ರಾಮ ಜನ್ಮಭೂಮಿ ಮರಳಿ ಪಡೆಯಲು 'ಸಾಧನೆ' ಬಿಟ್ಟು, Law ಓದಿ ಕಾನೂನು ಹೋರಾಟ ಮಾಡಿದ 'ನಾಗಾ ಸಾಧು'

500 ವರ್ಷಗಳಿಗೂ ಅಧಿಕ ಹೋರಾಟದ ಫಲವಾಗಿ ಇಂದು ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ತಲೆ ಎತ್ತಿದ್ದು, ಈ ಹೋರಾಟದಲ್ಲಿ ಸಾಥ್ ನೀಡಿದ್ದ ನಾಗಾ ಸಾಧುವೊಬ್ಬರು ದೇಗುಲ ನಿರ್ಮಾಣಕ್ಕಾಗಿ ತಮ್ಮ ಸಾಧನೆ ಬದಿಗೊತ್ತಿ Law ಓದಿ ರಾಮಮಂದಿರ ಪರ ಕಾನೂನು ಹೋರಾಟ ನಡೆಸಿದ್ದರು.
ರಾಮಮಂದಿರ ಪರ ಕಾನೂನು ಹೋರಾಟ ನಡೆಸಿದ್ದ ನಾಗಾ ಸಾಧು
ರಾಮಮಂದಿರ ಪರ ಕಾನೂನು ಹೋರಾಟ ನಡೆಸಿದ್ದ ನಾಗಾ ಸಾಧು
Updated on

ಅಯೋಧ್ಯೆ: 500 ವರ್ಷಗಳಿಗೂ ಅಧಿಕ ಹೋರಾಟದ ಫಲವಾಗಿ ಇಂದು ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ತಲೆ ಎತ್ತಿದ್ದು, ಈ ಹೋರಾಟದಲ್ಲಿ ಸಾಥ್ ನೀಡಿದ್ದ ನಾಗಾ ಸಾಧುವೊಬ್ಬರು ದೇಗುಲ ನಿರ್ಮಾಣಕ್ಕಾಗಿ ತಮ್ಮ ಸಾಧನೆ ಬದಿಗೊತ್ತಿ Law ಓದಿ ರಾಮಮಂದಿರ ಪರ ಕಾನೂನು ಹೋರಾಟ ನಡೆಸಿದ್ದರು.

ಇವರ ಹೆಸರು ಬೈರಾಗಿ ನಾಗ ಸಾಧು ಕರುಣೇಶ್ ಶುಕ್ಲಾ.. ಇವರು 2019 ರ ರಾಮ ಜನ್ಮಭೂಮಿಯ ಮೂಲ ಅರ್ಜಿದಾರರಲ್ಲಿ ಒಬ್ಬರಾದ ತಮ್ಮ ಗುರು ಮಹಂತ್ ಧರಂ ದಾಸ್‌ ಪರ ಕಾನೂನು ಹೋರಾಟ ನಡೆಸಿದ್ದರು. ಇದಕ್ಕಾಗಿ ಅವರು ನಾಗಾ ಸಾಧು ಸಾಧನೆಯನ್ನು ಬದಿಗೊತ್ತಿ ಕಾನೂನು ಓದಿ ಸುಪ್ರೀಂ ಕೋರ್ಟ್‌ ನಲ್ಲಿ ಕಾನೂನು ಹೋರಾಟ ನಡೆಸಿದ್ದರು.

ರಾಮ್ ಲಲ್ಲಾ ಅವರ ಜನ್ಮಸ್ಥಳವನ್ನು ಪೂಜಿಸುವ ಮತ್ತು ನಿರ್ವಹಿಸುವ ಹಕ್ಕನ್ನು ಒತ್ತಾಯಿಸಿ ನಿರ್ವಾಣಿ ಅನಿ ಅಖಾರದ ಪ್ರಾಥಮಿಕ ದಾವೆದಾರರಾದ ಮಹಂತ್ ದಾಸ್ ಅವರನ್ನು ಶುಕ್ಲಾ ಪ್ರತಿನಿಧಿಸಿದ್ದರು. ಈ ಕುರಿತು ಮಾತನಾಡಿದ ಅವರು, 'ತಮ್ಮ ಗುರು ಮಹಂತ್ ಧರಮ್ ದಾಸ್ ಅವರನ್ನು ದಯಾನಂದ ಕಾಲೇಜ್ ಆಫ್ ಲಾಗೆ ಪ್ರವೇಶಕ್ಕಾಗಿ ಕಾನ್ಪುರಕ್ಕೆ ಕಳುಹಿಸಿದ್ದಾರೆ ಎಂದು ಹೇಳಿದರು. ಕಠಿಣ ಪರಿಶ್ರಮದಿಂದ ವಕೀಲನಾಗಿ ತೇರ್ಗಡೆಯಾದೆ. ಮತ್ತು ದಾಸ್ ಅವರ ಪರವಾಗಿ ಉನ್ನತ ನ್ಯಾಯಾಲಯದಲ್ಲಿ ಹೋರಾಡುವ ಕನಸನ್ನು ನನಸಾಗಿಸಿಕೊಂಡೆ ಎಂದು ಹೇಳಿದರು.

1991 ರಲ್ಲಿ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಧಾರ್ಮಿಕ ಕುಟುಂಬದಲ್ಲಿ ಜನಿಸಿದ ಧರಂ ದಾಸ್ ಅವರನ್ನು ಅಯೋಧ್ಯೆಯ ಆಶ್ರಮಕ್ಕೆ ಕಳುಹಿಸಲಾಯಿತು, ಅಲ್ಲಿ ಅವರು ಮಹಾಂತ್ ಧರಮ್ ದಾಸ್ ಅವರಿಂದ 'ಬೈರಾಗಿ ನಾಗ ಸಾಧು' ಎಂದು ದೀಕ್ಷೆ ಪಡೆದರು. ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣದ ತೀರ್ಪು ಪ್ರಕಟವಾದ ನಂತರ, ದಾಸ್ ತೀರ್ಪಿನಿಂದ ಸಾಕಷ್ಟು ತೃಪ್ತರಾಗಿದ್ದಾರೆ, ಇದು ರಾಮ ಮಂದಿರವನ್ನು ನೋಡಿಕೊಳ್ಳಲು ಟ್ರಸ್ಟ್ ರಚನೆಗೆ ಆದೇಶಿಸಿದೆ. ಮಾತ್ರವಲ್ಲದೇ ಶುಕ್ಲಾ ಅವರು ಅಕ್ರಮ ಮತಾಂತರ ವಿರುದ್ಧವೂ ಹೋರಾಟ ನಡೆಸಿ 50-60 ಹಿಂದೂ ಮಹಿಳೆಯರನ್ನು ಲವ್ ಜಿಹಾದ್‌ನ ಹಿಡಿತದಿಂದ ರಕ್ಷಿಸಿದ್ದಾರೆ.  

"ನಾಗ ಸಾಧುವಾಗಿ, ನಾನು ಪ್ರಪಂಚವನ್ನು ತ್ಯಜಿಸಿದೆ. ಆದರೆ ಸಮಾಜದ ಕಡೆಗೆ ನನ್ನ ಕರ್ತವ್ಯಗಳನ್ನು ತ್ಯಜಿಸಲಿಲ್ಲ. ಇದು ವೈಯಕ್ತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಸಮತೋಲನಗೊಳಿಸುವ ಮತ್ತು ಜಗತ್ತಿಗೆ ಧನಾತ್ಮಕವಾಗಿ ಕೊಡುಗೆ ನೀಡುವ ಮಹತ್ವವನ್ನು ನನಗೆ ಕಲಿಸುತ್ತದೆ. ನಾನು ಸಮಾಜದ ನಿಸ್ವಾರ್ಥ ಯೋಧ” ಎಂದು ಹೇಳಿದ ಶುಕ್ಲಾ, ಇಂತಹ ಇನ್ನಷ್ಟು ಕದನಗಳಿಗೆ ತಾನು ಸಿದ್ಧ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪನ್ನು ಮಾಜಿ ಸಿಜೆಐಗಳಾದ ನ್ಯಾಯಮೂರ್ತಿ ರಂಜನ್ ಗೊಗೊಯ್, ಶರದ್ ಅರವಿಂದ್ ಬೋಬ್ಡೆ - ನ್ಯಾಯಮೂರ್ತಿಗಳಾದ ಡಾ ಚಂದ್ರಚೂಡ್ (ಈಗಿನ ಸಿಜೆಐ), ಅಶೋಕ್ ಭೂಷಣ್ ಮತ್ತು ಎಸ್ ಅಬ್ದುಲ್ ನಜೀರ್ ಅವರು 2019 ರಲ್ಲಿ ಹಿಂದೂ ಪಕ್ಷಗಳ ಪರವಾಗಿ ತೀರ್ಪು ನೀಡಿದ್ದರು ಮತ್ತು ಮಾಜಿ ಸಿಜೆಐ ನ್ಯಾಯಮೂರ್ತಿ ಗೊಗೊಯ್ ಅವರ ನೇತೃತ್ವದ ಪೀಠವು ಉತ್ತರ ಪ್ರದೇಶದ ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಟ್ರಸ್ಟ್‌ನಿಂದ ರಾಮ ಮಂದಿರ ನಿರ್ಮಾಣಕ್ಕೆ ನಿರ್ದೇಶನ ನೀಡಿದ್ದರು.

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನೆ ಸಮಾರಂಭದ ಆಹ್ವಾನಿತರ ಪಟ್ಟಿಯಲ್ಲಿ ಈ ಐವರೂ ನ್ಯಾಯಾಧೀಶರು ಇದ್ದಾರೆ. ನ್ಯಾಯಾಧೀಶರಲ್ಲದೇ ವಿವಿಧ ರಂಗದ 7,000 ಕ್ಕೂ ಹೆಚ್ಚು ಗಣ್ಯರು ಕೂಡ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com