'ಜನನಾಯಕ' ಬಿಹಾರದ ಮಾಜಿ ಸಿಎಂ ದಿ. ಕರ್ಪೂರಿ ಠಾಕೂರ್ ಗೆ ಪ್ರತಿಷ್ಠಿತ 'ಭಾರತ ರತ್ನ' ಪ್ರಶಸ್ತಿ!

ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಪ್ರತಿಷ್ಠಿತ 'ಭಾರತ ರತ್ನ' ಪ್ರಶಸ್ತಿ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಕರ್ಪೂರಿ ಠಾಕೂರ್
ಕರ್ಪೂರಿ ಠಾಕೂರ್

ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಪ್ರತಿಷ್ಠಿತ 'ಭಾರತ ರತ್ನ' ಪ್ರಶಸ್ತಿ  ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. 

ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಗುತ್ತಿದೆ. ಬುಧವಾರ ಕರ್ಪೂರಿ ಠಾಕೂರ್ ಅವರ 100ನೇ ಜನ್ಮ ವರ್ಷಾಚರಣೆಗೂ ಮುನ್ನ ಅವರಿಗೆ ಭಾರತ ರತ್ನ ನೀಡಿ ಗೌರವಿಸುವುದಾಗಿ ಘೋಷಿಸಲಾಗಿದೆ.

ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಬೇಕೆಂದು ಜನತಾ ದಳ ಯುನೈಟೆಡ್ (ಜೆಡಿಯು) ಒತ್ತಾಯಿಸಿತ್ತು. ಈ ಘೋಷಣೆಯ ನಂತರ ಜೆಡಿಯು ಮೋದಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದೆ.

36 ವರ್ಷಗಳ ತಪಸ್ಸಿಗೆ ಫಲ ಸಿಕ್ಕಿದೆ
36 ವರ್ಷಗಳ ತಪಸ್ಸಿನ ಫಲ ನಮಗೆ ಸಿಕ್ಕಿದೆ ಎಂದು ಕರ್ಪೂರಿ ಠಾಕೂರ್ ಅವರ ಪುತ್ರ ರಾಮನಾಥ್ ಠಾಕೂರ್ ಹೇಳಿದ್ದಾರೆ. ನನ್ನ ಕುಟುಂಬ ಮತ್ತು ಬಿಹಾರದ 15 ಕೋಟಿ ಜನರ ಪರವಾಗಿ ನಾನು ಸರ್ಕಾರಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದರು.

ಬಿಹಾರದ ಸಾರ್ವಜನಿಕ ನಾಯಕ ಕರ್ಪೂರಿ ಠಾಕೂರ್ ಯಾರು?
1970ರ ದಶಕದಲ್ಲಿ ಕರ್ಪೂರಿ ಠಾಕೂರ್ ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಜೊತೆಗೆ ಶಿಕ್ಷಕರೂ ಆಗಿದ್ದರು. ಅವರು ಹಿಂದುಳಿದ ಸಮುದಾಯದಿಂದ ಬಂದವರು. ಮಂಡಲ ಚಳವಳಿಗೂ ಮುನ್ನ ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗದವರಿಗೆ ಶೇ.27ರಷ್ಟು ಮೀಸಲಾತಿ ನೀಡಿದ್ದರು. ಲೋಕನಾಯಕ್ ಜೈಪ್ರಕಾಶ್ ನಾರಾಯಣ್ ಮತ್ತು ರಾಮ್ ಮನೋಹರ್ ಲೋಹಿಯಾ ಇವರ ರಾಜಕೀಯ ಗುರುಗಳು.

ಕರ್ಪೂರಿ ಠಾಕೂರ್ ಗೆ ಭಾರತ ರತ್ನ ಸಿಕ್ಕಿರುವುದಕ್ಕೆ ಪ್ರಧಾನಿ ಮೋದಿ ಅಭಿನಂದನೆ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com