಿಯ ಸಮೀಪವಿರುವ ವಸತಿ ಪ್ರದೇಶಗಳಿಂದ ಹಾವು ಮತ್ತು ಆಮೆಗಳನ್ನು ರಕ್ಷಿಸಿದೆ ಎಂದು ವಡೋದರಾ ರೇಂಜ್ ಫಾರೆಸ್ಟ್ ಆಫೀಸರ್ ಕರಣ್‌ಸಿನ್ಹ್ ರಜಪೂತ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com