ಸೋನಿಯಾ ಮತ್ತು ಪ್ರಿಯಾಂಕಾ ಗಾಂಧಿ
ಸೋನಿಯಾ ಮತ್ತು ಪ್ರಿಯಾಂಕಾ ಗಾಂಧಿ

ರಾಜಸ್ಥಾನದಿಂದ ರಾಜ್ಯಸಭೆಗೆ ಸೋನಿಯಾ ಗಾಂಧಿ: ಅಮ್ಮನ ಕ್ಷೇತ್ರ ರಾಯ್‌ ಬರೇಲಿಯಿಂದ ಪ್ರಿಯಾಂಕಾ ಸ್ಪರ್ಧೆ?

ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದ ಐದು ವರ್ಷಗಳ ನಂತರ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಅವರು ದಶಕಗಳಿಂದ ಪ್ರತಿನಿಧಿಸುತ್ತಿರುವ ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಲೋಕಸಭೆಗೆ ಪಾದಾರ್ಪಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Published on

ನವದೆಹಲಿ: ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದ ಐದು ವರ್ಷಗಳ ನಂತರ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಅವರು ದಶಕಗಳಿಂದ ಪ್ರತಿನಿಧಿಸುತ್ತಿರುವ ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಲೋಕಸಭೆಗೆ ಪಾದಾರ್ಪಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾಗಾಂಧಿ ಅವರು ರಾಜ್ಯಸಭೆ ಚುನಾವಣೆಗೆ, ಬಹುತೇಕ ರಾಜಸ್ಥಾನದಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಫೆಬ್ರವರಿ 27 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ  ಕಾಂಗ್ರೆಸ್ ಪಕ್ಷವು ಸಜ್ಜಾಗುತ್ತಿದ್ದು,  77 ವರ್ಷದ ಸೋನಿಯಾ ಗಾಂಧಿಗೆ  ರಾಜಸ್ಥಾನ ಸುರಕ್ಷಿತ ಸ್ಥಾನ ಎಂದು ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

2019 ರಲ್ಲಿ ಚುನಾವಣಾ ಕಣದಿಂದ ಹೊರಗುಳಿಯಲು ಪ್ರಿಯಾಂಕಾ ಬಯಸಿದ್ದರೂ, 2024 ರ ಚುನಾವಣೆಯಲ್ಲಿ ತನ್ನ ಸಂಖ್ಯೆಯನ್ನು ಹೆಚ್ಚಿಸಲು ನೋಡುತ್ತಿರುವ ಕಾರಣ ಪಕ್ಷವು ಈ ಬಾರಿ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ತೆಲಂಗಾಣ ಮತ್ತು ಕರ್ನಾಟಕದ ನಾಯಕರಿಂದ ಪ್ರಿಯಾಂಕಾ ಸ್ಪರ್ಧಿಸಬೇಕೆಂದು ಬೇಡಿಕೆಯಿದ್ದರೂ, ಹಿಂದಿ ಭಾಷಿಗರ ಹೃದಯಭಾಗದಲ್ಲಿ  ಪ್ರಿಯಾಂಕಾ ಬಿಜೆಪಿಯನ್ನು ಎದುರಿಸಬೇಕು,  ಇಲ್ಲದಿದ್ದರೆ ಕಾಂಗ್ರೆಸ್ ಕೇವಲ ದಕ್ಷಿಣ ರಾಜ್ಯಗಳಿಗೆ ಸೀಮಿತವಾಗಿದೆ ಎಂಬ ಅಭಿಪ್ರಾಯವನ್ನು ಬಿಜೆಪಿ ಹರಡುತ್ತಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಪಕ್ಷದ ನಿರಾಶಾದಾಯಕ ಸ್ಥಿತಿಯನ್ನು ಪರಿಗಣಿಸಿ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹಾಲಿ ಕ್ಷೇತ್ರ ವಯನಾಡ್ ಹೊರತುಪಡಿಸಿ ಅಮೇಥಿಯಿಂದಲೂ ಸ್ಪರ್ಧಿಸಬೇಕು ಎಂಬ ಬಲವಾದ ಅಭಿಪ್ರಾಯವೂ ಕೇಳಿ ಬರುತ್ತಿದೆ. ಉತ್ತರ ಪ್ರದೇಶವು ಪಕ್ಷಕ್ಕೆ  ಬಹಳ ಮುಖ್ಯವಾದ ರಾಜ್ಯವಾಗಿದೆ , ಪಕ್ಷವು ಹಲವು ವರ್ಷಗಳಿಂದ ಇಲ್ಲಿ ಅವನತಿಯಲ್ಲಿದೆ. ಆದರೆ ಈಗ ಅಮೇಥಿಯಲ್ಲಿನ ಪರಿಸ್ಥಿತಿ 2019 ಕ್ಕಿಂತ ಭಿನ್ನವಾಗಿದೆ. ಹಾಲಿ ಸಂಸದೆ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕ್ಷೇತ್ರದ ಬಗ್ಗೆ ಅವರ ನಿರಾಸಕ್ತಿಯಿಂದ ಜನರು ಕೋಪಗೊಂಡಿದ್ದಾರೆ. ಈ ಬಾರಿ ರಾಹುಲ್ ಗಾಂಧಿ ಸ್ಪರ್ಧಿಸಿದರೆ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಹಿರಿಯ ಮುಖಂಡರೊಬ್ಬರು ಹೇಳಿದರು.

INDIA  ಮೈತ್ರಿ ಕೂಟದ ಸಮಾಜವಾದಿ ಪಕ್ಷ  ಅಮೇಥಿ ಮತ್ತು ರಾಯಬರೇಲಿ ಸೀಟುಗಳನ್ನು ಕಾಂಗ್ರೆಸ್‌ಗೆ ನೀಡಲು ಸಿದ್ಧವಾಗಿದೆ. ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ)ಗೆ ಸೇರ್ಪಡೆಗೊಳ್ಳಲು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಬದಲಾಗಿದ್ದು, ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಪಕ್ಷವು ಕಾಂಗ್ರೆಸ್‌ಗೆ 16-17 ಸ್ಥಾನಗಳನ್ನು ನೀಡಬಹುದು ಎಂದು ಮೂಲಗಳು ತಿಳಿಸಿವೆ.

ಅಮೇಥಿ ಲೋಕಸಭಾ ಕ್ಷೇತ್ರವು ಗಾಂಧಿ ಕುಟುಂಬದ ಪಾಕೆಟ್  ಆಗಿದ್ದರೂ, 2019 ರ ಲೋಕಸಭಾ ಚುನಾವಣೆಯಲ್ಲಿ, ರಾಹುಲ್ ಅವರು 55,000 ಮತಗಳಿಂದ ಸ್ಮೃತಿ ಇರಾನಿಯವರ ವಿರುದ್ಧ ಸೋತರು. ಆದಾಗ್ಯೂ, ಅವರು ತಮ್ಮ ಎರಡನೇ ಕ್ಷೇತ್ರ ಕೇರಳದ ವಯನಾಡಿನಲ್ಲಿ ಗೆದ್ದರು. 2004 ರಿಂದ ಗಾಂಧಿ ಅವರು ಅಮೇಥಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com