ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಮೇಲೆ ಹಿಡಿತ ಸಾಧಿಸಲು ಮತ್ತು ಬಿಜೆಪಿ ಮೇಲೆ ದಾಳಿ ಮಾಡುವ ಪಿತ್ತೂರಿಯಿಂದ ಆಟದ ಪಾನ್ ನಂತೆ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ ಅವರನ್ನು ಕಾಂಗ್ರೆಸ್ ಬಳಸಿಕೊಂಡಿದೆ ಎಂದು ಡಬ್ಲ್ಯುಎಫ್‌ಐ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಶನಿವಾರ ಹೇಳಿದ್ದಾರೆ.
ಒಲಿಂಪಿಕ್ ಪದಕ ವಿಜೇತರಾದ ಫೋಗಟ್ ಮತ್ತು ಪುನಿಯಾ ಕಾಂಗ್ರೆಸ್‌ಗೆ ಸೇರಿದ ಬೆನ್ನಲ್ಲೇ ಮಾತನಾಡಿದ ಬಿಜೆಪಿಯ ಹಿರಿಯ ನಾಯಕರಾಗಿರುವ ಸಿಂಗ್, 2012 ರ WFI ಚುನಾವಣೆಯಲ್ಲಿ ಕಾಂಗ್ರೆಸ್‌ನ ದೀಪೇಂದರ್ ಹೂಡಾ ಅವರನ್ನು ಸೋಲಿಸಿದ್ದಕ್ಕಾಗಿ ತನ್ನ ವಿರುದ್ಧ ಅವರು ದ್ವೇಷ ಸಾಧಿಸುತ್ತಿದ್ದಾರೆ ಎಂದರು.
ಲೈಂಗಿಕ ಕಿರುಕುಳದ ಆರೋಪದ ತಿಭಟನೆ ನಡೆಸಿದ್ದ ಫೋಗಟ್ ಮತ್ತು ಪುನಿಯಾ ಕುರಿತು ಮಾತನಾಡಿದ ಬ್ರಿಜ್ ಭೂಷಣ್ ಸಿಂಗ್, ಅವರನ್ನು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪೀಂದರ್ ಹೂಡಾ ಪಾನ್ ಗಳಂತೆ ಬಳಸಿಕೊಂಡಿದ್ದಾರೆ.
ಭಾರತದ ಕುಸ್ತಿ ಒಕ್ಕೂಟದ ಮೇಲೆ ಹಿಡಿತ ಸಾಧಿಸಲು, ಬಿಜೆಪಿ ಮತ್ತು ಅದರ ಸಿದ್ಧಾಂತದ ಮೇಲೆ ದಾಳಿ ಮಾಡಲು ಇವೆಲ್ಲವನ್ನೂ ಸಂಚು ಮಾಡಲಾಗಿತ್ತು. ರಾಹುಲ್, ಕಾಂಗ್ರೆಸ್ ತಂಡವು ಈ ಕೆಲಸವನ್ನು ಮಾಡುತ್ತಲೇ ಇದೆ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ಹೇಳಿದರು.
ನಾನು ಲಕ್ನೋದಲ್ಲಿ ಇದ್ದ ಸಮಯದಲ್ಲಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ವಿನೇಶ್ ಫೋಗಟ್ ಆರೋಪಿಸಿದ್ದರು. ಸಮಯವು ಸತ್ಯವನ್ನು ಹೇಳುತ್ತದೆ ಎಂದರು.
Advertisement