ಮುಂಬೈ: ಅಟಲ್ ಸೇತುವೆ ಮೇಲಿಂದ ಜಿಗಿದ ವ್ಯಕ್ತಿ; ಶೋಧ, ರಕ್ಷಣಾ ಕಾರ್ಯಾಚರಣೆ

ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಸೆವ್ರಿಯಲ್ಲಿ ಈ ಘಟನೆ ಸಂಭವಿಸಿದ್ದು, ಪೊಲೀಸರು ಆ ವ್ಯಕ್ತಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಟಲ್ ಸೇತು
ಅಟಲ್ ಸೇತುOnline Desk
Updated on

ಮುಂಬೈ: ವ್ಯಕ್ತಿಯೊಬ್ಬರು ಸೋಮವಾರ ಬೆಳಗ್ಗೆ ಟ್ರಾನ್ಸ್-ಹಾರ್ಬರ್ ಅಟಲ್ ಸೇತುವೆ ಮೇಲೆ ಮೇಲೆ ಕಾರು ನಿಲ್ಲಿಸಿ, ಸಮುದ್ರಕ್ಕೆ ಜಿಗಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಸೆವ್ರಿಯಲ್ಲಿ ಈ ಘಟನೆ ಸಂಭವಿಸಿದ್ದು, ಪೊಲೀಸರು ಆ ವ್ಯಕ್ತಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎಸ್‌ಯುವಿ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬರು ಸೇತುವೆಯ ಸೈನ್‌ಬೋರ್ಡ್ ಬಳಿ ಕಾರು ನಿಲ್ಲಿಸಿ ಸಮುದ್ರಕ್ಕೆ ಹಾರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅಟಲ್ ಸೇತು
ಉದ್ಘಾಟನೆಯಾದ 5 ತಿಂಗಳಲ್ಲೇ ಅಟಲ್ ಸೇತು ರಸ್ತೆಯಲ್ಲಿ ಬಿರುಕು!

ಈ ಎಸ್ ಯುವಿ ಕಾರು ಸುಶಾಂತ್ ಚಕ್ರವರ್ತಿ ಎಂಬುವವರ ಹೆಸರಿನಲ್ಲಿ ವಾಹನ ನೋಂದಣಿಯಾಗಿದೆ. ದಾರಿಹೋಕರೊಬ್ಬರು ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ, ಸೆವ್ರಿ ಪೊಲೀಸ್ ಮತ್ತು ಕರಾವಳಿ ಪೊಲೀಸ್ ತಂಡಗಳು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಅಧಿಕಾರಿಗಳು ಆ ವ್ಯಕ್ತಿಯ ಕುಟುಂಬ ಸದಸ್ಯರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com