ಜಾರ್ಖಂಡ್: ಗೂಡ್ಸ್​ ರೈಲುಗಳು ಮುಖಾಮುಖಿ ಡಿಕ್ಕಿ; ಎಂಜಿನ್​ಗಳು ನಜ್ಜುಗುಜ್ಜು, ಇಬ್ಬರು ಸಾವು

ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಆದ್ರೆ ಈ ಅಪಘಾತದಲ್ಲಿ ಕಾರ್ಮಿಕನೊಬ್ಬ ಕಾರ್ಮಿಕ ಸಿಕ್ಕಿಹಾಕಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.
Two goods trains collided in Sahibganj
ಹಳಿ ತಪ್ಪಿದ ಗೂಡ್ಸ್ ರೈಲು
Updated on

ಜಾರ್ಖಂಡ್: ಜಾರ್ಖಂಡ್​ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಸಾಹಿಬ್​ಗಂಜ್​ನ ಬರ್ಹೆತ್​ನ ಎನ್‌ಟಿಪಿಸಿ ಗೇಟ್ ಬಳಿ ಎರಡು ಸರಕು ರೈಲುಗಳ ನಡುವೆ ಭಾರಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಆದ್ರೆ ಈ ಅಪಘಾತದಲ್ಲಿ ಕಾರ್ಮಿಕನೊಬ್ಬ ಕಾರ್ಮಿಕ ಸಿಕ್ಕಿಹಾಕಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.

ಈ ಬಗ್ಗೆ ಮಾಹಿತಿ ನೀಡಿದ ಸಾಹಿಬ್‌ಗಂಜ್ ಪ್ರಧಾನ ಕಚೇರಿಯಿಂದ ಆಗಮಿಸಿದ ಅಗ್ನಿಶಾಮಕ ದಳದ ಕೆಲಸಗಾರ ರವಿ, ಈ ಘಟನೆ ಬೆಳಗಿನ ಜಾವ 3:30ಕ್ಕೆ ಸಂಭವಿಸಿದೆ. ಹಳಿ ಮೇಲೆ ಸರಕು ರೈಲು ನಿಂತಿತ್ತು. ಈ ಸಮಯದಲ್ಲಿ ಇನ್ನೊಂದು ಬದಿಯಿಂದ ಬರುತ್ತಿದ್ದ ಸರಕು ರೈಲು ಜೋರಾಗಿ ಡಿಕ್ಕಿ ಹೊಡೆದಿದೆ.

ಪರಿಣಾಮ ಎಂಜಿನ್ ಮತ್ತು ಕಲ್ಲಿದ್ದಲು ತುಂಬಿದ ಬೋಗಿಗೆ ಬೆಂಕಿ ಹೊತ್ತಿಕೊಂಡಿತು. ಬೆಂಕಿಯನ್ನು ನಂದಿಸುವ ಕಾರ್ಯ ಮುಂದುವರೆದಿದೆ. ಈ ಅಪಘಾತದಲ್ಲಿ ಎರಡು ರೈಲು ಎಂಜಿನ್‌ಗಳು ಹಳಿತಪ್ಪಿ ಸಂಪೂರ್ಣವಾಗಿ ಹಾನಿಗೊಳಗಾಗಿವೆ ಎಂದು ಹೇಳಿದರು. ಎಂಜಿನ್‌ನಲ್ಲಿ ಏಳು ಜನರಿದ್ದರು, ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಆದ್ರೆ ಕೆಲಸಗಾರನೊಬ್ಬ ಎಂಜಿನ್‌ನಲ್ಲಿ ಸಿಲುಕಿಕೊಂಡಿದ್ದಾರೆ.

ಅವರನ್ನು ಹೊರತೆಗೆಯಲು ಪ್ರಯತ್ನಗಳು ನಡೆಯುತ್ತಿವೆ. ಗಾಯಾಳುಗಳನ್ನು ಬರ್ಹತ್ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.

Two goods trains collided in Sahibganj
ಒಡಿಶಾ: ಹಳಿತಪ್ಪಿದ ಬೆಂಗಳೂರು-ಕಾಮಾಕ್ಯ ಎಕ್ಸ್‌ಪ್ರೆಸ್; 7 ಮಂದಿಗೆ ಗಾಯ, ಓರ್ವ ಸಾವು!

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com