ನವದೆಹಲಿ: ತಿರುಪತಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಕಲಬೆರಕೆ ಆರೋಪದ ಹಿನ್ನೆಲೆಯಲ್ಲಿ ತಿರುಪತಿ ತಿರುಮಲ ದೇವಸ್ಥಾನಕ್ಕೆ ತುಪ್ಪ ಪೂರೈಸಿದ ತಮಿಳುನಾಡು ಮೂಲದ ಕಂಪನಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(FSSAI) ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
2011ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ(ಆಹಾರ ಉತ್ಪನ್ನಗಳ ಗುಣಮಟ್ಟ ಮತ್ತು ಆಹಾರ ಸೇರ್ಪಡೆಗಳು) ನಿಯಮಾವಳಿಗಳ ಉಲ್ಲಂಘನೆಗಾಗಿ ನಿಮ್ಮ ಪರವಾನಗಿಯನ್ನು ಏಕೆ ಅಮಾನತುಗೊಳಿಸಬಾರದು ಎಂದು ಆಹಾರ ನಿಯಂತ್ರಕರು ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ನೀಡಿದ ನೋಟಿಸ್‌ನಲ್ಲಿ ಪ್ರಶ್ನಿಸಿದೆ.
ನೋಟಿಸ್ ಪ್ರಕಾರ, ದಿಂಡಿಗಲ್‌ನಲ್ಲಿರುವ ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ಕಳೆದ ನಾಲ್ಕು ವರ್ಷಗಳಿಂದ ತಿರುಮಲ ತಿರುಪತಿ ದೇವಸ್ಥಾನಕ್ಕೆ(ಟಿಟಿಡಿ) ತುಪ್ಪವನ್ನು ಪೂರೈಸುವ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ಮಂಗಳಗಿರಿ(ಆಂಧ್ರಪ್ರದೇಶ) ಇನ್‌ಸ್ಟಿಟ್ಯೂಟ್ ಆಫ್ ಪ್ರಿವೆಂಟಿವ್ ಮೆಡಿಸಿನ್ ನಿರ್ದೇಶಕರಿಂದ ಮಾಹಿತಿ ಪಡೆಯಲಾಗಿದೆ ಎಂದು ಎಫ್‌ಎಸ್‌ಎಸ್‌ಎಐ ಹೇಳಿದೆ.
ಮಾಹಿತಿಯ ಪ್ರಕಾರ, ಟಿಟಿಡಿಯ ತುಪ್ಪ ಖರೀದಿ ಸಮಿತಿಯು ಪರೀಕ್ಷೆಗಾಗಿ ಟಿಟಿಡಿಗೆ ತುಪ್ಪ ಸರಬರಾಜು ಮಾಡಿದ ಎಲ್ಲಾ ಕಂಪನಿಗಳ ಮಾದರಿಗಳನ್ನು ಗುಜರಾತ್‌ನ ಆನಂದ್‌ನಲ್ಲಿರುವ ಎನ್‌ಡಿಡಿಬಿ ಕ್ಯಾಲ್ಫ್ ಲ್ಯಾಬ್‌ಗೆ ಕಳುಹಿಸಿದೆ.
"ಪರೀಕ್ಷೆಯಲ್ಲಿ ನಿಮ್ಮ ಸಂಸ್ಥೆಯ M/s. A R ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ (FSSAI ಸೆಂಟ್ರಲ್ ಲೈಸೆನ್ಸ್ ಸಂಖ್ಯೆ 10014042001610) ಮಾದರಿಯು ನಿಯತಾಂಕಗಳನ್ನು ಪೂರೈಸಲು ವಿಫಲವಾಗಿದೆ ಮತ್ತು ನಿಮ್ಮ ಸಂಸ್ಥೆಯನ್ನು EO, TTD ನಿಂದ ಕಪ್ಪುಪಟ್ಟಿಗೆ ಸೇರಿಸಲಾಗಿದೆ" ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
Advertisement