
ಲಖನೌ: ಸರಕು ಸಾಗಿಸುತ್ತಿದ್ದ ರೈಲಿನ 20 ಬೋಗಿಗಳು ಉತ್ತರ ಪ್ರದೇಶದ ವೃಂದಾವನ್ ರಸ್ತೆ ನಿಲ್ದಾಣದ ಬಳಿ ನಡೆದಿದೆ.
ಬೋಗಿಗಳು ಹಳಿ ತಪ್ಪಿರುವುದರಿಂದ ಮಥುರಾ-ಪಲ್ವಾಲ್ ಮಾರ್ಗದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಿದ್ದು, ಮೂರು ರೈಲು ಮಾರ್ಗಗಳಲ್ಲಿ ಸಂಚಾರ ವ್ಯತ್ಯಯವಾಗಿದೆ ಎಂದು ಎನ್ ಸಿಆರ್ ರೈಲ್ವೆ ಝೋನ್ ನ ಸಿಪಿಆರ್ ಒ ಹೇಳಿದ್ದಾರೆ.
ಸಾಧ್ಯವಾದಷ್ಟು ಬೇಗ ಈ ಮಾರ್ಗಗಳನ್ನು ತೆರವುಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ಈ ಮಾರ್ಗವು ನಾಲ್ಕನೇ ಲೈನ್ ಹೊಂದಿದೆ ಎಂದು ವಕ್ತಾರರು ಹೇಳಿದರು. "ನಾವು ನಾಲ್ಕನೇ ಲೈನ್ ನಲ್ಲಿ ಯಾವುದೇ ಸಮಸ್ಯೆ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ" ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
Advertisement