ಕಸ ಕಸದಬುಟ್ಟಿ ಸೇರಿದೆ: ನಿತೀಶ್ ಎನ್ ಡಿಎ ಸೇರಿದ್ದರ ಬಗ್ಗೆ ಲಾಲು ಪುತ್ರಿ ರೋಹಿಣಿ

ಬಿಹಾರ ಸಿಎಂ ನಿತೀಶ್ ಕುಮಾರ್ ಮಹಾಘಟಬಂಧನ್ ತೊರೆದು ಬಿಜೆಪಿ ನೇತೃತ್ವದ ಎನ್ ಡಿಎ ಸೇರಿದ್ದರ ಬಗ್ಗೆ ಆರ್ ಜೆಡಿಯ ಮುಖ್ಯಸ್ಥ ಲಾಲು ಯಾದವ್ ಪುತ್ರಿ ರೋಹಿಣಿ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ. 
ನಿತೀಶ್ ಕುಮಾರ್
ನಿತೀಶ್ ಕುಮಾರ್

ನವದೆಹಲಿ: ಬಿಹಾರ ಸಿಎಂ ನಿತೀಶ್ ಕುಮಾರ್ ಮಹಾಘಟಬಂಧನ್ ತೊರೆದು ಬಿಜೆಪಿ ನೇತೃತ್ವದ ಎನ್ ಡಿಎ ಸೇರಿದ್ದರ ಬಗ್ಗೆ ಆರ್ ಜೆಡಿಯ ಮುಖ್ಯಸ್ಥ ಲಾಲು ಯಾದವ್ ಪುತ್ರಿ ರೋಹಿಣಿ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ. 

ನಿತೀಶ್ ಕುಮಾರ್ ಅವರನ್ನು ಸ್ಪಷ್ಟವಾಗಿ ಉಲ್ಲೇಖಿಸುವಂತೆ ಟ್ವೀಟ್ ಮಾಡಿರುವ ರೋಹಿಣಿ ಆಚಾರ್ಯ ಕಸ ಕಸದಬುಟ್ಟಿ ಸೇರಿದೆ ಎಂದು ವ್ಯಂಗ್ಯವಾಡಿದ್ದಾರೆ.

ಎನ್ ಡಿಎ ಜೊತೆ ಮೈತ್ರಿ ಮುರಿದುಕೊಂಡು ಮಹಾಘಟಬಂಧನ್ ಜೊತೆ ಸೇರಿದ 18 ತಿಂಗಳಿಗೂ ಕಡಿಮೆ ಅವಧಿಯಲ್ಲಿ ನಿತೀಶ್ ಕುಮಾರ್ ಈಗ ಮತ್ತೆ ಎನ್ ಡಿಎ ಮೈತ್ರಿಕೂಟ ಸೇರಿದ್ದಾರೆ. ಕಸ ಮತ್ತೆ ಕಸದಬುಟ್ಟಿ ಸೇರಿದೆ,  ಕಸದ ಗುಂಪಿಗೆ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮುನ್ನ ಮೊನ್ನೆ ಗುರುವಾರವೂ ಅವರು ವಿವಾದಾತ್ಮಕ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದರು ಮತ್ತು ನಂತರ ಅದನ್ನು ಡಿಲೀಟ್ ಮಾಡಿದ್ದರು.

ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಆರ್‌ಜೆಡಿ, ರೋಹಿಣಿ ಆಚಾರ್ಯ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಪ್ರಧಾನಿ ನರೇಂದ್ರ ಮೋದಿಯನ್ನು ಗುರಿಯಾಗಿಸಿಕೊಂಡಿವೆಯೇ ಹೊರತು ಬಿಹಾರ ಸಿಎಂ ನಿತೀಶ್ ಕುಮಾರ್ ಅಲ್ಲ ಎಂದು ಹೇಳಿಕೊಂಡಿತ್ತು.

ಹಿಂದಿಯಲ್ಲಿ ಬರೆಯಲಾಗಿದ್ದ ಪೋಸ್ಟ್‌ಗಳ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಇವರಲ್ಲಿ ಒಬ್ಬರು "ಸೈದ್ಧಾಂತಿಕವಾಗಿ ಪಕ್ಷಾಂತರ ಮಾಡುವವರು ಸಮಾಜವಾದದ ಚಾಂಪಿಯನ್ ಎಂದು ಹೇಳಿಕೊಳ್ಳುತ್ತಾರೆ" ಎಂದು ಅದರಲ್ಲಿ ರೋಹಿಣಿ ಆಚಾರ್ಯ ಈ ಹಿಂದಿನ ಪೋಸ್ಟ್ ನಲ್ಲಿ ಬರೆದಿದ್ದರು. ನಿತೀಶ್ ಕುಮಾರ್ "ವಂಶ ರಾಜಕಾರಣವನ್ನು" ಟೀಕಿಸಿದ್ದಕ್ಕಾಗಿ ರೋಹಿಣಿ ಆಚಾರ್ಯ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು ಎಂದು ಅರ್ಥೈಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com