ಗಾಂಧಿನಗರ: ಮೆಶ್ವೋ ನದಿಯಲ್ಲಿ ಮುಳುಗಿ ಎಂಟು ಮಂದಿ ಸಾವು

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನದಿಯಿಂದ ಎಂಟು ಮೃತದೇಹಗಳನ್ನು ಹೊರತೆಗೆದಿದ್ದೇವೆ. ಎಷ್ಟು ಮಂದಿ ನೀರಿಗೆ ಇಳಿದಿದ್ದರು ಎಂಬುದು ಇನ್ನೂ ಅಸ್ಪಷ್ಟವಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ
ಗಾಂಧಿನಗರ: ಮೆಶ್ವೋ ನದಿಯಲ್ಲಿ ಮುಳುಗಿ ಎಂಟು ಮಂದಿ ಸಾವು
Updated on

ಅಹಮದಾಬಾದ್: ಗುಜರಾತ್‌ನ ಗಾಂಧಿನಗರ ಜಿಲ್ಲೆಯ ಮೆಶ್ವೋ ನದಿಯಲ್ಲಿ ಶುಕ್ರವಾರ ಸಂಜೆ ಸ್ನಾನ ಮಾಡುತ್ತಿದ್ದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತರು ದೆಹಗಾಮ್ ತಾಲೂಕಿನ ವಾಸ್ನಾ ಸೊಗ್ತಿ ಗ್ರಾಮದ ನಿವಾಸಿಗಳು ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಬಿ ಬಿ ಮೋದಿಯಾ ತಿಳಿಸಿದ್ದಾರೆ.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನದಿಯಿಂದ ಎಂಟು ಮೃತದೇಹಗಳನ್ನು ಹೊರತೆಗೆದಿದ್ದೇವೆ. ಎಷ್ಟು ಮಂದಿ ನೀರಿಗೆ ಇಳಿದಿದ್ದರು ಎಂಬುದು ಇನ್ನೂ ಅಸ್ಪಷ್ಟವಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಗಾಂಧಿನಗರ: ಮೆಶ್ವೋ ನದಿಯಲ್ಲಿ ಮುಳುಗಿ ಎಂಟು ಮಂದಿ ಸಾವು
ಒಡಿಶಾ: ನದಿಯಲ್ಲಿ ದೋಣಿ ಮುಳುಗಿ ಇಬ್ಬರ ಸಾವು, 7 ಮಂದಿ ನಾಪತ್ತೆ

ಮೃತರೆಲ್ಲರೂ ಸ್ಥಳೀಯರಾಗಿದ್ದಾರೆ. ಆದರೆ, ಆಳ ತಿಳಿಯದೆ ನದಿಗೆ ಇಳಿದಿರಬಹುದು. ಅಲ್ಲಿಗೆ ಸ್ವಲ್ಪ ದೂರದಲ್ಲಿ ನಿರ್ಮಾಣ ಹಂತದಲ್ಲಿರುವ ಚೆಕ್ ಡ್ಯಾಂನಿಂದ ಇತ್ತೀಚಿಗೆ ನೀರಿನ ಮಟ್ಟವು ಹೆಚ್ಚಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com