Sheesh Mahal ನಿರ್ವಹಣೆಗೆ ತಿಂಗಳಿಗೆ 31 ಲಕ್ಷ ರೂ ಖರ್ಚು: 'Aam Aadmi' Arvind Kejriwal ವಿರುದ್ಧ BJP ಗಂಭೀರ ಆರೋಪ!

ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿ ವಾಸಿಸುತ್ತಿದ್ದ ಹಿಂದಿನ ಬಂಗಲೆಯ ನಿಯಮಿತ ನಿರ್ವಹಣೆಗೆ ವಾರ್ಷಿಕವಾಗಿ ಒಟ್ಟು 3,69,54,384 ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ತೋರಿಸಿದೆ.
Arvind Kejriwal-Sheesh Mahal
ಅರವಿಂದ್ ಕೇಜ್ರಿವಾಲ್ ಮತ್ತು ಶೀಶ್ ಮಹಲ್
Updated on

ನವದೆಹಲಿ: ದೆಹಲಿ ಕಂಡ ಸರಳ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ತಮ್ಮ ಅಧಿಕೃತ ಕಚೇರಿ ಶೀಷ್ ಮಹಲ್ (Sheesh Mahal) ನಿರ್ವಹಣೆಗೆ ತಿಂಗಳಿಗೆ ಬರೊಬ್ಬರಿ 31 ಲಕ್ಷ ರೂ ವ್ಯಯಿಸುತ್ತಿದ್ದರು ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಶನಿವಾರ ದೆಹಲಿ ಬಿಜೆಪಿ ಮಾಜಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಬಂಗಲೆಯನ್ನು 2015-2022ರ ನಡುವೆ ವಾರ್ಷಿಕ 3.69 ಕೋಟಿ ರೂ.ಗಳಲ್ಲಿ ನಿರ್ವಹಿಸಲಾಗಿದೆ ಎಂದು ಆರೋಪಿಸಿದೆ.

ಈ ಕುರಿತು ಸರ್ಕಾರ ನೀಡಿದ ಆರ್‌ಟಿಐ ಉತ್ತರದಲ್ಲಿ ತಮಗೆ ಈ ಮಾಹಿತಿ ಲಭ್ಯವಾಗಿದೆ ಎಂದು ಬಿಜೆಪಿ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ಅವರು, 'ಮಾಹಿತಿ ಹಕ್ಕು (ಆರ್‌ಟಿ) ಪ್ರಶ್ನೆಯ ಮೂಲಕ ಪಡೆದ ವಿವರಗಳ ಪ್ರಕಾರ, ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿ ವಾಸಿಸುತ್ತಿದ್ದ ಹಿಂದಿನ ಬಂಗಲೆಯ ನಿಯಮಿತ ನಿರ್ವಹಣೆಗೆ ವಾರ್ಷಿಕವಾಗಿ ಒಟ್ಟು 3,69,54,384 ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ತೋರಿಸಿದೆ.

Arvind Kejriwal-Sheesh Mahal
Startup Mahakumbh 2025: ಭಾರತದ ಸ್ಟಾರ್ಟ್ ಅಪ್ ಗಳಿಗೆ ಅವಮಾನ; ಚೀನಾ ಗುಣಗಾನದ ಬ್ಯಾನರ್!; MD Pai ಕೆಂಡ, Piyush Goyal ಹೇಳಿದ್ದೇನು?

ಅಂದರೆ ಈ ಬಂಗಲೆ ನಿರ್ವಹಣೆಗೆ ಮಾಸಿಕ 31 ಲಕ್ಷ ರೂ ವ್ಯಯಿಸಲಾಗುತ್ತಿತ್ತು. ಪ್ರತಿ ತಿಂಗಳು ನಿರ್ವಹಣೆಗೆ 31 ಲಕ್ಷ ರೂಪಾಯಿ ಖರ್ಚು ಮಾಡಬೇಕಾದ ಅವರ ಬಂಗಲೆಯ ಕೊರತೆ ಏನು ಎಂದು ವಿವರಿಸಿ ಎಂದು ಅವರು ಎಎಪಿ ನಾಯಕರನ್ನು ಒತ್ತಾಯಿಸಿದ್ದಾರೆ.

ಅಲ್ಲದೆ ಮಾರ್ಚ್ 31, 2015 ಮತ್ತು ಡಿಸೆಂಬರ್ 27, 2022 ರ ನಡುವೆ ಫ್ಲ್ಯಾಗ್ ಸ್ಟಾಫ್ ರಸ್ತೆಯಲ್ಲಿರುವ ಕೇಜ್ರಿವಾಲ್ ಅವರ ಸರ್ಕಾರಿ ಬಂಗಲೆಯ ಸಾಮಾನ್ಯ ದುರಸ್ತಿ, ಒಳಚರಂಡಿ, ವಿದ್ಯುತ್ ಮತ್ತು ರಚನಾತ್ಮಕ ಕೆಲಸಕ್ಕಾಗಿ 29.56 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ.

ಸಾಮಾನ್ಯ ಜನರಿಗೆ ಸರ್ಕಾರವನ್ನು ಮುನ್ನಡೆಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಕೇಜ್ರಿವಾಲ್ 52 ಕೋಟಿ ರೂಪಾಯಿ ವೆಚ್ಚದಲ್ಲಿ ರಹಸ್ಯವಾಗಿ ಶೀಶ್ ಮಹಲ್ ಬಂಗಲೆ ನಿರ್ಮಿಸಿಕೊಂಡಿದ್ದಾರೆ. ಬಳಿಕ ಅವರ ಐಷಾರಾಮಿ ಜೀವನಶೈಲಿ ಬಹಿರಂಗಗೊಂಡಿದೆ. ಇದು ಕೇಜ್ರಿವಾಲ್ ಅವರು ಸಾಮಾನ್ಯ ಜನರೊಂದಿಗೆ ಇಟ್ಟುಕೊಂಡಿರುವ ಬದ್ಧತೆ ಎಂದು ವೀರೇಂದ್ರ ಸಚ್‌ದೇವ್ ಕಿಡಿಕಾರಿದ್ದಾರೆ.

ಕೇಜ್ರಿವಾಲ್ ರ 'ಬ್ರಹ್ಮಾಂಡ ಭ್ರಷ್ಟಾಚಾರ' ಬಯಲಿಗೆಳೆಯುತ್ತೇವೆ

ಇದೇ ವೇಳೆ ಕೇಜ್ರಿವಾಲ್ ಅವರ ಪಂಚತಾರಾ ಜೀವನಶೈಲಿ ಮತ್ತು ಭ್ರಷ್ಟಾಚಾರದ ಬಗ್ಗೆ ನಾವು ಹೆಚ್ಚಿನ ಪುರಾವೆಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ ಮತ್ತು ಅವರಿಂದ ತಕ್ಷಣದ ಪ್ರತಿಕ್ರಿಯೆಯನ್ನು ನಾವು ಒತ್ತಾಯಿಸುತ್ತೇವೆ. ಅವರ ಆಡಳಿತಾವಧಿಯಲ್ಲಿ ನಡೆದಿದ್ದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತೇವೆ ಎಂದರು.

ಅಂತೆಯೇ ದೆಹಲಿಯಲ್ಲಿ, ಒಬ್ಬರು 3 ರಿಂದ 4 ಕೋಟಿ ರೂಪಾಯಿ ಖರ್ಚು ಮಾಡಿ 250-300 ಚದರ ಗಜಗಳಷ್ಟು ಜಾಗದಲ್ಲಿ ಯೋಗ್ಯವಾದ ಮನೆಯನ್ನು ನಿರ್ಮಿಸಬಹುದು. ಆದರೆ ಕೇಜ್ರಿವಾಲ್ ವಾರ್ಷಿಕವಾಗಿ 3.69 ಕೋಟಿ ರೂಪಾಯಿಗಳಲ್ಲಿ ಅವರ ಬಂಗಲೆ ನಿರ್ವಹಣೆ ಮಾಡುತ್ತಿದ್ದರು ಎಂಬುದು ಆಶ್ಚರ್ಯಕರವಾಗಿದೆ. ತಮ್ಮ ಬಂಗಲೆಯ ನಿರ್ವಹಣೆಗೆ ತಿಂಗಳಿಗೆ 31 ಲಕ್ಷ ರೂ. ಬೇಕಾಗುವಷ್ಟು ಕೊರತೆ ಏನಿತ್ತು " ಎಂದು ಅವರು ಪ್ರಶ್ನಿಸಿದ್ದಾರೆ.

ಇನ್ನು ಬಿಜೆಪಿ ಆರೋಪಕ್ಕೆ ಕೇಜ್ರಿವಾಲ್ ಅಥವಾ ಆಮ್ ಆದ್ಮಿ ಪಕ್ಷ (ಎಎಪಿ)ದಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಕೇಜ್ರಿವಾಲ್ ಅವರ ಹಿಂದಿನ ನಿವಾಸದ ನಿರ್ವಹಣಾ ವೆಚ್ಚಗಳ ಕುರಿತು ವಿವರಗಳಿಗಾಗಿ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಆರ್‌ಟಿಐ ಪ್ರಶ್ನೆ ಸಲ್ಲಿಸಿದ್ದರು. ಇದಕ್ಕೆ ದೆಹಲಿ ಸರ್ಕಾರ ಉತ್ತರ ನೀಡಿದ್ದು, ಇದೀಗ ಇದೇ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಎಎಪಿ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದೆ. ಕೇಜ್ರಿವಾಲ್ ಅವರು ಬಹಳ ಸಮಯದಿಂದ ತಮಗೆ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸುವುದನ್ನು ತಪ್ಪಿಸುತ್ತಿದ್ದಾರೆ ಎಂದು ಸಚ್‌ದೇವ್ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com