
ದಾಹೋಡ್: ಗುಜರಾತ್‌ನ ದಾಹೋದ್ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯೊಂದರ ಪ್ರಾಂಶುಪಾಲರನ್ನು ಲೈಂಗಿಕ ಕಿರುಕುಳ ನೀಡುವ ಪ್ರಯತ್ನವನ್ನು ವಿರೋಧಿಸಿದ ಆರು ವರ್ಷದ ವಿದ್ಯಾರ್ಥಿನಿಯನ್ನು ಕೊಂದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ದಾಹೋಡ್ ತಾಲೂಕಿನ ಸಿಂಗ್ವಾಡ್ ಗ್ರಾಮದ ಶಾಲಾ ಕಾಂಪೌಂಡ್‌ನಲ್ಲಿ ಗುರುವಾರ ಮಗುವಿನ ಶವ ಪತ್ತೆಯಾದ ನಂತರ ಪೊಲೀಸರು ತನಿಖೆ ಆರಂಭಿಸಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಶಾಲಾ ಪ್ರಾಂಶುಪಾಲ ಗೋವಿಂದ್ ನಾಥ್ ಅವರು, ಲೈಂಗಿಕ ಕಿರುಕುಳ ನೀಡುವ ಪ್ರಯತ್ನವನ್ನು ವಿರೋಧಿಸಿದ ಬಾಲಕಿಯನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ರಾಜದೀಪ್ ಸಿಂಗ್ ಝಾಲಾ ಅವರು ತಿಳಿಸಿದ್ದಾರೆ.
"ಗುರುವಾರ ಬೆಳಗ್ಗೆ 10.20ರ ಸುಮಾರಿಗೆ ಕಾರಿನಲ್ಲಿ ಹೋಗುತ್ತಿದ್ದ ಪ್ರಾಂಶುಪಾಲರು, ಬಾಲಕಿಯ ತಾಯಿಯ ಕೋರಿಕೆಯ ಮೇರೆಗೆ ಮಗುವನ್ನು ತಮ್ಮ ಕಾರಿನಲ್ಲಿ ಶಾಲೆಗೆ ಕರೆದುಕೊಂಡು ಹೋಗಲು ಒಪ್ಪಿದರು. ಆದರೆ ಆ ದಿನ ಬಾಲಕಿ ಶಾಲೆಗೆ ಬಂದಿರಲಿಲ್ಲ ಎಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪೊಲೀಸರಿಗೆ ತಿಳಿಸಿದ್ದಾರೆ.
ಆರಂಭದಲ್ಲಿ ಪ್ರಿನ್ಸಿಪಾಲ್, ಬಾಲಕಿಯನ್ನು ತನ್ನ ಕಾರಿನಲ್ಲಿ ಶಾಲೆಗೆ ಕರೆದುಕೊಂಡು ಹೋಗಿ ಬಿಟ್ಟಿರುವುದಾಗಿ ಹೇಳಿದ್ದರು. ಆದರೆ ಪೊಲೀಸರ ತೀವ್ರ ವಿಚಾರಣೆ ಬಳಿಕ ಬಾಲಕಿಯನ್ನು ತಾನೇ ಕೊಂದಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.
ಕಾರಿನಲ್ಲಿ ಶಾಲೆಗೆ ಹೋಗುವಾಗ ದಾರಿಯಲ್ಲಿ ಪ್ರಾಂಶುಪಾಲರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾರೆ. ಅವಳು ವಿರೋಧಿಸಿದಾಗ ಮತ್ತು ಬಾಲಕಿ ಕಿರುಚುವುದನ್ನು ತಡೆಯಲು ಅವಳ ಬಾಯಿ ಮತ್ತು ಮೂಗನ್ನು ಗಟ್ಟಿಯಾಗಿ ಮುಚ್ಚಿದ್ದಾರೆ. ಇದರಿಂದ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ಝಲಾ ತಿಳಿಸಿದ್ದಾರೆ.
"ಪ್ರಾಂಶುಪಾಲರು ಬಾಲಕಿಯ ಶವದೊಂದಿಗೆ ಶಾಲೆಗೆ ತೆರಳಿ, ಕಾರನ್ನು ದೂರದಲ್ಲಿಯೇ ನಿಲ್ಲಿಸಿದ್ದಾರೆ. ಸಂಜೆ 5 ಗಂಟೆಗೆ ಅವರು ಶವವನ್ನು ಹೊರತೆಗೆದು ಶಾಲಾ ಕಟ್ಟಡದ ಹಿಂದೆ ಎಸೆದಿದ್ದಾರೆ. ನಂತರ ಆಕೆಯ ಶಾಲಾ ಬ್ಯಾಗ್ ಮತ್ತು ಚಪ್ಪಲಿಗಳನ್ನು ಆಕೆಯ ತರಗತಿಯಲ್ಲಿಟ್ಟಿದ್ದಾರೆ" ಎಂದು ಝಲಾ ಹೇಳಿದ್ದಾರೆ.
ಬಾಲಕಿಯ ಶವ ಪತ್ತೆಯಾದ ಒಂದು ದಿನದ ನಂತರ, ಆಕೆಯ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ಮಗು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದೆ ಎಂದು ಝಲಾ ತಿಳಿಸಿದ್ದಾರೆ.
Advertisement