ದೆಹಲಿ: ಬಾಡಿಗೆಗೆ ಇದ್ದ ಯುವತಿ ಬೆಡ್ ರೂಮಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ್ದ ಮನೆ ಮಾಲೀಕನ ಬಂಧನ!

ಸಂತ್ರಸ್ತ ಯುವತಿ ಐಎಎಸ್ ಆಕಾಂಕ್ಷಿಯಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಪೂರ್ವ ದೆಹಲಿಯ ಶಕರ್‌ಪುರ ಪ್ರದೇಶದಲ್ಲಿ ತನ್ನ ಮಹಿಳಾ ಬಾಡಿಗೆದಾರರ ಮನೆಯ ಬೆಡ್ ರೂಮ್ ಮತ್ತು ವಾಶ್‌ರೂಮ್‌ನಲ್ಲಿ ಹಿಡನ್ ಕ್ಯಾಮೆರಾಗಳನ್ನು ಅಳವಡಿಸಿದ್ದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಸಂತ್ರಸ್ತ ಯುವತಿ ಐಎಎಸ್ ಆಕಾಂಕ್ಷಿಯಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು ಮತ್ತು ನಗರದಿಂದ ಹೊರಗೆ ಹೋಗುವ ಮುನ್ನ ಮನೆಯ ಕೀಯನ್ನು ತನ್ನ ಮನೆ ಮಾಲೀಕನ ಮಗ ಕರಣ್‌ಗೆ ನೀಡುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಮಹಿಳೆ ತನ್ನ ವಾಟ್ಸಾಪ್‌ನಲ್ಲಿ ಕೆಲವು ವಿಚಿತ್ರ ಚಟುವಟಿಕೆಗೆಳು ನಡೆಯುತ್ತಿರುವುದನ್ನು ಗಮನಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಉಪ ಆಯುಕ್ತ(ಪೂರ್ವ) ಅಪೂರ್ವ ಗುಪ್ತಾ ಅವರು ಹೇಳಿದ್ದಾರೆ.

ಪೊಲೀಸರು "ಮಹಿಳೆಗೆ ತಾನು ಲಿಂಕ್ ಮಾಡಿದ ಡಿವೈಸ್ ಗಳನ್ನು ಪರೀಕ್ಷಿಸಲು ಸಲಹೆ ನೀಡಿದ್ದಾರೆ. ಪರಿಶೀಲಿಸಿದಾಗ ಅನಾಮಧೇಯ ಲ್ಯಾಪ್ ಟಾಪ್ ಒಂದು ಆಕೆಯ ವಾಟ್ಸಪ್ ಖಾತೆಯ ಜೊತೆಗೆ ಲಿಂಕ್ ಆಗಿತ್ತು. ತಕ್ಷಣವೇ ಮಹಿಳೆ ಲಾಗ್ ಔಟ್ ಆಗಿದ್ದಾರೆ ಮತ್ತು ತನ್ನ ಮನೆಯಲ್ಲಿ ಹಿಡನ್ ಕ್ಯಾಮೆರಾಗಳು ಅಥವಾ ಕಣ್ಗಾವಲು ಸಾಧನಗಳಿಗಾಗಿ ಶೋಧಿಸಿದ್ದಾರೆ. ಈ ವೇಳೆ ಅವರ ಬಾತ್ ರೂಮ್ ನ ಬಲ್ಬ್ ಹೋಲ್ಡರ್ನಲ್ಲಿ ಹಿಡನ್ ಕ್ಯಾಮೆರಾ ಪತ್ತೆಯಾಗಿದೆ.

ಸಾಂದರ್ಭಿಕ ಚಿತ್ರ
ಮಹಿಳಾ ಬಾಡಿಗೆದಾರರ ಕೊಣೆ, ಬಾತ್ ರೂಂನಲ್ಲಿ ಹಿಡನ್ ಕ್ಯಾಮೆರಾ ಫಿಕ್ಸ್ ಮಾಡಿದ್ದ ಅಪಾರ್ಟ್ ಮೆಂಟ್ ಮಾಲೀಕನ ಬಂಧನ

ಈ ಸಂಬಂಧ ಯುವತಿ ಸೋಮವಾರ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಪೊಲೀಸ್ ತಂಡ ಸಂಪೂರ್ಣ ಹುಡುಕಾಟ ನಡೆಸಿತು ಮತ್ತು ಆಕೆಯ ಮಲಗುವ ಕೋಣೆಯ ಬಲ್ಬ್ ಹೋಲ್ಡರ್‌ನಲ್ಲಿ ಅಳವಡಿಸಲಾದ ಮತ್ತೊಂದು ಕ್ಯಾಮೆರಾವನ್ನು ಪತ್ತೆ ಮಾಡಲಾಗಿದೆ ಎಂದು ಗುಪ್ತಾ ಹೇಳಿದ್ದಾರೆ.

ತಾನು ಊರಿಗೆ ಹೋದಾಗಲ್ಲೆಲ್ಲಾ ಅದೇ ಕಟ್ಟಡದ ಬೇರೆ ಮಹಡಿಯಲ್ಲಿ ವಾಸಿಸುವ ಮನೆ ಮಾಲೀಕನ ಪುತ್ರ ಕರಣ್‌ಗೆ ತನ್ನ ಮನೆಯ ಕೀ ಕೊಟ್ಟಿದ್ದೇನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.

ಈ ಸಂಬಂಧ ಬಿಎನ್‌ಎಸ್‌ನ ಸೆಕ್ಷನ್ 77(ವೋಯರಿಸಂ) ಅಡಿಯಲ್ಲಿ ಶಕರ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರಣ್‌ನನ್ನು ಬಂಧಿಸಲಾಗಿದೆ.

ಕರಣ್ ಪದವೀಧರರಾಗಿದ್ದು, ಕಳೆದ ಏಳು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com