
ಕೋಟಾ: ಕಾರ್ಯಕ್ರಮವೊಂದರಲ್ಲಿ ವೈರ್ ಕದಿಯುವಾಗ ಸಿಕ್ಕಿಬಿದ್ದ 12 ವರ್ಷದ ದಲಿತ ಬಾಲಕನನ್ನು ವಿವಸ್ತ್ರಗೊಳಿಸಿ ಬಲವಂತವಾಗಿ ನೃತ್ಯ ಮಾಡಿಲಿ, ವಿಡಿಯೋ ಚಿತ್ರೀಕರಿಸಿದ ಘಟನೆ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ಕೈದು ಮಂದಿ ಮುಂದೆ ಬಾಲಕ ಹಾಡೊಂದಕ್ಕೆ ಕುಣಿಯುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವಿಡಿಯೋದಲ್ಲಿ, ಪುರುಷರು ಬಾಲಕನಿಗೆ ನಗುತ್ತಾ ನೃತ್ಯ ಮಾಡುವಂತೆ ಒತ್ತಾಯಿಸುತ್ತಿದ್ದು, ಪೊಲೀಸರು ವಿಡಿಯೋ ನೋಡಿ, ಸಂತ್ರಸ್ತ ಬಾಲಕನನ್ನು ಪತ್ತೆ ಹಚ್ಚಿದ ಬಳಿಕ ವಿಷಯ ಬೆಳಕಿಗೆ ಬಂದಿದೆ.
ಸಂತ್ರಸ್ತ ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಳ್ಳಲಾಗಿದೆ. ಬಾಲಕ ಶುಕ್ರವಾರ ರಾತ್ರಿ ಜಿಎಡಿ ಸರ್ಕಲ್‌ನಲ್ಲಿ ಆಯೋಜಿಸಿದ್ದ ಹಾಸ್ಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದನು. ಈ ವೇಳೆ ನಾಲ್ಕೈದು ಮಂದಿ ತನ್ನ ಮಗನನ್ನು ಅಡ್ಡಗಟ್ಟಿ, ವೈರ್ ಕದ್ದಿದ್ದಾನೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ ಎಂದು ಬಾಲಕನ ತಂದೆ ಆರೋಪಿಸಿದ್ದಾರೆ.
ನಾಲ್ಕೈದು ಮಂದಿ ತನ್ನ ಮಗನನ್ನು ವಿವಸ್ತ್ರಗೊಳಿಸಿ ನೃತ್ಯ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತೆ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರಕರಣದಲ್ಲಿ ತಂದೆ-ಮಗ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕ್ಷಿತಿಜ್ ಗುರ್ಜರ್(24) ಅಲಿಯಾಸ್ ಬಿಟ್ಟು, ಆಶಿಶ್ ಉಪಾಧ್ಯಾಯ ಅಲಿಯಾಸ್ ವಿಕ್ಕು(52), ಅವರ ಮಗ ಯಯಾತಿ ಉಪಾಧ್ಯಾಯ(24) ಅಲಿಯಾಸ್ ಗುಂಗುನ್, ಗೌರವ್ ಸೋನಿ (21), ಸಂದೀಪ್ ಸಿಂಗ್ (30) ಅಲಿಯಾಸ್ ರಾಹುಲ್ ಬನ್ನಾಶ ಮತ್ತು ಸುಮಿತ್ ಕುಮಾರ್ ಸೈನ್(25) ಎಂದು ಗುರುತಿಸಲಾಗಿದೆ.
Advertisement