ಅಸ್ಸಾಂ: ಸಿಎಂ ಹಿಮಂತಾ ಬಿಸ್ವಾ ಶರ್ಮಾ ಮೋದಿಯ ಚೇಲಾ- ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ನಾಗಾಂವ್: ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ಪ್ರಧಾನಿ ನರೇಂದ್ರ ಮೋದಿ ಅವರ ಚೇಲಾ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.
ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಮಾತನಾಡಿದ ಖರ್ಗೆ, ಶರ್ಮಾ ಅವರು ದೇಶದ ದಲಿತರು, ಅಲ್ಪಸಂಖ್ಯಾತರು ಮತ್ತು ದೇಶದ ಹಿಂದುಳಿದ ವರ್ಗಗಳ ಬಗ್ಗೆ "ಹೆದರಿದ್ದಾರೆ" ಎಂದರು.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಮೇಲೆ ಅಸ್ಸಾಂನಲ್ಲಿ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ ಹಿನ್ನೆಲೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಖರ್ಗೆ, ಈ ಹಿಂದೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ಕೈಗೊಳ್ಳಲಾಗಿತ್ತು. ಆಗ ಎಲ್ಲೂ ಕಲ್ಲು ತೂರಾಟ ನಡೆದಿಲ್ಲ. ಹೆದರಿಸುವ ಪ್ರಯತ್ನ ನಡೆದಿಲ್ಲ. ಅಸ್ಸಾಂನಲ್ಲಿ ಇದು ಏಕೆ ನಡೆಯುತ್ತಿದೆ? ಎಂದರೆ ಇಲ್ಲಿ ಅಸ್ಸಾಂ ಮುಖ್ಯಮಂತ್ರಿ ಪ್ರಧಾನಿ ಮೋದಿಯ 'ಚೇಲಾ' ಆಗಿದ್ದಾರೆ. ಅವರು ಶಾ ಹೇಳುವುದನ್ನು ಕೇಳುತ್ತಾರೆ. ಅವರು ದೇಶದ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗವನ್ನು ಹೆದರಿಸುವ ಮೂಲಕ ಮುಂದಿನ ಚುನಾವಣೆಗೆ ಕೆಲಸ ಮಾಡುತ್ತಿದ್ದಾರೆ.
ಎಂದರು.
ಹಿಮಂತಾ ಬಿಸ್ವಾ ಶರ್ಮಾ ಮತ್ತು ಕಾಂಗ್ರೆಸ್ ನಡುವಿನ ಹಳಸಿದ ಸಂಬಂಧವನ್ನು ವಿವರಿಸಲು ಖರ್ಗೆ ಬೆಕ್ಕಿನ ಉದಾಹರಣೆ ನೀಡಿದರು. ನಾವು ಅಂತಹ ಹಲವಾರು ಜನರನ್ನು ನೋಡಿದ್ದೇವೆ. ನಾವು ಎಂದಿಗೂ ಹೆದರುವುದಿಲ್ಲ ಮತ್ತು ಇದು ಕಾಂಗ್ರೆಸ್‌ನ ಭರವಸೆ ಎಂದು ಅವರು ಹೇಳಿದರು.
ಶನಿವಾರ ಕಾಂಗ್ರೆಸ್ ತನ್ನ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ಅವರ ಕಾರು ಮತ್ತು ಪಕ್ಷದ 'ಭಾರತ್ ಜೋಡೋ ನ್ಯಾಯ್ ಯಾತ್ರೆ' ಜೊತೆಯಲ್ಲಿದ್ದ ಕ್ಯಾಮರಾ ವ್ಯಕ್ತಿಗಳ ಮೇಲೆ ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ಜನವರಿ 14 ರಂದು ಮಣಿಪುರದಲ್ಲಿ ಪ್ರಾರಂಭವಾದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಯು ಮಾರ್ಚ್ 20 ಅಥವಾ 21 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ. 15 ರಾಜ್ಯಗಳ 110 ಜಿಲ್ಲೆಗಳ ಮೂಲಕ 67 ದಿನಗಳಲ್ಲಿ 6,713 ಕಿ.ಮೀ ಕ್ರಮಿಸಲು ನಿರ್ಧರಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ