ಹರ್ಯಾಣ: ಕುಸ್ತಿ ಪಟು ಹಾಗೂ ಹರ್ಯಾಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ವಿನೇಶ್ ಫೋಗಟ್ ಇಂದಿನಿಂದ (ಸೆ.08)ರಿಂದ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಜನರ ಆಶೀರ್ವಾದದೊಂದಿಗೆ ಪ್ರತಿ ಯುದ್ಧವನ್ನು ಗೆಲ್ಲುತ್ತೇನೆ ಎಂದು ಕುಸ್ತಿ ಪಟು ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ತಿಳಿಸಿದ್ದಾರೆ.
ಫೋಗಟ್ (30) ಹರ್ಯಾಣ ವಿಧಾನಸಭಾ ಚುನಾವಣೆಗೆ ಜುಲಾನ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಅ.05 ರಂದು ಹರ್ಯಾಣದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. 90 ಸದಸ್ಯರ ಸಾಮರ್ಥ್ಯವಿರುವ ವಿಧಾನಸಭೆಗೆ ನಡೆದ ಮತದಾನದ ಎಣಿಕೆ ಅ.08 ರಂದು ನಡೆಯಲಿದೆ. ಫೋಗಟ್ ಜೂಲಾನಾ ತಲುಪಿದಾಗ ಅವರ ಬೆಂಬಲಿಗರು, ವೃದ್ಧರು ಮತ್ತು ಮಹಿಳೆಯರು ಮತ್ತು ವಿವಿಧ 'ಖಾಪ್'ಗಳ ಸದಸ್ಯರು ಹೂಮಾಲೆಯೊಂದಿಗೆ ಅವರನ್ನು ಸ್ವಾಗತಿಸಿ ಆತ್ಮೀಯ ಸ್ವಾಗತ ಕೋರಿದರು.
ಹರಿಯಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಶುಕ್ರವಾರ ತನ್ನ 32 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಅಂದಿನ ಡಬ್ಲ್ಯುಎಫ್‌ಐ ಮುಖ್ಯಸ್ಥ ಹಾಗೂ ಬಿಜೆಪಿಯ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಒಲಿಂಪಿಯನ್‌ಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರು ಶುಕ್ರವಾರ ಕಾಂಗ್ರೆಸ್ ಸೇರುವ ಮೂಲಕ ರಾಜಕೀಯ ಅಖಾಡಕ್ಕೆ ಪ್ರವೇಶಿಸಿದ್ದಾರೆ.
Advertisement