
ತಿರುಪತಿ: ಜಗತ್ ಪ್ರಸಿದ್ಧ ತಿರುಮಲ ವೆಂಕಟೇಶ್ವರ ದೇವರ ಸನ್ನಿಧಿಯಲ್ಲಿ ಭಕ್ತರು ಪ್ರೀತಿ ಮತ್ತು ಶ್ರದ್ಧೆಯಿಂದ ಸ್ವೀಕರಿಸುವ ತಿರುಪತಿ ಲಡ್ಡಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಆಂಧ್ರ ಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಹೇಳಿಕೆ ದೇಶಾದ್ಯಂತ ತೀವ್ರ ಚರ್ಚೆ ಮತ್ತು ಕಳವಳಕ್ಕೆ ಗ್ರಾಸವಾಗಿದೆ.
ಈ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ತಿರುಮಲ ತಿರುಪತಿ ದೇವಸ್ಥಾನ(TTD)ದ ಕಾರ್ಯನಿರ್ವಾಹಕ ಅಧಿಕಾರಿ ಶಾಮಲಾ ರಾವ್, "ಲಡ್ಡು ಪ್ರಸಾದದಲ್ಲಿ ತುಪ್ಪದ ಬದಲಿಗೆ ವೆಜಿಟೇಬಲ್ ಆಯಿಲ್ ಮತ್ತು ಪ್ರಾಣಿಗಳ ಕೊಬ್ಬು ಕಲಬೆರಕೆಯಾಗಿರುವುದು ಲ್ಯಾಬ್ ಟೆಸ್ಟ್ ನಿಂದ ದೃಢಪಟ್ಟಿದೆ ಎಂದು ಹೇಳಿದ್ದಾರೆ.
ಲ್ಯಾಬ್ ಟೆಸ್ಟ್ ವರದಿಯಲ್ಲಿ ಪ್ರಾಣಿಗಳ ಕೊಬ್ಬಿನ ಕಲಬೆರಕೆಯಲ್ಲಿ ಹಂದಿ ಕೊಬ್ಬು, ತಾಳೆ ಎಣ್ಣೆ, ಬೀಫ್ ಟ್ಯಾಲೋ ಮತ್ತು ಮೀನಿನ ಎಣ್ಣೆ ಸೇರಿವೆ. ದ್ರಾಕ್ಷಿ ಬೀಜ ಮತ್ತು ಲಿನ್ಸೆಡ್ ಮಿಶ್ರಣ ಕೂಡ ಇದೆ. ಶುದ್ಧ ಹಾಲಿನ ಕೊಬ್ಬು 95.68 ರಿಂದ 104.32 ರ ನಡುವೆ ಇರಬೇಕಾಗುತ್ತದೆ. ಆದರೆ ನಮ್ಮ ಎಲ್ಲಾ ತುಪ್ಪದ ಮಾದರಿಗಳು ಸುಮಾರು 20 ಮೌಲ್ಯಗಳನ್ನು ಹೊಂದಿದ್ದವು, ಅಂದರೆ ತುಪ್ಪವು ಹೆಚ್ಚಾಗಿದೆ. ಕಲಬೆರಕೆಯಾಗಿದ್ದು, ನಾವು ಕಪ್ಪುಪಟ್ಟಿಗೆ ಸೇರಿಸುವ ಮತ್ತು ಪೂರೈಕೆದಾರರಿಗೆ ದಂಡ ವಿಧಿಸುವ ಕಾರ್ಯವಿಧಾನವನ್ನು ಪ್ರಾರಂಭಿಸಿದ್ದೇವೆ ಎಂದರು.
ಪ್ರಸಾದಕ್ಕೆ ಪರಿಶುದ್ಧ ತುಪ್ಪದ ಪೂರೈಕೆಯನ್ನು ಸುಧಾರಿಸಲು ಮತ್ತು ನಮ್ಮ ಆಂತರಿಕ ವ್ಯವಸ್ಥೆಯನ್ನು ಬಲಪಡಿಸಲು ನಾವು ತಜ್ಞರ ಸಮಿತಿಯನ್ನು ರಚಿಸಿದ್ದೇವೆ, ಇದರಿಂದ ಮತ್ತೆ ಸಮಸ್ಯೆ ಉಂಟಾಗುವುದಿಲ್ಲ. ನಮ್ಮದೇ ಪ್ರಯೋಗಾಲಯವನ್ನು ಸ್ಥಾಪಿಸಲು ತಜ್ಞರ ಸಮಿತಿಯು ಕೇಳಿದ್ದು, ಭವಿಷ್ಯದಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.
Advertisement