ದೇಶಿ ಹಸುಗಳನ್ನು 'ರಾಜ್ಯಮಾತಾ-ಗೋಮಾತೆ' ಎಂದು ಮಹಾರಾಷ್ಟ್ರ ಸರ್ಕಾರ ಘೋಷಣೆ

ವೇದಗಳ ಕಾಲದಿಂದಲೂ ಹಸುಗಳು ಹೊಂದಿರುವ ಪ್ರಾಮುಖ್ಯತೆಯನ್ನು ಪರಿಗಣಿಸಿ ಅವುಗಳನ್ನು 'ರಾಜ್ಯಮಾತಾ-ಗೋಮಾತೆ' ಎಂದು ಘೋಷಿಸಿರುವುದಾಗಿ ಸರ್ಕಾರದ ಅಧಿಕೃತ ಅಧಿಸೂಚನೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಸೋಮವಾರ ದೇಸಿ(ಸ್ಥಳೀಯ) ಹಸುಗಳನ್ನು 'ರಾಜ್ಯಮಾತಾ-ಗೋಮಾತೆ' ಎಂದು ಘೋಷಿಸಿದೆ.

ವೇದಗಳ ಕಾಲದಿಂದಲೂ ಹಸುಗಳು ಹೊಂದಿರುವ ಪ್ರಾಮುಖ್ಯತೆಯನ್ನು ಪರಿಗಣಿಸಿ ಅವುಗಳನ್ನು 'ರಾಜ್ಯಮಾತಾ-ಗೋಮಾತೆ' ಎಂದು ಘೋಷಿಸಿರುವುದಾಗಿ ಸರ್ಕಾರದ ಅಧಿಕೃತ ಅಧಿಸೂಚನೆ ತಿಳಿಸಿದೆ.

ಮಾನವನ ಪೋಷಣೆಯಲ್ಲಿ ದೇಶಿ ಹಸುವಿನ ಹಾಲಿನ ಪ್ರಾಮುಖ್ಯತೆ, ಆಯುರ್ವೇದ ಮತ್ತು ಪಂಚಗವ್ಯ ಚಿಕಿತ್ಸೆ ಮತ್ತು ಸಾವಯವ ಕೃಷಿಯಲ್ಲಿ ಹಸುವಿನ ಗೊಬ್ಬರದ ಬಳಕೆ ಇತರ ಅಂಶಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಕೃಷಿ, ಹೈನುಗಾರಿಕೆ ಅಭಿವೃದ್ಧಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಹೊರಡಿಸಿದ ಸರ್ಕಾರದ ನಿರ್ಣಯ ತಿಳಿಸಿದೆ.

"ದೇಶಿ ಹಸುಗಳು ರೈತರಿಗೆ ವರದಾನವಾಗಿದೆ. ಆದ್ದರಿಂದ ಮಹಾರಾಷ್ಟ್ರ ಸರ್ಕಾರವು ಅವುಗಳಿಗೆ 'ರಾಜ್ಯ ಮಾತಾ' ಸ್ಥಾನಮಾನ ನೀಡಲು ನಿರ್ಧರಿಸಿದೆ. ಹೆಚ್ಚುವರಿಯಾಗಿ, ಗೋಶಾಲೆಗಳಲ್ಲಿ ದೇಶಿ ಹಸುಗಳನ್ನು ಸಾಕಲು ನೆರವು ನೀಡಲಾಗುವುದು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಸಾಂದರ್ಭಿಕ ಚಿತ್ರ
ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ, ಡಿಜಿಪಿಗೆ ಚುನಾವಣಾ ಆಯೋಗ ತರಾಟೆ

ಮಹಾರಾಷ್ಟ್ರ ಮುಖ್ಯಮಂತ್ರಿಗಳ ಕಚೇರಿಯ ಹೇಳಿಕೆಯ ಪ್ರಕಾರ, ರಾಜ್ಯ ಸಚಿವ ಸಂಪುಟವು ದೇಶಿ ಹಸುಗಳನ್ನು ಸಾಕಲು ದಿನಕ್ಕೆ 50 ರೂಪಾಯಿ ಸಬ್ಸಿಡಿ ಯೋಜನೆಗೆ ಅನುಮೋದನೆ ನೀಡಿದೆ.

“ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಕಡಿಮೆ ಆದಾಯದಿಂದ ಗೋಶಾಲೆಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿವೆ. ಅವುಗಳನ್ನು ಬಲಪಡಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ ಮತ್ತು ಈ ಯೋಜನೆಯನ್ನು ಮಹಾರಾಷ್ಟ್ರ ಗೋಸೇವಾ ಆಯೋಗವು ಆನ್‌ಲೈನ್‌ ಮೂಲಕ ಕಾರ್ಯಗತಗೊಳಿಸಲಿದೆ” ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com