ಉತ್ತರಾಖಂಡ: ಬಾಲಕನ ಅಪಹರಿಸಿ ಹಲ್ಲೆ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಹರಿಬಿಟ್ಟ 12 ಮಂದಿ ಅಪ್ರಾಪ್ತರು!

ದೂರಿನ ಆಧಾರದ ಮೇಲೆ, ಪೊಲೀಸರು 12 ಬಾಲಕರ ವಿರುದ್ಧ ಪ್ರಕರಣ ದಾಖಲಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
Representational image
ಸಾಂದರ್ಭಿಕ ಚಿತ್ರ
Updated on

ಡೆಹ್ರಾಡೂನ್: ಬೆಚ್ಚಿಬೀಳಿಸುವ ಘಟನೆಯಲ್ಲಿ, ಸ್ಕೂಟರ್‌ಗಳಲ್ಲಿ ಬಂದ ಸುಮಾರು 12 ಮಂದ ಅಪ್ರಾಪ್ತ ವಯಸ್ಕರ ಗುಂಪೊಂದು ಟ್ಯೂಷನ್‌ಗೆ ಹೋಗುತ್ತಿದ್ದ ಅಪ್ರಾಪ್ತ ಬಾಲಕನನ್ನು ಅಪಹರಿಸಿ ಹಲ್ಲೆ ನಡೆಸಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಬಾಲಕಿಯನ್ನು ಅಪಹರಿಸಿ ಏಕಾಂತ ಸ್ಥಳಕ್ಕೆ ಕರೆದೊಯ್ದು, ಕೋಲು ಮತ್ತು ಬೆಲ್ಟ್ ನಿಂದ ಕ್ರೂರವಾಗಿ ಥಳಿಸಿ, ಹಲ್ಲೆ ನಡೆಸಿ ಸಂಪೂರ್ಣ ಘಟನೆಯನ್ನು ವಿಡಿಯೊ ರೆಕಾರ್ಡ್ ಮಾಡಿದ್ದಾರೆ.

ಪೊಲೀಸ್ ಮೂಲಗಳು ಹೇಳುವ ಪ್ರಕಾರ, ಈ ಬಾಲಕರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಫಾಲೋವರ್ಸ್ ಗಳನ್ನು ಹೆಚ್ಚಿಸಲು ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸೋಷಿಯಲ್ ಮೀಡಿಯಾ ಮಕ್ಕಳ ಮೇಲೆ ಯಾವ ರೀತಿ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ ಎಂಬ ಕರಾಳ ಮುಖವನ್ನು ಇದು ತೋರಿಸುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ದೂರಿನ ಆಧಾರದ ಮೇಲೆ, ಪೊಲೀಸರು 12 ಬಾಲಕರ ವಿರುದ್ಧ ಪ್ರಕರಣ ದಾಖಲಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ನಾವು ಈ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ, ಬಾಲಕ ಮತ್ತು ಆತನ ಪೋಷಕರಿಗೆ ನ್ಯಾಯ ಒದಗಿಸಲಾಗುವುದು ಎಂದು ತನಿಖಾಧಿಕಾರಿಗಳು ಹೇಳುತ್ತಾರೆ.

ಪೊಲೀಸರಿಗೆ ಬಂದ ಮಾಹಿತಿಯ ಪ್ರಕಾರ, ಉತ್ತರಾಖಂಡದ ರೂರ್ಕಿಯ ಮೊಹಲ್ಲಾ ಸೋಟ್ ನಿವಾಸಿ ಮುನ್ನೆತ್ ರಜಪೂತ್ ಮೊನ್ನೆ ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಮಗ ರಿತೆನ್ ಚೌಹಾಣ್ ಟ್ಯೂಷನ್‌ಗೆ ಹೋಗುತ್ತಿದ್ದಾಗ ರಾಮನಗರದಲ್ಲಿ ಸ್ಕೂಟರ್‌ಗಳಲ್ಲಿ ಬಂದ ಸುಮಾರು 12 ಹುಡುಗರು ಅವನನ್ನು ತಡೆದು ಅಪಹರಿಸಿಕೊಂಡು ಹೋಗಿ ರಾಮನಗರ ಕೈಗಾರಿಕಾ ಪ್ರದೇಶದ ನಿರ್ಜನ ಸ್ಥಳಕ್ಕೆ ಕರೆದೊಯ್ದು ಬೆಲ್ಟ್‌ಗಳು ಮತ್ತು ದೊಣ್ಣೆಗಳಿಂದ ಕ್ರೂರವಾಗಿ ಥಳಿಸಿದರು.

ಆರೋಪಿಗಳು ದಾಳಿಯನ್ನು ಮೊದಲೇ ಯೋಜಿಸಿದ್ದರು. ರಿಟೆನ್ ನ್ನು ಹೊಡೆಯಲು ಪ್ರಾರಂಭಿಸಿದ ತಕ್ಷಣ ಘಟನೆಯನ್ನು ವೀಡಿಯೊ ರೆಕಾರ್ಡ್ ಮಾಡಲು ಪ್ರಾರಂಭಿಸಿದರು. ಸುತ್ತಮುತ್ತ ಜನರು ಓಡಾಡುತ್ತಿದ್ದರೂ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಬಾಲಕನ ಮೊಬೈಲ್ ನ್ನು ಕೂಡ ಒಡೆದು ಹಾಕಿದ್ದಾರೆ. ಪರಾರಿಯಾಗುವ ಮೊದಲು ವೀಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ.

Representational image
Madhya Pradesh: ಬಾಲಕ ಮಾಡಿದ್ದ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ನಿಂದ ಕೋಮು ದಳ್ಳುರಿ; ಬುರ್ಹಾನ್‌ಪುರದಲ್ಲಿ ಘರ್ಷಣೆ

ಗಂಗನಹರ್ ಪೊಲೀಸ್ ಠಾಣೆಯ ಅಧಿಕಾರಿ ಅಮರ್‌ಜೀತ್ ಸಿಂಗ್ ಅವರು ಗುರುತಿಸಲ್ಪಟ್ಟ ಮೂವರು ಮತ್ತು ಇನ್ನೂ ಗುರುತು ಪತ್ತೆಹಚ್ಚಬೇಕಿರುವ ಒಂಬತ್ತು ಅಪ್ರಾಪ್ತ ವಯಸ್ಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ನಾವು ವೀಡಿಯೊ ದೃಶ್ಯಾವಳಿಗಳನ್ನು ಬಳಸಿಕೊಂಡು ದಾಳಿಕೋರರನ್ನು ಗುರುತಿಸುತ್ತಿದ್ದೇವೆ ಮತ್ತು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ರಾಮ ಪಠಣವನ್ನು ನಿರಾಕರಿಸಿದ್ದಕ್ಕೆ ಮುಸ್ಲಿಂ ಬಾಲಕನ ಮೇಲೆ ದಾಳಿ

ಮೊನ್ನೆ ಗುರುವಾರ ತಡರಾತ್ರಿ ಕಾನ್ಪುರದ ಮಹಾರಾಜಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೈ ಶ್ರೀ ರಾಮ್ ಎಂದು ಹೇಳಲು ನಿರಾಕರಿಸಿದ್ದಕ್ಕಾಗಿ ತನ್ನ ಮೇಲೆ ಬಾಲಕನೊಬ್ಬ ಹಲ್ಲೆ ನಡೆಸಿದ್ದಾನೆ ಎಂದು 13 ವರ್ಷದ ಮುಸ್ಲಿಂ ಬಾಲಕನೊಬ್ಬ ಆರೋಪಿಸಿದ್ದಾನೆ. ಇದಕ್ಕೆ ಮುಸ್ಲಿಂ ಬಾಲಕ ತನ್ನನ್ನು ಬಲವಂತವಾಗಿ ನಮಸ್ಕರಿಸುವಂತೆ ಮಾಡಿ ಆರೋಪಿಗಳ ಪಾದಗಳನ್ನು ಮುಟ್ಟುವಂತೆ ಒತ್ತಾಯಿಸಲಾಗಿದೆ ಎಂದು ಹೇಳಿಕೊಂಡಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com