
ಮುಂಬೈ: 2008ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ತಹವ್ವೂರ್ ರಾಣಾಗೆ ಮರಣದಂಡನೆ ವಿಧಿಸಬೇಕೆಂದು ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ವಿಜಯ್ ವಡೆಟ್ಟಿವಾರ್ ಗುರುವಾರ ಒತ್ತಾಯಿಸಿದ್ದಾರೆ. ಆದರೆ ಈ ವಿಷಯವನ್ನು "ರಾಜಕೀಯಗೊಳಿಸಬಾರದು" ಎಂದು ಬಿಜೆಪಿಗೆ ಸಲಹೆ ನೀಡಿದ್ದಾರೆ.
"ರಾಣಾನನ್ನು ಬೇಗನೆ ಭಾರತಕ್ಕೆ ಕರೆತಂದು ಗಲ್ಲಿಗೇರಿಸಬೇಕು. ಮುಂಬೈ ಮೇಲೆ ದಾಳಿ ಮಾಡಿ ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡ ವ್ಯಕ್ತಿಯನ್ನು ಬಿಡಬಾರದು. ಆದರೆ ಈ ವಿಷಯವನ್ನು ರಾಜಕೀಯಗೊಳಿಸಬಾರದು" ಎಂದು ವಡೆಟ್ಟಿವಾರ್ ANI ಗೆ ತಿಳಿಸಿದ್ದಾರೆ.
"ಮುಂಬರುವ ಚುನಾವಣೆಯಲ್ಲಿ ಬಿಜೆಪಿ ರಾಣಾ ಹೆಸರನ್ನು ಮತ ಪಡೆಯಲು ಬಳಸಬಾರದು... ಅವರು ದಾವೂದ್ ಇಬ್ರಾಹಿಂ ಅನ್ನು ಕರೆತರುವಲ್ಲಿ ಯಶಸ್ವಿಯಾದರೆ, ಅದು ಬಿಜೆಪಿಗೆ ದೊಡ್ಡ ಸಾಧನೆಯಾಗುತ್ತಿತ್ತು" ಎಂದು ಕಾಂಗ್ರೆಸ್ ಶಾಸಕ ಹೇಳಿದ್ದಾರೆ.
ಏತನ್ಮಧ್ಯೆ, 166 ಜನರನ್ನು ಬಲಿತೆಗೆದುಕೊಂಡ 2008 ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವವರನ್ನು ಶಿಕ್ಷಿಸಲು ಕಾಂಗ್ರೆಸ್ "ಏನನ್ನೂ ಮಾಡಿಲ್ಲ" ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಗುರುವಾರ ಟೀಕಿಸಿದ್ದಾರೆ.
Advertisement