'ಅಪರಾಧಿಯ ತಪ್ಪಿಗೆ ಕುಟುಂಬವನ್ನು ಶಿಕ್ಷಿಸುವುದು ಎಷ್ಟು ಸರಿ': ಬುಲ್ಡೋಜರ್ ಕ್ರಮಕ್ಕೆ ಸುಪ್ರೀಂ ಕೋರ್ಟ್ ಗರಂ

ಆರೋಪಿ ತಪ್ಪಿತಸ್ಥನೋ ಅಲ್ಲವೋ ಅಂದರೆ ಆತ ಈ ಅಪರಾಧ ಮಾಡಿದ್ದಾನೆಯೇ ಎಂಬುದನ್ನು ನಿರ್ಧರಿಸುವುದು ನ್ಯಾಯಾಲಯದ ಕೆಲಸವೇ ಹೊರತು ಸರ್ಕಾರವಲ್ಲ ಎಂದು ಪೀಠ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರTNIE
Updated on

ನವದೆಹಲಿ: ಗುಜರಾತ್‌ನಲ್ಲಿ ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಬುಲ್ಡೋಜರ್ ನ್ಯಾಯದ ಕುರಿತು ಪ್ರಶ್ನೆಗಳನ್ನು ಎತ್ತಿದೆ. ಒಬ್ಬ ವ್ಯಕ್ತಿ ಪ್ರಕರಣದಲ್ಲಿ ಆರೋಪಿ ಎಂಬ ಕಾರಣಕ್ಕೆ ಬುಲ್ಡೋಜರ್ ಅನ್ನು ಆತನ ಮನೆಯ ಮೇಲೆ ಬಳಸಬಹುದಾ ಎಂದು ನ್ಯಾಯಮೂರ್ತಿ ಹೃಷಿಕೇಶ್ ರಾಯ್, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ನ್ಯಾಯಮೂರ್ತಿ ಎಸ್‌ವಿಎನ್ ಭಟ್ಟಿ ಅವರ ಪೀಠ ಕೇಳಿದೆ. ಆರೋಪಿ ತಪ್ಪಿತಸ್ಥನೋ ಅಲ್ಲವೋ ಅಂದರೆ ಆತ ಈ ಅಪರಾಧ ಮಾಡಿದ್ದಾನೆಯೇ ಎಂಬುದನ್ನು ನಿರ್ಧರಿಸುವುದು ನ್ಯಾಯಾಲಯದ ಕೆಲಸವೇ ಹೊರತು ಸರ್ಕಾರವಲ್ಲ ಎಂದು ಪೀಠ ಹೇಳಿದೆ.

ಸುಭದ್ರ ಕಾನೂನು ಇರುವ ದೇಶದಲ್ಲಿ ಒಬ್ಬ ವ್ಯಕ್ತಿಯ ತಪ್ಪಿಗೆ ಆತನ ಕುಟುಂಬದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಅಥವಾ ಅವರ ಮನೆಯನ್ನು ಕೆಡವುವ ಮೂಲಕ ಶಿಕ್ಷೆ ವಿಧಿಸುವುದು ಎಷ್ಟು ಸರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇಂತಹ ಬುಲ್ಡೋಜರ್ ಕ್ರಮವನ್ನು ನ್ಯಾಯಾಲಯ ನಿರ್ಲಕ್ಷಿಸುವಂತಿಲ್ಲ. ಅಂತಹ ಕ್ರಮಕ್ಕೆ ಅವಕಾಶ ನೀಡುವುದು ಕಾನೂನಿನ ನಿಯಮದ ಮೇಲೆ ಬುಲ್ಡೋಜರ್ ಓಡಿಸಿದಂತಾಗುತ್ತದೆ. ಅಪರಾಧದಲ್ಲಿ ಭಾಗಿಯಾಗಿರುವುದು ಯಾವುದೇ ಆಸ್ತಿಯನ್ನು ಕೆಡವಲು ಆಧಾರವಲ್ಲ ಎಂದು ಹೇಳಿದೆ.

ಗುಜರಾತ್‌ನ ಜಾವೇದ್ ಅಲಿ ಎಂಬ ಅರ್ಜಿದಾರರ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಕುಟುಂಬದ ಸದಸ್ಯರ ವಿರುದ್ಧ ಎಫ್‌ಐಆರ್‌ನಿಂದಾಗಿ ಅವರ ಮನೆಯನ್ನು ಕೆಡವಲು ನಗರಸಭೆಯಿಂದ ನೋಟಿಸ್ ಅಥವಾ ಬೆದರಿಕೆ ಹಾಕಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ, ಅರ್ಜಿದಾರರ ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ಅವರ ಕುಟುಂಬದ ಮೂರು ತಲೆಮಾರುಗಳು ಸುಮಾರು ಎರಡು ದಶಕಗಳಿಂದ ಈ ಮನೆಗಳಲ್ಲಿ ವಾಸಿಸುತ್ತಿದೆ.

ಸಂಗ್ರಹ ಚಿತ್ರ
ಅಸ್ಸಾಂನಲ್ಲಿ ಬುಲ್ಡೋಜರ್ ಕ್ರಮದ ವಿರುದ್ಧ ಪ್ರತಿಭಟನೆ: ಪೊಲೀಸರ ಗುಂಡಿನ ದಾಳಿಯಲ್ಲಿ ಇಬ್ಬರು ಮುಸ್ಲಿಮರು ಸಾವು!

ಅರ್ಜಿದಾರರ ಪ್ರಕಾರ, 2024ರ ಸೆಪ್ಟೆಂಬರ್ 1ರಂದು ಕುಟುಂಬ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲು ಬಂದಾಗ, ಪುರಸಭೆಯ ಅಧಿಕಾರಿಗಳು ಅರ್ಜಿದಾರರ ಕುಟುಂಬದ ಮನೆಯನ್ನು ಬುಲ್ಡೋಜರ್‌ನಿಂದ ಕೆಡವುವುದಾಗಿ ಬೆದರಿಕೆ ಹಾಕಿದರು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪಾಲಿಕೆ ಹಾಗೂ ಸ್ಥಳೀಯ ಆಡಳಿತಕ್ಕೆ ನೋಟಿಸ್ ಜಾರಿ ಮಾಡಿ ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com