
ಪಾಟ್ನಾ: ಬಿಹಾರದಲ್ಲಿ ಸಿಡಿಲು ಮತ್ತು ಆಲಿಕಲ್ಲು ಮಳೆಯಿಂದ ಸಾವನ್ನಪ್ಪಿದವರ ಸಂಖ್ಯೆ 61ಕ್ಕೆ ಏರಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಆಲಿಕಲ್ಲು ಮಳೆ ಮತ್ತು ಮಳೆ ಸಂಬಂಧಿತ ಘಟನೆಗಳಲ್ಲಿ 39 ಜನ ಸಾವನ್ನಪ್ಪಿದ್ದರೆ, ಗುರುವಾರ ಸಿಡಿಲು ಬಡಿದು 22 ಜನ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.
ಗುರುವಾರ ಸಂಜೆವರೆಗೆ ಇಪ್ಪತ್ತೈದು ಸಾವುಗಳು ವರದಿಯಾಗಿವೆ ಮತ್ತು ವಿವಿಧ ಜಿಲ್ಲೆಗಳಿಂದ ಡೇಟಾವನ್ನು ಸಂಗ್ರಹಿಸಿದ ನಂತರ ಸಾವಿನ ಸಂಖ್ಯೆ 61ಕ್ಕೆ ಏರಿದೆ. ನಳಂದ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 23 ಸಾವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಗುರುವಾರ ಬಿಹಾರದ ಹಲವಾರು ಜಿಲ್ಲೆಗಳಲ್ಲಿ ಸಿಡಿಲು, ಆಲಿಕಲ್ಲು ಮಳೆ ಮತ್ತು ಮಳೆ ಸಂಬಂಧಿತ ಘಟನೆಗಳಿಂದ ಸಾವನ್ನಪ್ಪಿದವರ ಸಂಖ್ಯೆ 61 ಕ್ಕೆ ಏರಿದೆ" ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
"ನಳಂದ ಜಿಲ್ಲೆಯಲ್ಲಿ ಅತಿ ಹೆಚ್ಚು, 23 ಮಂದಿ ಸಾವನ್ನಪ್ಪಿದ್ದಾರೆ, ನಂತರ ಭೋಜ್‌ಪುರ(ಆರು), ಸಿವಾನ್, ಗಯಾ, ಪಾಟ್ನಾ ಮತ್ತು ಶೇಖ್‌ಪುರದಲ್ಲಿ ತಲಾ ನಾಲ್ವರು, ಜಮುಯಿಯಲ್ಲಿ ಮೂವರು ಮತ್ತು ಜೆಹಾನಾಬಾದ್ ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಗೋಪಾಲ್‌ಗಂಜ್, ಮುಜಾಫರ್‌ಪುರ್, ಅರ್ವಾಲ್, ದರ್ಭಂಗಾ, ಬೇಗುಸರೈ, ನಹರ್ಸಾ, ಕತಿಹಾರ್, ಲಖಿಪುರ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
Advertisement