ರಾಹುಲ್ ಯಾತ್ರೆಯಲ್ಲಿ ಪಾಲ್ಗೊಳ್ಳಲು ಬಿಎಸ್ಪಿಯಿಂದ ಅಮಾನತುಗೊಂಡ ಸಂಸದ ಡ್ಯಾನಿಶ್ ಅಲಿ ನಿರ್ಧಾರ!

ಬಹುಜನ ಸಮಾಜ ಪಕ್ಷದಿಂದ ಅಮಾನತುಗೊಂಡಿರುವ ಲೋಕಸಭಾ ಸಂಸದ ಡ್ಯಾನಿಶ್ ಅಲಿ ಅವರು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಸೇರುವ ನಿರ್ಧಾರವನ್ನು ಭಾನುವಾರ ಪ್ರಕಟಿಸಿದ್ದಾರೆ.
ರಾಹುಲ್ ಗಾಂಧಿ ಅವರೊಂದಿಗೆ ಡ್ಯಾನಿಶ್ ಅಲಿ
ರಾಹುಲ್ ಗಾಂಧಿ ಅವರೊಂದಿಗೆ ಡ್ಯಾನಿಶ್ ಅಲಿ
Updated on

ನವದೆಹಲಿ: ಬಹುಜನ ಸಮಾಜ ಪಕ್ಷದಿಂದ ಅಮಾನತುಗೊಂಡಿರುವ ಲೋಕಸಭಾ ಸಂಸದ ಡ್ಯಾನಿಶ್ ಅಲಿ ಅವರು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಸೇರುವ ನಿರ್ಧಾರವನ್ನು ಭಾನುವಾರ ಪ್ರಕಟಿಸಿದ್ದಾರೆ. ಏಕತೆ ಮತ್ತು ನ್ಯಾಯಕ್ಕಾಗಿ ನಡೆಯುತ್ತಿರುವ ದೊಡ್ಡ ಅಭಿಯಾನದಲ್ಲಿ ಭಾಗವಹಿಸದಿದ್ದರೆ ರಾಜಕಾರಣಿಯಾಗಿ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾದ್ದಂತೆ ಎಂದು ಅವರು ಹೇಳಿದ್ದಾರೆ.  

ಕಳೆದ ತಿಂಗಳು ‘ಪಕ್ಷ ವಿರೋಧಿ’ ಚಟುವಟಿಕೆಗಳಿಗಾಗಿ ಬಿಎಸ್‌ಪಿ ಅಲಿ ಅವರನ್ನು ಅಮಾನತುಗೊಳಿಸಿತ್ತು. ಮಾಯಾವತಿ ನೇತೃತ್ವದ ಬಿಎಸ್‌ಪಿ ಎನ್ ಡಿಎ ಮತ್ತು ವಿರೋಧ ಪಕ್ಷಗಳ ಮೈತ್ರಿಕೂಟವಾದ ಇಂಡಿಯಾದಿಂದ ಅಂತರ ಕಾಯ್ದುಕೊಂಡಿದ್ದರೂ ಸಹ ಬಿಜೆಪಿ ಮತ್ತು ಅದರ ನೀತಿಗಳ ಮೇಲೆ ದಾಳಿ ಮಾಡುವಲ್ಲಿ ಅಲಿ ಸಕ್ರಿಯವಾಗಿ ವಿರೋಧ ಪಕ್ಷಗಳ ಕೂಟ ಸೇರುತ್ತಿದ್ದರು. ಇಂಫಾಲ್ ಗೆ ಬಂದಿಳಿದ ನಂತರ  ಭಾರತ್ ಜೋಡೋ ನ್ಯಾಯ ಯಾತ್ರೆಗೆ ಸೇರಲು ನಿರ್ಧರಿಸಿರುವುದಾಗಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿಳಿಸಿದ್ದಾರೆ. 

"ಇದು ನನಗೆ ಬಹಳ ಮುಖ್ಯವಾದ ಕ್ಷಣವಾಗಿದೆ. ಸಾಕಷ್ಟು ಆತ್ಮಾವಲೋಕನದ ನಂತರ ಇಲ್ಲಿಗೆ ಬಂದಿದ್ದೇನೆ. ಯಥಾಸ್ಥಿತಿ ಮತ್ತು ದಲಿತರು, ಹಿಂದುಳಿದವರು, ಬುಡಕಟ್ಟುಗಳು, ಅಲ್ಪಸಂಖ್ಯಾತರು ಮತ್ತು ಇತರ ಅಂಚಿನಲ್ಲಿರುವ ಮತ್ತು ಬಡ ವರ್ಗಗಳ ಶೋಷಣೆ ನಿರ್ಲಕ್ಷ್ಯವನ್ನು ಒಪ್ಪಿಕೊಳ್ಳುವುದು ಅಥವಾ  ದೇಶದಲ್ಲಿ ಈ ಭಯ, ದ್ವೇಷ, ಶೋಷಣೆ ಮತ್ತು ಆಳವಾಗುತ್ತಿರುವ ವಿಭಜನೆಯ ವಾತಾವರಣದ ವಿರುದ್ಧ ಅಭಿಯಾನ ಆರಂಭಿಸುವ ಎರಡು ಆಯ್ಕೆಗಳಿದ್ದವು.  ನನ್ನ ಆತ್ಮಸಾಕ್ಷಿಯು ಎರಡನೇ ಆಯ್ಕೆಯನ್ನು ತೆಗೆದುಕೊಳ್ಳಲು  ಒತ್ತಾಯಿಸಿತು ಎಂದು ಅವರು ವಿವರಿಸಿದ್ದಾರೆ. 

ಸಂಸತ್ತಿನಲ್ಲಿ ದಾಳಿಯಾದಾಗ ನಾನು ನಾನೇ ಆಗಿದ್ದರಿಂದ ಸಹಜವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು. ಅಲ್ಲಿ ಆಡಳಿತ ಪಕ್ಷದ ಸದಸ್ಯರು ನನ್ನ ಮತ್ತು ನನ್ನ ಧರ್ಮದ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದರು ಎಂದು ಅವರು ಹೇಳಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com