ಜಮ್ಮು-ಕಾಶ್ಮೀರ: ಜಮ್ಮುವಿನ ದೋಡಾ ಜಿಲ್ಲೆಯಲ್ಲಿ ಶನಿವಾರ ರಸ್ತೆಯಲ್ಲಿ ಸ್ಕೀಡಾದ ಕಾರೊಂದು ಚೆನಾಬ್ ನದಿಗೆ ಉರುಳಿದ ಪರಿಣಾಮ ಬಾಲಕಿ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಕಿಶ್ತ್ವಾರ್ ಜಿಲ್ಲೆಯ ದ್ರಬ್ಶಾಲಾ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದಾಗ ಗರ್ಸೂ ಗ್ರಾಮದ ಬಳಿ ಮಧ್ಯಾಹ್ನ 1. 45 ರ ಸುಮಾರಿಗೆ ಅಪಘಾತ ಸಂಭವಿಸಿದೆ.
ಕಾರು ನದಿಯ ತಳಕ್ಕೆ ಅಪ್ಪಳಿಸುವ ಮೊದಲು 200 ಅಡಿಗಳಷ್ಟು ಕೆಳಗೆ ಉರುಳಿ ಬಿದ್ದಿದೆ. ನಂತರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಇಮ್ರಾನ್ ಹುಸೇನ್ (35) ಮತ್ತು ಸುಮಯ್ಯಾ (17) ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇಕ್ರಾ ಬಾನೊ (16) ಅವರನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement