ಮುಂಬೈ: ರಸ್ತೆಯಲ್ಲಿ ಪುಂಡಾಟದ ವಿಡಿಯೋಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ರವೀನಾ ಟಂಡನ್ ವಿರುದ್ಧ ಪ್ರಿಲಾನ್ಸ್ ರಿಪೋರ್ಟರ್ ದಾಖಲಿಸಿರುವ ಮಾನನಷ್ಟ ಹಾಗೂ ಕ್ರಿಮಿನಲ್ ಬೆದರಿಕೆಯ ದೂರು ಕುರಿತು ತನಿಖೆ ನಡೆಸುವಂತೆ ಮುಂಬೈ ನ್ಯಾಯಾಲಯವೊಂದು ಪೊಲೀಸರಿಗೆ ಸೋಮವಾರ ಸೂಚಿಸಿದೆ.
ಈ ಪ್ರಕರಣ ಸಂಬಂಧ ಜ.3, 2025 ರೊಳಗೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ನಿರ್ದೇಶಿಸಿದೆ. ನಟಿ ವಿರುದ್ಧ ಐಪಿಸಿ ಸೆಕ್ಷನ್ 500 ( ಮಾನನಷ್ಟಕ್ಕೆ ಶಿಕ್ಷೆ) 506 ( ಕ್ರಿಮಿನಲ್ ಬೆದರಿಕೆ) ಸೆಕ್ಷನ್ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಬೋರಿವ್ಲಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಮೊಹ್ಸಿನ್ ಶೇಖ್ ದೂರು ದಾಖಲಿಸಿದ್ದರು.
ಬಾಂದ್ರಾದ ರಸ್ತೆಯಲ್ಲಿ ರವೀನಾ ಟಂಡನ್ ಪುಂಡಾಟ ನಡೆಸಿದ್ದು ಎನ್ನಲಾದ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಡಿಲೀಟ್ ಮಾಡದ ರಿಪೋರ್ಟರ್ ಸುಲಿಗೆಕೋರ ಎಂದು ನಟ ತನ್ನ ವಕೀಲರ ಮೂಲಕ ಹೇಳಿದ್ದಾರೆ ಎಂದು ಶೇಖ್ ಪರ ವಕೀಲರು ಹೇಳಿದ್ದಾರೆ.
ರವೀನಾ ಟಂಡನ್ ಮನೆ ಬಳಿ ತನ್ನ ತಾಯಿ, ಸಹೋದರಿ ಮತ್ತು ಸೊಸೆ ಜೊತೆಗೆ ನಡೆದು ಹೋಗುತ್ತಿದ್ದಾಗ ನಟಿಯ ಕಾರು ಚಾಲಕ ತನ್ನ ತಾಯಿಗೆ ಕಾರು ಗುದ್ದಿಸಿದ್ದಾನೆ. ಅದನ್ನು ಪ್ರಶ್ನಿಸಿದಾಗ ರವೀನಾ ಟಂಡನ್ ಹಲ್ಲೆ ನಡೆಸಿದ್ದಾರೆ ಎಂದು ವ್ಯಕ್ತಿ ಆರೋಪಿಸುವ ದೃಶ್ಯ ವೈರಲ್ ವಿಡಿಯೋದಲ್ಲಿದೆ. ಆದಾಗ್ಯೂ, ಮುಂಬೈ ಪೊಲೀಸರ ವಿಚಾರಣೆಯಲ್ಲಿ ರವೀನಾ ಟಂಡನ್ ಕಾರು ಯಾರಿಗೂ ಡಿಕ್ಕಿ ಹೊಡೆದಿಲ್ಲ ಎಂದು ಹೇಳಲಾಗಿತ್ತು.
ತದನಂತರ ರಿಪೋರ್ಟರ್ ಗೆ ಮಾನನಷ್ಟ ನೋಟಿಸ್ ಕಳುಹಿಸಿದ್ದ ರವೀನಾ ಟಂಡನ್, ಎಕ್ಸ್ ನಲ್ಲಿ ಮಾಡಿರುವ ಪೋಸ್ಟ್ ಕುರಿತು ಸತ್ಯಾಂಶ ತಿಳಿಸುವಂತೆ ಮತ್ತು ವಿಡಿಯೋ ಡಿಲೀಟ್ ಮಾಡುವಂತೆ ಮನವಿ ಮಾಡಿದ್ದರು. ಆದಾಗ್ಯೂ, ಕೆಲಸ ಹಾಗೂ ಸಮಾಜದ ಒಬ್ಬ ಗೌರವಯುತ ನಾಗರಿಕನಾಗಿ ವಿಡಿಯೋವನ್ನು ಪೋಸ್ಟ್ ಮಾಡಿದ್ದೇನೆ. ರೂ. 100 ಕೋಟಿ ಮೊತ್ತದ ಮಾನನಷ್ಟದ ನೋಟಿಸ್ ಕಳುಹಿಸಿರುವುದು ಸುಲಿಗೆ ಮತ್ತು ಬೆದರಿಕೆಯ ಪ್ರಯತ್ನವಾಗಿದೆ ಎಂದು ದೂರುದಾರ ಶೇಕ್ ನ್ಯಾಯಾಲಯ ಮುಂದೆ ಹೇಳಿದ್ದಾರೆ.
Advertisement