ಹೊಸ ಸಂಹಿತೆಗಳ ಜಾರಿಗೂ ಮುನ್ನ ಅಪರಾಧಿಗಳ ಡೇಟಾ ಸಂಗ್ರಹ, ವಿನಿಮಯಕ್ಕೆ ಪ್ರತ್ಯೇಕ ಕ್ಲೌಡ್ ಸರ್ವರ್

ದಂಡಕ್ಕಿಂತಲೂ ಡೇಟಾ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವಂತೆ ದೇಶದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಒತ್ತಾಯಿಸಿದ್ದಾರೆ. 
ಸರ್ವರ್
ಸರ್ವರ್

ನವದೆಹಲಿ: ದಂಡಕ್ಕಿಂತಲೂ ಡೇಟಾ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವಂತೆ ದೇಶದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಒತ್ತಾಯಿಸಿದ್ದಾರೆ. 

ಈ ನಡುವೆ ಕೇಂದ್ರ ಗೃಹ ಸಚಿವಾಲಯ, ನ್ಯಾಯಾಲಯಗಳ ಎಲ್ಲಾ ದಾಖಲೆಗಳು, ಎಫ್‌ಐಆರ್‌ಗಳು, ಚಾರ್ಜ್ ಶೀಟ್‌ಗಳು ಮತ್ತು ಫಿಂಗರ್‌ಪ್ರಿಂಟ್‌ಗಳನ್ನು ಒಳಗೊಂಡಂತೆ ಡಿಜಿಟಲ್ ಅಪರಾಧ ಮತ್ತು ಕ್ರಿಮಿನಲ್ ದಾಖಲೆಗಳ ಸಂಗ್ರಹಣೆಗಾಗಿ ಪ್ರತ್ಯೇಕ, ದೇಶೀಯ ಕ್ಲೌಡ್ ಸರ್ವರ್ ನ್ನು ಅಭಿವೃಧ್ದಿಪಡಿಸಲು ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (BPR&D) ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಿದೆ.

ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ, ಮತ್ತು ಭಾರತೀಯ ಸಾಕ್ಷಿ ಅಧಿನಿಯಂ ಎಂಬ ಮೂರು ಕಾಯಿದೆಗಳ ಅನುಷ್ಠಾನ ಸನ್ನಿಹಿತದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 

ಸಮಿತಿಯು BPR&D ನ ಡೈರೆಕ್ಟರ್ ಜನರಲ್ ನೇತೃತ್ವದಲ್ಲಿರುತ್ತದೆ ಎಂದು ಗೃಹ ಸಚಿವಾಲಯದ ಮೂಲಗಳು ದೃಢಪಡಿಸಿವೆ. ಈ ಸಮಿತಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ (NIC), ಮತ್ತು ಸೈಬರ್ ಭದ್ರತಾ ಸಂಸ್ಥೆ "ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-) ಸದಸ್ಯರನ್ನು ಒಳಗೊಂಡಿರುತ್ತದೆ. 

ಕ್ಲೌಡ್ ಸರ್ವರ್ ಲಭ್ಯವಾದ ನಂತರ, ಸಂಬಂಧಪಟ್ಟ ಪೊಲೀಸ್ ಠಾಣೆಗಳು ಮತ್ತು ಇ-ಕೋರ್ಟ್‌ಗಳಿಂದ ಸಂಗ್ರಹಿಸಲಾದ ಡೇಟಾವನ್ನು ಹಂಚಿಕೊಳ್ಳಲು ಮತ್ತು ಮರುಪಡೆಯಲು, ನ್ಯಾಯಾಲಯಗಳಲ್ಲಿ ತ್ವರಿತ ವಿಚಾರಣೆಗೆ ಅನುಕೂಲವಾಗುವಂತೆ ಕಾರ್ಯವಿಧಾನವನ್ನು ರೂಪಿಸಲಾಗುವುದು ಎಂದು ಮೂಲಗಳು ಉಲ್ಲೇಖಿಸಿವೆ.

DG BPR&D ಅಡಿಯಲ್ಲಿನ ಸಮಿತಿ ಹೊಸ ಕ್ರಿಮಿನಲ್ ಕಾನೂನುಗಳನ್ನು ಕಾರ್ಯಗತಗೊಳಿಸಲು ರಾಜ್ಯ ಮತ್ತು ಕೇಂದ್ರ ಎರಡೂ ಸಂಸ್ಥೆಗಳಿಂದ ಡೇಟಾದ ಮಾಹಿತಿಯನ್ನು ಪಡೆಯುವುದಕ್ಕೆ ನೀತಿ ಚೌಕಟ್ಟನ್ನು ರೂಪಿಸುತ್ತದೆ, ಲಭ್ಯವಿರುವ ಎಲ್ಲಾ ಮಾಹಿತಿಯು ಯಾವಾಗಲೂ ಸುರಕ್ಷಿತ ಮತ್ತು ಸಂರಕ್ಷಿತ ವಾತಾವರಣದಲ್ಲಿ ಉಳಿಯುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com