
ಪಾಟ್ನಾ: ಇತ್ತೀಚಿಗೆ ಲೋಕಸಭೆಯಲ್ಲಿ ಅಂಗೀಕಾರಗೊಂಡ ವಕ್ಫ್ ತಿದ್ದುಪಡಿ ಮಸೂದೆ 2025 ಬೆಂಬಲಿಸಿದ್ದಕ್ಕಾಗಿ ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವಂತೆಯೇ ಒಬ್ಬರಾದ ನಂತರ ಒಬ್ಬರಂತೆ ಮುಸ್ಲಿಂ ನಾಯಕರು ರಾಜೀನಾಮೆ ನೀಡುತ್ತಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆಗೆ ಪಕ್ಷದ ಬೆಂಬಲ ವಿರೋಧಿಸಿ ರಾಜೀನಾಮೆ ನೀಡಿದವರ ಜೆಡಿಯು ನಾಯಕರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಜೆಡಿ(ಯು)ನ ಮತ್ತೊಬ್ಬ ನಾಯಕ ನದೀಮ್ ಅಖ್ತರ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಜೆಡಿಯು ನಾಯಕರಾದ ರಾಜು ನಯ್ಯರ್, ತಬ್ರೇಜ್ ಸಿದ್ದಿಕಿ ಅಲಿಗ್, ಮೊಹಮ್ಮದ್ ಶಹನವಾಜ್ ಮಲಿಕ್ ಮತ್ತು ಮೊಹಮ್ಮದ್ ಕಾಸಿಂ ಅನ್ಸಾರಿ ನಂತರ ನದೀಮ್ ಅಖ್ತರ್ ಜೆಡಿಯುಗೆ ಗುಡ್ ಬೈ ಹೇಳಿದ್ದಾರೆ.
ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿದ್ದರಿಂದ ಪಕ್ಷದ ಬಗ್ಗೆ ನಿರಾಶೆಗೊಂಡು ಜೆಡಿಯು ಯುವ ಮಾಜಿ ರಾಜ್ಯ ಕಾರ್ಯದರ್ಶಿ ಸ್ಥಾನ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ನನ್ನನ್ನು ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸುವಂತೆ ಮನವಿ ಮಾಡುವುದಾಗಿ ನಿತೀಶ್ ಕುಮಾರ್ ಅವರಿಗೆ ಬರೆದಿರುವ ಪತ್ರದಲ್ಲಿ ರಾಜು ನಯ್ಯರ್ ಉಲ್ಲೇಖಿಸಿದ್ದಾರೆ.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಬಿಜೆಪಿ ಮಿತ್ರಪಕ್ಷಗಳು ಮತ್ತು ಸಂಸದರು ಸೇರಿದಂತೆ ಎಲ್ಲಾ ಜಾತ್ಯತೀತ ರಾಜಕೀಯ ಪಕ್ಷಗಳನ್ನು ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸುವಂತೆ ಒತ್ತಾಯಿಸಿತ್ತು.
ಪಕ್ಷವು "ಮುಸ್ಲಿಂ ಸಮುದಾಯದ ನಂಬಿಕೆಗೆ ದ್ರೋಹ ಮಾಡಿದೆ ಎಂದು ಎಂದು ತಬ್ರೇಜ್ ಸಿದ್ದಿಕಿ ಅಲಿಗ್ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಲಕ್ಷಾಂತರ ಮುಸ್ಲಿಂರ ನಂಬಿಕೆಯನ್ನು ನಿತೀಶ್ ಕುಮಾರ್ ದ್ರೋಹ ಬಗೆದಿದ್ದಾರೆ ಎಂದು ಮೊಹಮ್ಮದ್ ಶಹನವಾಜ್ ಮಲಿಕ್ ಹೇಳಿದ್ದಾರೆ. ಪಕ್ಷದ ನಿಲುವು ಲಕ್ಷಾಂತರ ಮುಸ್ಲಿಮರನ್ನು ನೋಯಿಸಿದೆ ಎಂದು ಮೊಹಮ್ಮದ್ ಕಾಸಿಂ ಅನ್ಸಾರಿ ಹೇಳಿದ್ದಾರೆ.
Advertisement