Arey g***du: ಕೇಂದ್ರ ಸಚಿವ ಕಿಶನ್ ರೆಡ್ಡಿ ವಿರುದ್ಧ ಅಶ್ಲೀಲ, ನಿಂದನಾತ್ಮಕ ಪದ ಪ್ರಯೋಗ; ಕ್ರಮಕ್ಕೆ ಬಿಜೆಪಿ ಒತ್ತಾಯ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧಇಡಿ ಚಾರ್ಜ್ ಶೀಟ್ ವಿರೋಧಿಸಿ ಕಾಂಗ್ರೆಸ್ ರಾಷ್ಟ್ರವ್ಯಾಪಿ ಕರೆ ನೀಡಿದ್ದ ಧರಣಿಯಲ್ಲಿ ತೆಲಂಗಾಣ ಸರ್ಕಾರದ ಹಲವಾರು ಹಿರಿಯ ನಾಯಕರು ಭಾಗವಹಿಸಿದ್ದರು.
Anjan Kumar Yadav, Kishan Reddy
ಅಂಜನ್ ಕುಮಾರ್ ಯಾದವ್ ,ಕಿಶನ್ ರೆಡ್ಡಿ
Updated on

ಹೈದರಾಬಾದ್: ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದ ಅಂಜನ್ ಕುಮಾರ್ ಯಾದವ್ ಅವರು ಅಶ್ಲೀಲ, ನಿಂದನಾತ್ಮಕ ಪದ ಪ್ರಯೋಗ ಮಾಡಿದ ನಂತರ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (TPCC) ಹೈದರಾಬಾದ್‌ನ ಜಾರಿ ನಿರ್ದೇಶನಾಲಯ (ಇಡಿ) ಕಚೇರಿ ಹೊರಗೆ ನಡೆಸಿದ ಪ್ರತಿಭಟನೆ ವಿವಾದಕ್ಕೆ ತಿರುಗಿತು.

ಪ್ರತಿಭಟನೆಯ ವೇಳೆ ಹಾಲಿ ಸಂಸದ ಅನಿಲ್ ಕುಮಾರ್ ಯಾದವ್ ಅವರ ತಂದೆ ಅಂಜನ್ ಕುಮಾರ್ ಯಾದವ್ ಈ ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯಾದವ್, "ನೀನು ಗಾಂಡು, ಏನು ಹೇಳಿದ್ದೀಯಾ? ಕಾಂಗ್ರೆಸ್ ಗೆ ಯಾವುದೇ ನಾಚಿಕೆ ಇಲ್ಲ, ಧರಣಿ ಮಾಡುತ್ತಿದ್ದಾರೆ ಅಂತಾ ಹೇಳಿದ್ದೀಯಾ ಎಂದರು ಪ್ರಶ್ನಿಸಿದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧಇಡಿ ಚಾರ್ಜ್ ಶೀಟ್ ವಿರೋಧಿಸಿ ಕಾಂಗ್ರೆಸ್ ರಾಷ್ಟ್ರವ್ಯಾಪಿ ಕರೆ ನೀಡಿದ್ದ ಧರಣಿಯಲ್ಲಿ ತೆಲಂಗಾಣ ಸರ್ಕಾರದ ಹಲವಾರು ಹಿರಿಯ ನಾಯಕರು ಭಾಗವಹಿಸಿದ್ದರು.

Anjan Kumar Yadav, Kishan Reddy
'ದೇಶದ ಎಲ್ಲಾ ಅಂತರ್ಯುದ್ಧಗಳಿಗೆ CJI ಹೊಣೆ, ಸುಪ್ರೀಂ ಕೋರ್ಟ್ ತನ್ನ ಮಿತಿ ಮೀರುತ್ತಿದೆ': ಬಿಜೆಪಿ ಸಂಸದ

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಜಪಾನ್‌ ನ ಅಧಿಕೃತ ಪ್ರವಾಸದಲ್ಲಿದ್ದು, ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತು ಟಿಪಿಸಿಸಿ ಅಧ್ಯಕ್ಷ ಮಹೇಶ್ ಕುಮಾರ್ ಗೌಡ್ ನೇತೃತ್ವದಲ್ಲಿ ಸಚಿವರು ಮತ್ತು ಶಾಸಕರು ಪ್ರತಿಭಟನೆ ನಡೆಸಿದರು.

ಘಟನೆಯ ನಂತರ ಬಿಜೆಪಿಯು ಅಂಜನ್ ಕುಮಾರ್ ಯಾದವ್ ವಿರುದ್ಧ ಸೈಫಾಬಾದ್ ಪೊಲೀಸ್ ಠಾಣೆಯಲ್ಲಿ ಔಪಚಾರಿಕವಾಗಿ ದೂರು ದಾಖಲಿಸಿದೆ. ಅಂಜನ್ ಕುಮಾರ್ ಹೇಳಿಕೆ ಅತ್ಯಂತ ಅವಹೇಳನಕಾರಿ ಹಾಗೂ ನಿಂದನೀಯವಾಗಿದೆ ಎಂದು ಬಿಜೆಪಿ ತೆಲಂಗಾಣದ ಸಾಮಾಜಿಕ ಮಾಧ್ಯಮ ಸಂಚಾಲಕ ಸುಮಿರನ್ ಕೊಮರ್ರಾಜು ದೂರು ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ಇತರ ಸಂಬಂಧಿತ ಕಾನೂನುಗಳ ನಿಬಂಧನೆಗಳ ಅಡಿಯಲ್ಲಿ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com