
ಮಥುರಾ: ಚಲಿಸುತ್ತಿದ್ದ ವ್ಯಾನ್‌ನಲ್ಲಿ ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ಗುರುವಾರ ವರದಿಯಾಗಿದೆ.
13 ವರ್ಷದ ಬಾಲಕಿಗೆ ಮತ್ತು ಬರುವ ಔಷಧ ನೀಡಿದ ನಂತರ ಆಕೆಯನ್ನು ಮೂವರು ಯುವಕರು ಅಪಹರಿಸಿದ್ದು, ಚಲಿಸುತ್ತಿದ್ದ ವ್ಯಾನ್ ನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸಾಮೂಹಿಕ ಅತ್ಯಾಚಾರದ ಬಳಿಕ ಆ ಬಾಲಕಿಯನ್ನು ಫ್ಲೈಓವರ್ ಅಡಿಯಲ್ಲಿ ಎಸೆದು ಕಿರಾತಕರು ಪರಾರಿಯಾಗಿದೆ. ಬಾಲಕಿಗೆ ಪ್ರಜ್ಞೆ ಬಂದಾಗ ಮನೆಗೆ ಬಂದಿದ್ದು, ನಡೆದ ಹೀನಕೃತ್ಯವನ್ನು ತನ್ನ ಪೋಷಕರಿಗೆ ತಿಳಿಸಿದ್ದಾಳೆ.
ಬಾಲಕಿ ಕಿರಾಣಿ ಅಂಗಡಿಯೊಂದಕ್ಕೆ ಹೋಗಿದ್ದ ವೇಳೆ ಯುವಕನೊಬ್ಬ ನೀರಿನ ಬಾಟಲಿ ನೀಡಿದ್ದಾನೆ. ಬಾಟಲಿಯಲ್ಲಿನ ಮತ್ತು ಬರುವ ಔಷಧಿ ಸೇವಿಸಿದ ನಂತರ ಒಮ್ಮೆಲೇ ತಲೆಸುತ್ತು ಬಂದಂತಾಗಿದೆ. ಇದಾದ ನಂತರ ಮತ್ತಿಬ್ಬರು ಯುವಕರು ಸೇರಿಕೊಂಡು ಆಕೆಯನ್ನು ಬಲವಂತವಾಗಿ ವ್ಯಾನ್ ಗೆ ಹತ್ತಿಸಿಕೊಂಡು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ.
ಸಂತ್ರಸ್ತೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಛಾಟಾ ಪೊಲೀಸರು ಪರಾರಿಯಾಗಿರುವ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement