ತೀವ್ರ ಚಳಿಯಿಂದ ಮುಕ್ತಿ ಪಡೆಯಲು ಅಗ್ಗಿಷ್ಟಿಕೆ ಬಳಕೆ: ಹೊಗೆಯಿಂದ ದೆಹಲಿಯಲ್ಲಿ 15 ಮಂದಿ ಸಾವು!

ಉತ್ತರ ಭಾರತದ ಪ್ರದೇಶಗಳಲ್ಲಿ ತೀವ್ರ ಚಳಿಯಿಂದ ಮುಕ್ತಿಪಡೆಯುವುದಕ್ಕೆ ಸಾಂಪ್ರದಾಯಿಕ ಶೈಲಿಯ ಅಂಗೀತಿಯ ಬೆಂಕಿ ಹಾಕಿ ಬೆಚ್ಚಗಿರುವುದು ರೂಢಿ. ಆದರೆ ಅಂಗೀತಿ (ಅಗ್ಗಿಷ್ಟಿಕೆ) ಹೊಗೆ ದೆಹಲಿಯಲ್ಲಿ 15 ಮಂದಿಯನ್ನು ಬಲಿಪಡೆದಿದೆ. 
ಅಗ್ಗಿಷ್ಟಿಕೆ
ಅಗ್ಗಿಷ್ಟಿಕೆ
Updated on

ದೆಹಲಿ: ಉತ್ತರ ಭಾರತದ ಪ್ರದೇಶಗಳಲ್ಲಿ ತೀವ್ರ ಚಳಿಯಿಂದ ಮುಕ್ತಿಪಡೆಯುವುದಕ್ಕೆ ಸಾಂಪ್ರದಾಯಿಕ ಶೈಲಿಯ ಅಂಗೀತಿಯ ಬೆಂಕಿ ಹಾಕಿ ಬೆಚ್ಚಗಿರುವುದು ರೂಢಿ. ಆದರೆ ಅಂಗೀತಿ (ಅಗ್ಗಿಷ್ಟಿಕೆ) ಹೊಗೆ ದೆಹಲಿಯಲ್ಲಿ 15 ಮಂದಿಯನ್ನು ಬಲಿಪಡೆದಿದೆ. 

ದೆಹಲಿ ಅಗ್ನಿಶಾಮಕ ನಿರ್ದೇಶಕ ಅತುಲ್ ಗರ್ಗ್, ದೆಹಲಿ-ಎನ್ ಸಿಆರ್ ನ ಪ್ರದೇಶಗಳನ್ನು ಪರಿಗಣಿಸಿದರೆ, ಸಾವಿನ ಸಂಖ್ಯೆ 20 ಕ್ಕೆ ಏರಿಕೆಯಾಗುತ್ತದೆ. ಇದು ಅತ್ಯಂತ ಆತಂಕದ ಪರಿಸ್ಥಿತಿಯಾಗಿದ್ದು, ಅಂಗೀತಿಯ (ಸಾಂಪ್ರದಾಯಿಕ ಶೈಲಿಯಲ್ಲಿ ಬೆಚ್ಚಗಿರುವುದಕ್ಕೆ ಬಳಸುವ ಸಾಧನ ಹಾಗೂ ವಿಧಾನ, ಅಗ್ಗಿಷ್ಟಿಕೆ) ಬಳಕೆ ಬಗ್ಗೆ ಜಾಗೃತಿ ಮೂಡಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ. 

ಅಂಗಿತಿ ಅಥವಾ ಅಗ್ಗಿಷ್ಟಿಕೆ ಮೂಲಕ ಇದ್ದಲಿನ ತುಂಡುಗಳನ್ನು ಸುಡುವ ಮೂಲಕ ಬಿಸಿ ಮಾಡಿ ಆ ಶಾಖದಿಂದ ಚಳಿಯನ್ನು ನಿವಾರಿಸಿಕೊಳ್ಳಬಹುದಾಗಿದೆ. ಆದರೆ ಇದನ್ನು ಅತ್ಯಂತ ಜಾಗರೂಕವಾಗಿ ಬಳಕೆ ಮಾಡಬೇಕಿದೆ.

"ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ, ಅಗ್ಗಿಷ್ಟಿಕೆಯ ಬಳಕೆಯ ಪರಿಣಾಮ ಉಂಟಾಗುವ ಸಾವುನೋವುಗಳನ್ನು ಸುಲಭವಾಗಿ ತಪ್ಪಿಸಬಹುದು. ಗಾಳಿಯಾಡದ ಜಾಗಗಳಲ್ಲಿ ಅಗ್ಗಿಷ್ಟಿಕೆಗಳನ್ನು ಬಳಸುವುದರಿಂದ ಉಂಟಾಗುವ ಹಾನಿಕಾರಕ ಪರಿಣಾಮಗಳ ಬಗ್ಗೆ ಅರಿವಿನ ಕೊರತೆಯಿಂದಾಗಿ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ” ಎಂದು ಗಾರ್ಗ್ ಹೇಳಿದ್ದಾರೆ.

ಗಾಳಿಯಾಡದ ಕೋಣೆಯಲ್ಲಿ "ಅಗ್ಗಿಷ್ಟಿಕೆಯನ್ನು ಬಳಸುವುದರಿಂದ ಆಮ್ಲಜನಕದ ಮಟ್ಟ ಕಡಿಮೆಯಾಗಿ ಉಸಿರಾಟದ ತೊಂದರೆ ಉಂಟಾಗುತ್ತದೆ ಎಂದು ಗಾರ್ಗ್ ವಿವರಿಸಿದ್ದಾರೆ. ಏಕಕಾಲದಲ್ಲಿ, ಇಂಗಾಲದ ಡೈಆಕ್ಸೈಡ್ ಮತ್ತು ವಿಷಕಾರಿ ಕಾರ್ಬನ್ ಮಾನಾಕ್ಸೈಡ್ ಮಟ್ಟಗಳು ಹೆಚ್ಚಾಗುತ್ತವೆ, ಇದು ಒಳಗಿನವರಿಗೆ ಮಾರಕ ಪರಿಣಾಮಗಳಿಗೆ ಕಾರಣವಾಗುತ್ತದೆ. 

ಇದೇ ಮಾದರಿಯಲ್ಲಿ ಅಂಗಿತಿ ಬಳಕೆ ಮಾಡಿರುವುದರ ಪರಿಣಾಮ ಜನವರಿಯಲ್ಲಿ ದೆಹಲಿಯಲ್ಲಿ 15 ಮಂದಿ ಜೀವ ಕಳೆದುಕೊಂಡಿದ್ದಾರೆ. 

ಅಗ್ಗಿಷ್ಟಿಕೆಯನ್ನು ಬಳಸುವವರು ಗಾಳಿ ಇರುವ ಪ್ರದೇಶಗಳಲ್ಲಿ ಬಳಸಬೇಕು ಎಂದು ಡಿಎಫ್ಎಸ್ ಮುಖ್ಯಸ್ಥರು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com