
ನವದೆಹಲಿ: ಕೇಂದ್ರ ಸರ್ಕಾರ, ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಅವರ ಸಶಸ್ತ್ರ ಭದ್ರತೆಯನ್ನು ಪರಿಶೀಲಿಸಿದ್ದು, Z+ ನಿಂದ Z ವರ್ಗಕ್ಕೆ ಇಳಿಸಿದೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.
ಕಳೆದ ವರ್ಷ ಡಿಸೆಂಬರ್ 26 ರಂದು 92ನೇ ವಯಸ್ಸಿನಲ್ಲಿ ನಿಧನರಾದ ಮಾಜಿ ಪ್ರಧಾನಿಯ ಪತ್ನಿ ಎಂಬ ಕಾರಣಕ್ಕೆ ಅವರಿಗೆ ಈ ಹಿಂದೆ ಉನ್ನತ Z-ಪ್ಲಸ್ ಭದ್ರತೆ ನೀಡಲಾಗಿತ್ತು.
ಕೌರ್ ಅವರ ಭದ್ರತೆಯ ಇತ್ತೀಚಿನ ಪರಿಶೀಲನೆಯ ನಂತರ ಅವರಿಗೆ ಎರಡನೇ ಅತ್ಯುನ್ನತ ಮಟ್ಟದ ಭದ್ರತೆಯಾದ Z ವರ್ಗದ ಅಡಿಯಲ್ಲಿ ಭದ್ರತೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಗೃಹ ಸಚಿವಾಲಯವು Z ವರ್ಗದ ಭದ್ರತೆ ಪ್ರಕಾರ, ಕೌರ್ ಅವರ ಸಿಬ್ಬಂದಿ ಮತ್ತು ಪ್ರೋಟೋಕಾಲ್ ಸಂಖ್ಯೆಯನ್ನು ಕಡಿಮೆ ಮಾಡಲು ಕೇಂದ್ರ ಮೀಸಲು ಪೊಲೀಸ್ ಪಡೆ(CRPF) ವಿಐಪಿ ಭದ್ರತಾ ವಿಭಾಗಕ್ಕೆ ನಿರ್ದೇಶನ ನೀಡಿದೆ ಎಂದು ಅವರು ಹೇಳಿದ್ದಾರೆ.
ಕೌರ್ ಅವರ ವೈಯಕ್ತಿಕ ರಕ್ಷಣೆಗಾಗಿ ಮತ್ತು ಅವರ ಮನೆಗೆ ಸುಮಾರು ಒಂದು ಡಜನ್ ಸಶಸ್ತ್ರ ಕಮಾಂಡೋಗಳ ರಕ್ಷಣೆಯನ್ನು ಹೊಂದಿರುತ್ತಾರೆ ಎಂದು ಮೂಲಗಳು ತಿಳಿಸಿವೆ.
Advertisement