Modi-Yunus ಭೇಟಿ ಕುರಿತು ಕಿತಾಪತಿ ಹೇಳಿಕೆ: ಬಾಂಗ್ಲಾಗೆ ತರಾಟೆ

ಹಸೀನಾ ಪದಚ್ಯುತಿಯ ಬಳಿಕ ಹಳತಪ್ಪಿದ್ದ ಬಾಂಗ್ಲಾ-ಭಾರತದ ಸಂಬಂಧಗಳು ಮೋದಿ-ಯೂನಸ್ ಭೇಟಿಯಿಂದ ಮತ್ತೆ ಸರಿ ದಾರಿಗೆ ಬರುತ್ತಿವೆ ಎಂಬ ವಿಶ್ವಾಸ ಮೂಡಿದ್ದ ಬೆನ್ನಲ್ಲೇ ಬಾಂಗ್ಲಾ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.
PM Modi- Yunus
ಪ್ರಧಾನಿ ಮೋದಿ- ಮುಹಮ್ಮದ್ ಯೂನಸ್ online desk
Updated on

ನವದೆಹಲಿ: ಕೆಲವೇ ದಿನಗಳ ಹಿಂದೆ ಥಾಯ್ಲ್ಯಾಂಡ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದ ಸರ್ಕಾರದ ಮುಖ್ಯಸ್ಥ ಯೂನಸ್ ಭೇಟಿಗೆ ಒಪ್ಪಿಗೆ ಸೂಚಿಸಿ ಮಾತುಕತೆ ನಡೆಸಿದ್ದರು.

ಹಸೀನಾ ಪದಚ್ಯುತಿಯ ಬಳಿಕ ಹಳತಪ್ಪಿದ್ದ ಬಾಂಗ್ಲಾ-ಭಾರತದ ಸಂಬಂಧಗಳು ಮೋದಿ-ಯೂನಸ್ ಭೇಟಿಯಿಂದ ಮತ್ತೆ ಸರಿ ದಾರಿಗೆ ಬರುತ್ತಿವೆ ಎಂಬ ವಿಶ್ವಾಸ ಮೂಡಿದ್ದ ಬೆನ್ನಲ್ಲೇ ಬಾಂಗ್ಲಾ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.

ಯೂನಸ್ ನ್ನು ಭೇಟಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಬಾಂಗ್ಲಾ- ಭಾರತದ ಸಂಬಂಧವನ್ನು ಹಾಳುಮಾಡುವಂತಹ ಯಾವುದೇ ಹೇಳಿಕೆಗಳನ್ನು ನೀಡಬಾರದು, ಬಾಂಗ್ಲಾದೇಶದಲ್ಲಿನ ಹಿಂದೂಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕೆಂಬ ಕಠಿಣ ಸಂದೇಶ ರವಾನೆ ಮಾಡಿದ್ದರು. ಆದರೂ ಎಚ್ಚೆತ್ತುಕೊಳ್ಳದ ಬಾಂಗ್ಲಾದೇಶ ಮೋದಿ-ಯೂನಸ್ ಭೇಟಿಯ ಬಗ್ಗೆಯೇ ಕಿತಾಪತಿ ಹೇಳಿಕೆ ನೀಡಿ ಭಾರತದ ಕೆಂಗಣ್ಣಿಗೆ ಗುರಿಯಾಗಿದೆ.

ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರ ಮೇಲಿನ ದಾಳಿ ಹಾಗೂ ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಗಡಿಪಾರು ಮಾಡುವ ವಿಷಯವಾಗಿ ಬಾಂಗ್ಲಾದೇಶ ಅನಗತ್ಯ ಹೇಳಿಕೆ ನೀಡಿ ಈಗ ಎಡವಟ್ಟು ಮಾಡಿಕೊಂಡಿದೆ. ಈ ಹೇಳಿಕೆಯನ್ನು ಮೋದಿ-ಯೂನಸ್ ಭೇಟಿಯ ಕುರಿತ ಬಾಂಗ್ಲಾ ನಿರೂಪಣೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಯೂನಸ್ ಅವರ ಪತ್ರಿಕಾ ಕಾರ್ಯದರ್ಶಿ ಶಫೀಕುಲ್ ಆಲಂ ಶನಿವಾರ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಬ್ಯಾಂಕಾಕ್‌ನಲ್ಲಿ ನಡೆದ ಸಭೆಯ ಬಗ್ಗೆ ಬರೆದಿದ್ದಾರೆ "ಬಾಂಗ್ಲಾದೇಶದ ಮುಖ್ಯ ಸಲಹೆಗಾರರು ಹಸೀನಾ ಅವರನ್ನು ಹಸ್ತಾಂತರಿಸುವಂತೆ ಮಾಡಿದ ಮನವಿಯನ್ನು ಮೋದಿ ಅವರ ಗಮನಕ್ಕೆ ತಂದರು ಮತ್ತು ಅದಕ್ಕೆ "ಪ್ರತಿಕ್ರಿಯೆ ನಕಾರಾತ್ಮಕವಾಗಿರಲಿಲ್ಲ" ಎಂದು ಹೇಳಿದ್ದಾರೆ.

ಯೂನಸ್ ಮತ್ತು ಹಿಂದಿನ ಬಾಂಗ್ಲಾದೇಶ ಸರ್ಕಾರದೊಂದಿಗಿನ ಸಂಬಂಧದ ಕುರಿತು ಭಾರತದ ಪ್ರಧಾನಿಯವರ ಹೇಳಿಕೆಗಳ ವಿವರಣೆಯು "ತಪ್ಪಾಗಿದೆ" ಎಂದು ಮೇಲೆ ಉಲ್ಲೇಖಿಸಲಾದ ವ್ಯಕ್ತಿ ಸಭೆಯ ಕುರಿತು ಢಾಕಾದ ಅಧಿಕೃತ ಮೂಲಗಳು ಮತ್ತು ಆಲಂ ಅವರ ಫೇಸ್‌ಬುಕ್ ಪೋಸ್ಟ್‌ ಹೇಳಿವೆ.

"ನಿಮ್ಮ (ಯೂನುಸ್) ಬಗ್ಗೆ ಅವರ (ಹಸೀನಾ) ಅಗೌರವದ ವರ್ತನೆಯನ್ನು ನಾವು ನೋಡಿದ್ದೇವೆ" ಎಂದು ಮೋದಿ ಹೇಳಿರುವುದಾಗಿ ಆಲಂ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಯೂನುಸ್ ಎತ್ತಿರುವ ವಿವಿಧ ವಿಷಯಗಳಿಗೆ ಮೋದಿ ಪ್ರತಿಕ್ರಿಯಿಸಿದ್ದಾರೆ ಎಂದು ಮೇಲೆ ಉಲ್ಲೇಖಿಸಲಾದ ಜನ ಹೇಳಿದ್ದಾರೆ. 2014 ರಿಂದ ನಮ್ಮ ದ್ವಿಪಕ್ಷೀಯ ಸಂಬಂಧದಲ್ಲಿನ ಪ್ರಗತಿಯ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದರು ಮತ್ತು ಅದನ್ನು ನಮ್ಮ ಸಮಾಜಗಳು ಮತ್ತು ಜನರ ನಡುವಿನ ಆಳವಾದ ಸ್ನೇಹ ಎಂದು ಬಣ್ಣಿಸಿದ್ದಾರೆ ಎಂದು ಫೇಸ್ ಬುಕ್ ನಲ್ಲಿ ಬರೆಯಲಾಗಿದೆ.

ಯಾವುದೇ ಪ್ರಜಾಪ್ರಭುತ್ವದಲ್ಲಿ ನ್ಯಾಯಸಮ್ಮತತೆಯ ಆಧಾರವಾಗಿ ಚುನಾವಣೆಗಳ ಮಹತ್ವವನ್ನು ಪ್ರಧಾನಿ ಉಲ್ಲೇಖಿಸಿದ್ದಾರೆ ಮತ್ತು ಈ ವಿಷಯದಲ್ಲಿ ನಿರಂತರ ವಿಳಂಬವು ಮುಖ್ಯ ಸಲಹೆಗಾರನ ಖ್ಯಾತಿಗೆ ಹಾನಿ ಮಾಡುತ್ತದೆ ಎಂದು ಮೋದಿ ಹೇಳಿರುವುದಾಗಿ ಬಾಂಗ್ಲಾ ಮೂಲಗಳು ತಿಳಿಸಿವೆ.

"ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಸಾಮಾಜಿಕ ಮಾಧ್ಯಮದ ಕಥಾವಸ್ತು ಎಂಬ ಬಾಂಗ್ಲಾದೇಶದ ವಾದವನ್ನು ವಾಸ್ತವಕ್ಕೆ ವಿರುದ್ಧವಾಗಿ ತಳ್ಳಿಹಾಕಲಾಯಿತು ಎಂದು ಬಾಂಗ್ಲಾ ಅಧಿಕಾರಿಗಳು ಬರೆದಿರುವುದು ಭಾರತದ ಕೆಂಗಣ್ಣಿಗೆ ಗುರಿಯಾಗಿದೆ.

PM Modi- Yunus
ಹಿಂದೂಗಳ ಭದ್ರತೆ ಮುಖ್ಯ, ಭಾರತ- ಬಾಂಗ್ಲಾ ದೇಶದ ಸಂಬಂಧಗಳು ಹಾಳಾದರೆ...: Muhammad Yunus ಗೆ Narendra Modi ಕಠಿಣ ಸಂದೇಶ!

ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಕಳೆದ ವರ್ಷ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಮಾಡಿದ ಮನವಿಗೆ ಭಾರತ ಇನ್ನೂ ಪ್ರತಿಕ್ರಿಯಿಸಿಲ್ಲ. ಕಳೆದ ವರ್ಷ ಆಗಸ್ಟ್‌ನಲ್ಲಿ ಬೃಹತ್ ಸರ್ಕಾರಿ ವಿರೋಧಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಢಾಕಾದಿಂದ ಪಲಾಯನ ಮಾಡಿದ ನಂತರ ಹಸೀನಾ ನವದೆಹಲಿಯಲ್ಲಿ ವಾಸಿಸುತ್ತಿದ್ದಾರೆ.

ಶುಕ್ರವಾರ ಬ್ಯಾಂಕಾಕ್‌ನಲ್ಲಿ ನಡೆದ ಸಭೆಯಲ್ಲಿ, ಬಾಂಗ್ಲಾದೇಶದ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಭಾರತದ ಆಳವಾದ ಕಳವಳಗಳನ್ನು ಮೋದಿ ಯೂನಸ್‌ಗೆ ತಿಳಿಸಿದರು.

ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಭೇಟಿಯ ಬಾಂಗ್ಲಾದೇಶ ನೀಡಿರುವ ಚಿತ್ರಣವು "ಕುಚೇಷ್ಟೆ ಮತ್ತು ರಾಜಕೀಯ ಪ್ರೇರಿತ"ವಾಗಿದೆ. ವಿಶೇಷವಾಗಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಮತ್ತು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಗಡಿಪಾರು ಮಾಡುವಂತೆ ಢಾಕಾ ಮಾಡಿದ ಮನವಿಗೆ ಸಂಬಂಧಿಸಿದ ಅಂಶಗಳು ದುರುದ್ದೇಶದಿಂದ ಕೂಡಿದೆಎಂದು ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com