'ಕನ್ನಡಕಕ್ಕೆ ಪರ್ಯಾಯ'ವೆಂದು ಪ್ರಚಾರ; PresVu 'ಕಣ್ಣಿನ ಲಸಿಕೆ'ಯ ತಯಾರಿ, ಮಾರಾಟಕ್ಕೆ DCGI ತಡೆ

ಕಣ್ಣಿಗೆ ಸಂಬಂಧಿಸಿದ ಸಮಸ್ಯೆಯಾದ ಪ್ರೆಸ್ಬಯೋಪಿಯಾ ಹೊಂದಿರುವ ವ್ಯಕ್ತಿಗಳಿಗೆ PresVu ಕಣ್ಣಿನ ಲಸಿಕೆ ನೀಡುವುದರಿಂದ ಕನ್ನಡಕಗಳ ಮೇಲಿನ ಅವಲಂಬನೆ ಬೇಕಿಲ್ಲ ಎಂದು ಕಂಪನಿ ಜಾಹೀರಾತುಗಳಲ್ಲಿ ಹೇಳಿಕೊಂಡಿತ್ತು.
PresVu eye drops
PresVu ಕಣ್ಣಿನ ಲಸಿಕೆ
Updated on

ನವದೆಹಲಿ: ಕನ್ನಡಕಕ್ಕೆ ಪರ್ಯಾಯವೆಂದು ಪ್ರಚಾರ ಮಾಡಿದ್ದ ENTOD Pharmaceuticals Ltd ಸಂಸ್ಥೆಯ PresVu ಕಣ್ಣಿನ ಲಸಿಕೆಯ ತಯಾರಿ, ಮಾರಾಟಕ್ಕೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(DCGI) ತಡೆ ನೀಡಿದೆ.

ಹೌದು.. ಎಂಟೋಡ್ ಫಾರ್ಮಾಸ್ಯುಟಿಕಲ್ಸ್‌ ಕಂಪನಿ ಉತ್ಪಾದಿಸುತ್ತಿರುವ PresVu ಕಣ್ಣಿನ ಲಸಿಕೆ ತಯಾರಿ ಮತ್ತು ಮಾರಾಟಕ್ಕೆ ನೀಡಿದ್ದ ಅನುಮತಿಯನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅಮಾನತುಗೊಳಿಸಿದೆ.

ಎಂಟೋಡ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ 'PresVu' ಲಸಿಕೆಯ ಬಗ್ಗೆ ಅನಧಿಕೃತ ಪ್ರಚಾರವನ್ನು ಮಾಡಿದೆಯೆಂದು ಮುಂದಿನ ಆದೇಶದವರೆಗೆ ಲಸಿಕೆಯ ತಯಾರಿ ಮತ್ತು ಮಾರಾಟಕ್ಕೆ ನಿಷೇಧ ವಿಧಿಸಲಾಗಿದೆ.

ಮುಖ್ಯವಾಹಿನಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಿನ ಲಸಿಕೆ ಬಗ್ಗೆ ಅನಧಿಕೃತ ಪ್ರಚಾರವು ಅಸುರಕ್ಷಿತ ಬಳಕೆಗೆ ಕಾರಣವಾಗುತ್ತದೆ ಎಂದು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಹೇಳಿದೆ.

PresVu eye drops
ಚಿಕ್ಕ ಮಕ್ಕಳನ್ನು ಕಾಡುವ ಕಣ್ಣಿನ ಕ್ಯಾನ್ಸರ್ ಅಥವಾ ರೆಟಿನೋಬ್ಲಾಸ್ಟೋಮಾ (ಕುಶಲವೇ ಕ್ಷೇಮವೇ)

ಡಿಸಿಜಿಐ ಸ್ಪಷ್ಟನೆ

ಇದೇ ವೇಳೆ ಸಂಸ್ಥೆಗೆ ನೀಡಿರುವ ಅನುಮತಿ ವಿಚಾರವಾಗಿಯೂ ಸ್ಪಷ್ಟನೆ ನೀಡಿರುವ ಡಿಸಿಜಿಐ, 'ಈ ರೀತಿಯ ಪ್ರಚಾರವು OTC(ಪ್ರಿಸ್ಕ್ರಿಪ್ಷನ್ ಇಲ್ಲದೆ ಬಳಸಬಹುದಾದ ಔಷಧ) ಔಷಧಿಗಳನ್ನು ಬಳಕೆ ಮಾಡುವಂತೆ ʼಪ್ರೆಸ್‌ವುʼ ಲಸಿಕೆಯ ಬಳಕೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಆದರೆ ಈ ಔಷಧವನ್ನು ಪ್ರಿಸ್ಕ್ರಿಪ್ಷನ್ ಔಷಧವಾಗಿ ಮಾತ್ರ ಅನುಮೋದಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಅಮಾನತಿಗೆ ಕಾರಣವೇನು?

ಕಣ್ಣಿಗೆ ಸಂಬಂಧಿಸಿದ ಸಮಸ್ಯೆಯಾದ ಪ್ರೆಸ್ಬಯೋಪಿಯಾ ಹೊಂದಿರುವ ವ್ಯಕ್ತಿಗಳಿಗೆ PresVu ಕಣ್ಣಿನ ಲಸಿಕೆ ನೀಡುವುದರಿಂದ ಕನ್ನಡಕಗಳ ಮೇಲಿನ ಅವಲಂಬನೆ ಬೇಕಿಲ್ಲ ಎಂದು ಕಂಪನಿ ಜಾಹೀರಾತುಗಳಲ್ಲಿ ಹೇಳಿಕೊಂಡಿತ್ತು. ಆದರೆ ಡಿಸಿಜಿಐ ಹೇಳಿಕೆಯಂತೆ ಈ ಔಷಧಿಯನ್ನು ಪ್ರಿಸ್ಕ್ರಿಪ್ಷನ್ ಅಥವಾ ವೈದ್ಯರ ಚೀಟಿ ಇಲ್ಲದೇ ಪಡೆಯುವ ಔಷಧಿಯಾಗಿ ಅನುಮತಿ ನೀಡಿಲ್ಲ ಎಂದು ಹೇಳಿದೆ.

ಅಲ್ಲದೆ ಈ ರೀತಿಯ ಪ್ರಚಾರವು OTC(ಪ್ರಿಸ್ಕ್ರಿಪ್ಷನ್ ಇಲ್ಲದೆ ಬಳಸಬಹುದಾದ ಔಷಧ) ಔಷಧಿಗಳನ್ನು ಬಳಕೆ ಮಾಡುವಂತೆ 'ಪ್ರೆಸ್‌ವು' ಲಸಿಕೆಯ ಬಳಕೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಆದರೆ ಈ ಔಷಧವನ್ನು ಪ್ರಿಸ್ಕ್ರಿಪ್ಷನ್ ಔಷಧವಾಗಿ ಮಾತ್ರ ಅನುಮೋದಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಕಾನೂನು ಹೋರಾಟ ಎಂದ ಸಂಸ್ಥೆ

ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿಜಿಜಿಐ ನಿರ್ಧಾರದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದೆ. ಎಂಟೋಡ್ ಫಾರ್ಮಾಸ್ಯುಟಿಕಲ್ಸ್‌ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಖಿಲ್ ಮಸೂರ್ಕರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, PresVu ಕಣ್ಣಿನ ಲಸಿಕೆ ಬಗ್ಗೆ ಯಾವುದೇ ಸುಳ್ಳು ಪ್ರಚಾರವನ್ನು ಕಂಪನಿಯು ಮಾಡಿಲ್ಲ. DCGI ಅನುಮೋದನೆ ಮಾಡಿದ ಸಂಗತಿಯನ್ನೇ ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಗಿದೆ. DCGI ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಕಂಪನಿ ಹೇಳಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com