'ಕಗ್ಗತ್ತಲಲ್ಲಿ ಆಶಾಕಿರಣ': ವಕ್ಫ್ ಕಾಯ್ದೆ ತಿರಸ್ಕರಿಸಿದ್ದಕ್ಕಾಗಿ ಸಿದ್ದರಾಮಯ್ಯ, ಮಮತಾ ಮತ್ತು ಸ್ಟಾಲಿನ್‌ಗೆ ಮೆಹಬೂಬಾ ಮುಫ್ತಿ ಧನ್ಯವಾದ!

ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ 'ಧೈರ್ಯ ಮತ್ತು ತತ್ವಬದ್ಧ ನಿಲುವು' ವಹಿಸಿದ್ದಕ್ಕಾಗಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಇಂದು ಕರ್ನಾಟಕ, ಪಶ್ಚಿಮ ಬಂಗಾಳ, ಮತ್ತು ತಮಿಳುನಾಡು ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
'ಕಗ್ಗತ್ತಲಲ್ಲಿ ಆಶಾಕಿರಣ': ವಕ್ಫ್ ಕಾಯ್ದೆ ತಿರಸ್ಕರಿಸಿದ್ದಕ್ಕಾಗಿ ಸಿದ್ದರಾಮಯ್ಯ, ಮಮತಾ ಮತ್ತು ಸ್ಟಾಲಿನ್‌ಗೆ ಮೆಹಬೂಬಾ ಮುಫ್ತಿ ಧನ್ಯವಾದ!
Updated on

ಶ್ರೀನಗರ: ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ 'ಧೈರ್ಯ ಮತ್ತು ತತ್ವಬದ್ಧ ನಿಲುವು' ವಹಿಸಿದ್ದಕ್ಕಾಗಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಇಂದು ಕರ್ನಾಟಕ, ಪಶ್ಚಿಮ ಬಂಗಾಳ, ಮತ್ತು ತಮಿಳುನಾಡು ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಹಿಂದಿನ ಮುಖ್ಯಮಂತ್ರಿಯಾಗಿದ್ದ ಮುಫ್ತಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡಿನ ಎಂ ಕೆ ಸ್ಟಾಲಿನ್ ಮತ್ತು ಕರ್ನಾಟಕದ ಸಿದ್ದರಾಮಯ್ಯ ಅವರಿಗೆ ಒಂದೇ ರೀತಿಯ ಪತ್ರಗಳನ್ನು ಬರೆದಿದ್ದಾರೆ.

ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಮುಫ್ತಿ, "ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧದ ಧೈರ್ಯ ಮತ್ತು ತತ್ವಬದ್ಧ ನಿಲುವಿಗೆ @MamataOfficial ji, @mkstalin ji & @siddaramaiah ji ಅವರಿಗೆ ನಾನು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ಯಾವುದೇ ರೀತಿಯ ಭಿನ್ನಾಭಿಪ್ರಾಯವನ್ನು ಅಪರಾಧೀಕರಿಸಲಾಗುತ್ತಿರುವ ಇಂದಿನ ಭಾರತದಲ್ಲಿ ನಿಮ್ಮ ನಿಸ್ಸಂದಿಗ್ಧ ಧ್ವನಿಗಳು ಕೊಂಚ ಉಸಿರಾಡಲು ಪ್ರೇರೇಪಿಸುತ್ತಿದೆ ಎಂದು ಬರೆದಿದ್ದಾರೆ.

ದೇಶದ ಏಕೈಕ ಮುಸ್ಲಿಂ ಬಹುಸಂಖ್ಯಾ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಾಗಿ, ಈ ಕರಾಳ ಮತ್ತು ಸವಾಲಿನ ಸಮಯದಲ್ಲಿ ನಿಮ್ಮ ಅಚಲ ನಿಲುವಿನಲ್ಲಿ ನಾವು ಸಾಂತ್ವನ ಮತ್ತು ಸ್ಫೂರ್ತಿಯನ್ನು ಕಂಡುಕೊಂಡಿದ್ದೇವೆ ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ.

'ಕಗ್ಗತ್ತಲಲ್ಲಿ ಆಶಾಕಿರಣ': ವಕ್ಫ್ ಕಾಯ್ದೆ ತಿರಸ್ಕರಿಸಿದ್ದಕ್ಕಾಗಿ ಸಿದ್ದರಾಮಯ್ಯ, ಮಮತಾ ಮತ್ತು ಸ್ಟಾಲಿನ್‌ಗೆ ಮೆಹಬೂಬಾ ಮುಫ್ತಿ ಧನ್ಯವಾದ!
Watch | "ವಕ್ಫ್ ಕಾಯ್ದೆ ಅಭಿವೃದ್ಧಿಯನ್ನು ತರುತ್ತದೆ": ಜಮ್ಮು-ಕಾಶ್ಮೀರ ವಕ್ಫ್ ಮಂಡಳಿ ಅಧ್ಯಕ್ಷೆ ಮಾತು

ಒಂದು ದಶಕಕ್ಕೂ ಹೆಚ್ಚು ಕಾಲ, ಭಾರತವು ಬಹುತ್ವ ಮತ್ತು ವೈವಿಧ್ಯತೆಯ ಮೂಲ ಮೌಲ್ಯಗಳಿಗೆ ಬೆದರಿಕೆ ಹಾಕುತ್ತಿರುವ ಬಹುಸಂಖ್ಯಾತರ ಅಲೆಯನ್ನು ಎದುರಿಸುತ್ತಿದೆ. ಹೆಚ್ಚಿನ ನಾಗರಿಕರು ಈ ಕಾರ್ಯಸೂಚಿಯನ್ನು ತಿರಸ್ಕರಿಸುತ್ತಿದ್ದರೆ, ದ್ವೇಷ ಮತ್ತು ವಿಭಜನೆಯನ್ನು ಉತ್ತೇಜಿಸುವವರು ಈಗ ನಮ್ಮ ಸಂವಿಧಾನ, ಸಂಸ್ಥೆಗಳು ಮತ್ತು ಜಾತ್ಯತೀತ ರಚನೆಯನ್ನು ಗುರಿಯಾಗಿಸಿಕೊಂಡಿರುವವರು ಅಧಿಕಾರವನ್ನು ಹೊಂದಿದ್ದಾರೆ.

'ಕಗ್ಗತ್ತಲಲ್ಲಿ ಆಶಾಕಿರಣ': ವಕ್ಫ್ ಕಾಯ್ದೆ ತಿರಸ್ಕರಿಸಿದ್ದಕ್ಕಾಗಿ ಸಿದ್ದರಾಮಯ್ಯ, ಮಮತಾ ಮತ್ತು ಸ್ಟಾಲಿನ್‌ಗೆ ಮೆಹಬೂಬಾ ಮುಫ್ತಿ ಧನ್ಯವಾದ!
ಪಶ್ಚಿಮ ಬಂಗಾಳ: ವಕ್ಫ್‌ ಪ್ರತಿಭಟನೆ ವೇಳೆ ಹಿಂಸಾಚಾರ; ಅಂಗಡಿ-ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ; 110 ಮಂದಿ ಬಂಧನ; Video

"ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಮರು, ಇತ್ತೀಚೆಗೆ ನಮ್ಮ ಧಾರ್ಮಿಕ ಸ್ವಾತಂತ್ರ್ಯಗಳನ್ನು ದುರ್ಬಲಗೊಳಿಸುವ ಹೊಸ ವಕ್ಫ್ ಕಾನೂನುಗಳ ಅನಿಯಂತ್ರಿತ ಜಾರಿಯ ಮೂಲಕ ದೊಡ್ಡ ಚಪ್ಪಡಿಯನ್ನೇ ತಲೆ ಮೇಲೆ ಎಳೆಯುತ್ತಿದ್ದಾರೆ ಎಂದು ಮುಫ್ತಿ ಪತ್ರಗಳಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com