ತಮಿಳು ನಾಡು: ಹಿರಿಯ ಕಾಂಗ್ರೆಸ್ ನಾಯಕ, ವಾಗ್ಮಿ, ಬರಹಗಾರ ಕುಮಾರಿ ಅನಂತನ್ ನಿಧನ

ಕನ್ಯಾಕುಮಾರಿ ಜಿಲ್ಲೆಯ ಕುಮಾರಿಮಂಗಲಂನಲ್ಲಿ ಜನಿಸಿದ ಅನಂತನ್, ವಿಲ್ಲು ಪಟ್ಟು ಪ್ರತಿಪಾದಕರಾಗಿದ್ದ ಅವರ ತಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದಾಗಿನಿಂದ ಸಹಜವಾಗಿಯೇ ಕಾಂಗ್ರೆಸ್ ಪಕ್ಷದತ್ತ ಆಕರ್ಷಿತರಾದರು.
Kumari Ananthan
ಕುಮಾರಿ ಅನಂತನ್
Updated on

ಚೆನ್ನೈ: ತಮಿಳು ಭಾಷೆಯಲ್ಲಿ ಪಾಂಡಿತ್ಯ ಮತ್ತು ಮಾತಿನ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಬರಹಗಾರ ಕುಮಾರಿ ಅನಂತನ್ ನಿನ್ನೆ ಮಂಗಳವಾರ ತಡರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದ್ದಾರೆ ಅವರಿಗೆ 92 ವರ್ಷ ವಯಸ್ಸಾಗಿತ್ತು.

ಕನ್ಯಾಕುಮಾರಿ ಜಿಲ್ಲೆಯ ಕುಮಾರಿಮಂಗಲಂನಲ್ಲಿ ಜನಿಸಿದ ಅನಂತನ್, ವಿಲ್ಲು ಪಟ್ಟು ಪ್ರತಿಪಾದಕರಾಗಿದ್ದ ಅವರ ತಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದಾಗಿನಿಂದ ಸಹಜವಾಗಿಯೇ ಕಾಂಗ್ರೆಸ್ ಪಕ್ಷದತ್ತ ಆಕರ್ಷಿತರಾದರು. ತಮ್ಮ ಜನ್ಮಸ್ಥಳದ ಮೇಲಿನ ಪ್ರೀತಿಯಿಂದ ಅವರು ತಮ್ಮ ಹೆಸರಿಗೆ 'ಕುಮಾರಿ' ಸೇರಿಸಿಕೊಂಡಿದ್ದರು.

ದಿವಂಗತ ಕಾಂಗ್ರೆಸ್ ನಾಯಕ ಮತ್ತು ಮುಖ್ಯಮಂತ್ರಿ ಕೆ. ಕಾಮರಾಜ್ ಅವರೊಂದಿಗಿನ ಅವರ ಒಡನಾಟವು ಅವರನ್ನು ಯುವ ಕಾಂಗ್ರೆಸ್ ಸಂಘಟಕರನ್ನಾಗಿ ಮಾಡಿತು. 1977 ರಲ್ಲಿ ನಾಗರಕೋಯಿಲ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಸಂಸತ್ತಿನಲ್ಲಿ ತಮಿಳಿನಲ್ಲಿ ಪ್ರಶ್ನೆಗಳನ್ನು ಕೇಳುವ ಹಕ್ಕನ್ನು ಮೊದಲು ಒತ್ತಾಯಿಸಿ ಪಡೆದುಕೊಂಡವರು ಅನಂತನ್. ನಂತರ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದರು.

ತಮಿಳುನಾಡು ಸರ್ಕಾರವು ಕಳೆದ ವರ್ಷ ರಾಜ್ಯ ಸರ್ಕಾರದ ಅತ್ಯುನ್ನತ ಗೌರವವಾದ ತಗೈಸಲ್ ತಮಿಳರ್ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಿತು. 2021 ರಲ್ಲಿ ರಾಜ್ಯ ಸರ್ಕಾರವು ಅವರಿಗೆ ಕಾಮರಾಜರ್ ಪ್ರಶಸ್ತಿಯನ್ನು ನೀಡಿತು. ಅವರ ಪುತ್ರಿ ತಮಿಳಿಸೈ ಸೌಂದರರಾಜನ್ ಅವರು ಬಿಜೆಪಿಯ ಹಿರಿಯ ನಾಯಕಿ, ಈ ​​ಹಿಂದೆ ತೆಲಂಗಾಣದ ರಾಜ್ಯಪಾಲರಾಗಿ ಮತ್ತು ಪುದುಚೇರಿಯ ಲೆಫ್ಟಿನೆಂಟ್-ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ಅವರ ಕಿರಿಯ ಸಹೋದರ ದಿವಂಗತ ಎಚ್. ವಸಂತಕುಮಾರ್, ಜನಪ್ರಿಯ ವಸಂತ್ & ಕೋ ಮಳಿಗೆಗಳ ಸರಪಳಿಯನ್ನು ಸ್ಥಾಪಿಸಿದರು ಮತ್ತು ಉದ್ಯಮಿಯ ಮಗ ವಿಜಯ್ ವಸಂತ್ ಈಗ ಪ್ರತಿನಿಧಿಸುವ ಕ್ಷೇತ್ರವಾದ ಕನ್ಯಾಕುಮಾರಿಯಿಂದ ಕಾಂಗ್ರೆಸ್‌ನಿಂದ ಲೋಕಸಭೆಗೆ ಆಯ್ಕೆಯಾದರು.

ಅನಂತನ್ 1980ರಲ್ಲಿ ಗಾಂಧಿ ಕಾಮರಾಜ್ ದೇಶೀಯ ಕಾಂಗ್ರೆಸ್ ಎಂಬ ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿದರು, ಆದರೆ ಅದು ಯಶಸ್ವಿಯಾಗಲಿಲ್ಲ. ನಂತರ ಅವರು ಮಾರ್ಚ್ 2001 ರಲ್ಲಿ ಥೋಂಡರ್ ಕಾಂಗ್ರೆಸ್ ನ್ನು ಪ್ರಾರಂಭಿಸಿದರು. ಚುನಾವಣಾ ಸೋಲಿನ ನಂತರ, ಅವರು ಆ ಸಂಘಟನೆಯನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದರು. ಅವರು ಬರೆದ ಪುಸ್ತಕಗಳಲ್ಲಿ ನೀಂಗಲುಮ್ ಪೆಚ್ಚಾಲರಾಗಲಂ, ಸೆಂಬನೈ ನಾಡು, ಪಾರತೀರ ಪಾಡಿಯ ಭಾರತಿ, ನಿಲೈತ ಪುಗಲುದೈಯೋರ್ ಮೊದಲಾದವಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com