
ಚೆನ್ನೈ: ಚೆನ್ನೈನ ಪೂರ್ವ ಕರಾವಳಿ ರಸ್ತೆಯ ಅಕ್ಕರೈ ಬಳಿ ಇಂದು ಮುಂಜಾನೆ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ರೌಡಿ ಶೀಟರ್ 'ಸೀಜಿಂಗ್' ರಾಜಾ ಸಾವನ್ನಪ್ಪಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ತಮಿಳುನಾಡಿನ ಮಾಜಿ ಬಿಎಸ್ ಪಿ ಅಧ್ಯಕ್ಷ ಕೆ ಆರ್ಮ್‌ಸ್ಟ್ರಾಂಗ್ ಅವರ ಹತ್ಯೆಯ ತನಿಖೆ ನಡೆಸುತ್ತಿರುವ ವಿಶೇಷ ಪೊಲೀಸ್ ತಂಡದಿಂದ ನಿನ್ನೆ ಆಂಧ್ರ ಪ್ರದೇಶದಲ್ಲಿ ಬಂಧಿಸಲ್ಪಟ್ಟ ರಾಜಾ, ಪೊಲೀಸರ ಮೇಲೆ ದಾಳಿ ಮಾಡಲು ಪ್ರಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿದ್ದಾರೆ.
ಕೆಲವೆಡೆ ಸಂಗ್ರಹಿಸಿಟ್ಟಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಪೊಲೀಸರು ಆತನನ್ನು ಕರೆದೊಯ್ಯುವಾಗ ಈ ಘಟನೆ ನಡೆದಿದೆ. ದೇಶಿ ರಿವಾಲ್ವರ್‌ನಿಂದ ಪೊಲೀಸರ ಮೇಲೆ ರಾಜಾ ಗುಂಡು ಹಾರಿಸಿದಾಗ, ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಇದರಿಂದ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಎಡಿಜಿಪಿ ಎ ಅರುಣ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಚೆನ್ನೈ ಪೊಲೀಸರು ನಡೆಸಿದ ಮೂರನೇ ಪೊಲೀಸ್ ಎನ್‌ಕೌಂಟರ್ ಇದಾಗಿದೆ. ಇದಕ್ಕೂ ಮುನ್ನ ಜುಲೈ 13 ರಂದು ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣದಲ್ಲಿ ರೌಡಿ ಶೀಟರ್ ತಿರುವೆಂಗಡಂ ಅವರನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿತ್ತು. ಕಳೆದ ವಾರ ಮತ್ತೋರ್ವ ರೌಡಿ ಶೀಟರ್ 'ಕಾಕತೊಪ್ಪು' ಬಾಲಾಜಿಯನ್ನು ಗುಂಡಿಕ್ಕಿ ಪೊಲೀಸರು ಹತ್ಯೆ ಮಾಡಿದ್ದರು.
Advertisement