ಅಯೋಧ್ಯೆ-ಸೀತಾಮರ್ಹಿ ನಡುವೆ ವಂದೇ ಭಾರತ್ ರೈಲು ಆರಂಭಿಸುವಂತೆ ಪ್ರಧಾನಿ ಮೋದಿಗೆ ಬಿಹಾರ ಸಿಎಂ ಪತ್ರ

ಕೇಂದ್ರ ಸರ್ಕಾರವು ಈಗಾಗಲೇ ಅಯೋಧ್ಯೆಯಿಂದ(ಉತ್ತರ ಪ್ರದೇಶ) ಸೀತಾಮರ್ಹಿ(ಬಿಹಾರ)ವರೆಗೆ ರಾಮ್ ಜಾನಕಿ ರಸ್ತೆಯ ನಿರ್ಮಾಣವನ್ನು ಪ್ರಾರಂಭಿಸಿದೆ.
ನಿತೀಶ್ ಕುಮಾರ್ ಮತ್ತು ಪ್ರಧಾನಿ ಮೋದಿ
ನಿತೀಶ್ ಕುಮಾರ್ ಮತ್ತು ಪ್ರಧಾನಿ ಮೋದಿ
Updated on

ಪಾಟ್ನಾ: ಅಯೋಧ್ಯೆ-ಸೀತಾಮರ್ಹಿ ರಸ್ತೆ ನಿರ್ಮಾಣವನ್ನು ತ್ವರಿತಗೊಳಿಸಬೇಕು ಮತ್ತು ಅಯೋಧ್ಯೆ ಮತ್ತು ಸೀತಾಮಾರ್ಹಿ (ಸೀತಾ ಮಾತೆಯ ಜನ್ಮಸ್ಥಳ) ನಡುವಿನ ಪ್ರಯಾಣಕ್ಕೆ ಅನುಕೂಲವಾಗುವಂತೆ ವಂದೇ ಭಾರತ್ ರೈಲನ್ನು ಆರಂಭಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದ್ದಾರೆ.

ಸೀತಾಮರ್ಹಿ ಜಿಲ್ಲೆಯ ಪುನೌರಧಾಮದಲ್ಲಿ ಅಸ್ತಿತ್ವದಲ್ಲಿರುವ ರಾಮ ಜಾನಕಿ ದೇವಸ್ಥಾನದ ವಿಸ್ತರಣೆಗಾಗಿ ರಾಜ್ಯ ಸರ್ಕಾರ 50 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಈಗಾಗಲೇ ಅಯೋಧ್ಯೆಯಿಂದ(ಉತ್ತರ ಪ್ರದೇಶ) ಸೀತಾಮರ್ಹಿ(ಬಿಹಾರ)ವರೆಗೆ ರಾಮ್ ಜಾನಕಿ ರಸ್ತೆಯ ನಿರ್ಮಾಣವನ್ನು ಪ್ರಾರಂಭಿಸಿದೆ. “ರಾಮ್ ಜಾಂಕಿ ರಸ್ತೆ ಪೂರ್ಣಗೊಂಡರೆ, ಭಕ್ತರು ಅಯೋಧ್ಯೆ ಮತ್ತು ಸೀತಾಮರ್ಹಿ ನಡುವೆ ಸುಗಮವಾಗಿ ಪ್ರಯಾಣಿಸಬಹುದು. ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಸಚಿವಾಲಯಕ್ಕೆ ಸೂಚನೆ ನೀಡುವಂತೆ ನಾನು ವಿನಂತಿಸುತ್ತೇನೆ ಎಂದು ನಿತೀಶ್ ಕುಮಾರ್ ಪತ್ರ ಬರೆದಿದ್ದಾರೆ. ಅವರ ಪತ್ರದ ಪ್ರತಿಯನ್ನು ಜೆಡಿಯು ಕಾರ್ಯಾಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ಕುಮಾರ್ ಝಾ ಅವರು 'ಎಕ್ಸ್' ನಲ್ಲಿ ಹಂಚಿಕೊಂಡಿದ್ದಾರೆ.

ನಿತೀಶ್ ಕುಮಾರ್ ಮತ್ತು ಪ್ರಧಾನಿ ಮೋದಿ
ರಾಂಚಿ: ಆರು ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ

ರೈಲ್ವೆ ಸಂಪರ್ಕಕ್ಕಾಗಿ ಕೇಂದ್ರ ಸರ್ಕಾರವು ಹಲವಾರು ಜನಸ್ನೇಹಿ ಕ್ರಮಗಳನ್ನು ಪ್ರಾರಂಭಿಸಿದೆ. ಅದರಲ್ಲಿ ವಂದೇ ಭಾರತ್ ರೈಲು ಸಂಚಾರವೂ ಒಂದಾಗಿದೆ. ಬಿಹಾರದ ಜನರು ವಂದೇ ಭಾರತ್ ರೈಲುಗಳ ಪ್ರಯೋಜನ ಪಡೆದಿದ್ದಾರೆ ಎಂದು ಬಿಹಾರ ಸಿಎಂ ಹೇಳಿದ್ದು, ಇದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com