
ತಿರುಪತಿ: ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿ ತಿರುಮಲದ ಪ್ರಸಿದ್ಧ ವೆಂಕಟೇಶ್ವರ ದೇವಾಲಯದ ಲಡ್ಡುವಿನಲ್ಲಿ ಪ್ರಾಣಿ ಜನ್ಯ ಕೊಬ್ಬಿನಾಂಶ ಬಳಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದ ದೇವಾಲಯದಲ್ಲಿ ಶಾಂತಿ ಹೋಮ, ಶುದ್ಧೀಕರಣ ಧಾರ್ಮಿಕ ಚಟುವಟಿಕೆಗಳು ಆರಂಭವಾಗಿವೆ.
ನಾಲ್ಕು ಗಂಟೆಗಳ ಕಾಲ ಶಾಂತಿಯ ಹೋಮ ಪಂಚಗವ್ಯ ಪ್ರೊಕ್ಷಣೆ ಶುದ್ದೀಕರಣ ಕಾರ್ಯ ನಡೆಸಲಾಗಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.
ತಿರುಪತಿ ತಿರುಮಲ ದೇವಸ್ಥಾನ ಸಮಿತಿ ಆಶ್ರಯದಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೂ ಶಾಂತಿ ಹೋಮ ಪಂಚಗವ್ಯ ಪ್ರೋಕ್ಷಣೆ ನಡೆಸಲಾಗಿದೆ. ಮಧ್ಯಾಹ್ನದವರೆಗೂ ಇನ್ನೂ ಹಲವು ಧಾರ್ಮಿಕ ಶುದ್ದೀಕರಣ ಕಾರ್ಯಗಳು ನಡೆಯಲಿದ್ದು, ಹಲವು ಪ್ರಮುಖರು ಭಾಗಿಯಾಗಿರುವುದಾಗಿ TTD ಮೂಲಗಳು ಖಚಿತಪಡಿಸಿವೆ.
ಈ ಆಚರಣೆಗಳು ಕೆಟ್ಟದನ್ನು ನಿವಾರಿಸುತ್ತದೆ ಮತ್ತು ಭಕ್ತರ ಯೋಗಕ್ಷೇಮದ ಜೊತೆಗೆ ಲಡ್ಡುವಿನ ಪಾವಿತ್ರ್ಯತೆಯನ್ನು ಪುನರ್ ಸ್ಥಾಪಿಸುತ್ತದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜೆ ಶ್ಯಾಮಲಾ ರಾವ್ ಹೇಳಿದ್ದಾರೆ.
Advertisement