ದೆಹಲಿಗೆ ಹೊಸ ಸಿಎಂ ಆಯ್ಕೆ: ಆಪ್ ನ ಪ್ರತಿ ಪಿಎಸಿ ಸದಸ್ಯರ ಜೊತೆ ಕೇಜ್ರಿವಾಲ್ ಪ್ರತ್ಯೇಕ ಸಭೆ

ಸಭೆಯ ಸಮಯದಲ್ಲಿ, ಕೇಜ್ರಿವಾಲ್ ತಮ್ಮ ಬದಲಿ ನಾಯಕನ ಆಯ್ಕೆ ಕುರಿತು ಪ್ರತಿ ನಾಯಕರಿಂದ ಒಂದೊಂದು ಪ್ರತಿಕ್ರಿಯೆಯನ್ನು ಕೇಳಿದ್ದಾರೆ.
Aravind Kejriwal
ಅರವಿಂದ್ ಕೇಜ್ರಿವಾಲ್online desk
Updated on

ದೆಹಲಿ: ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯ ಪ್ರತಿ ಸದಸ್ಯನ ಜೊತೆ ಪ್ರತ್ಯೇಕ ಸಭೆ ನಡೆಸಿದ್ದಾರೆ.

ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಕೇಜ್ರಿವಾಲ್ ಘೋಷಿಸಿದ್ದು, ದೆಹಲಿಗೆ ನೂತನ ಸಿಎಂ ಆಯ್ಕೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಕೇಜ್ರಿವಾಲ್ ತಮ್ಮ ಅಧಿಕೃತ ನಿವಾಸದಲ್ಲಿ ಸಭೆ ನಡೆಸಿದ್ದಾರೆ.

"ಸಭೆಯ ಸಮಯದಲ್ಲಿ, ಕೇಜ್ರಿವಾಲ್ ತಮ್ಮ ಬದಲಿ ನಾಯಕನ ಆಯ್ಕೆ ಕುರಿತು ಪ್ರತಿ ನಾಯಕರಿಂದ ಒಂದೊಂದು ಪ್ರತಿಕ್ರಿಯೆಯನ್ನು ಕೇಳಿದ್ದಾರೆ. ನಾಳೆ, ಶಾಸಕಾಂಗ ಪಕ್ಷದ ಸಭೆ ಇದ್ದು, ಸಿಎಂ ಆಯ್ಕೆ ಬಗ್ಗೆ 2 ನೇ ಸುತ್ತಿನ ಚರ್ಚೆ ನಡೆಯಲಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಸೌರಭ್ ಭಾರದ್ವಾಜ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

Aravind Kejriwal
ಮುಂದಿನ ದೆಹಲಿ ಸಿಎಂ ವದಂತಿ ನಡುವೆ ಸಿಸೋಡಿಯಾ-ಕೇಜ್ರಿವಾಲ್ ಭೇಟಿ!

ಎಎಪಿಯ ಶಾಸಕರು ಮಂಗಳವಾರ ಬೆಳಗ್ಗೆ 11.30ಕ್ಕೆ ಕೇಜ್ರಿವಾಲ್ ಅವರ ನಿವಾಸದಲ್ಲಿ ಸಭೆ ಸೇರಿ ದೆಹಲಿ ಮುಖ್ಯಮಂತ್ರಿಯಾಗಲು ಒಮ್ಮತದ ಅಭ್ಯರ್ಥಿಯ ಹೆಸರನ್ನು ಚರ್ಚಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com