ಪಹಲ್ಗಾಮ್ ಉಗ್ರದಾಳಿ ಸಂಚುಕೋರರನ್ನು ನಾವು ಬಿಡುವುದಿಲ್ಲ, ಬಲವಾದ ಪ್ರತಿಕ್ರಿಯೆ ಕೊಡ್ತೀವಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್

"ಭಾರತವು ತುಂಬಾ ಹಳೆಯ ನಾಗರಿಕತೆ ಮತ್ತು ದೊಡ್ಡ ದೇಶವಾಗಿದ್ದು, ಯಾವುದೇ ಭಯೋತ್ಪಾದಕ ಚಟುವಟಿಕೆಗಳಿಂದ ಅದನ್ನು ಬೆದರಿಸಲು ಸಾಧ್ಯವಿಲ್ಲ" ಎಂದು ರಕ್ಷಣಾ ಸಚಿವರು ಹೇಳಿದರು.
Minister Rajanath Singh
ರಕ್ಷಣಾ ಸಚಿವ ರಾಜನಾಥ್ ಸಿಂಗ್online desk
Updated on

ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಜನರಿಗೆ "ಮುಂದಿನ ದಿನಗಳಲ್ಲಿ" ಬಲವಾದ ಪ್ರತಿಕ್ರಿಯೆ ಸಿಗುತ್ತದೆ ಮತ್ತು ಅಂತಹ ಯಾವುದೇ ಭಯೋತ್ಪಾದಕ ಚಟುವಟಿಕೆಗಳಿಂದ ಭಾರತವನ್ನು "ಬೆದರಿಸಲು" ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಹೇಳಿದ್ದಾರೆ.

ಭಾರತ ಮತ್ತು ವಿದೇಶಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಒಂದು ದಿನದ ನಂತರ ಕಾರ್ಯಕ್ರಮವೊಂದರಲ್ಲಿ ರಾಜನಾಥ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ.

ಈ ಉಗ್ರ ಘಟನೆಯನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರ ಅಗತ್ಯ ಮತ್ತು ಸೂಕ್ತವಾದ ಪ್ರತಿಯೊಂದು ಹೆಜ್ಜೆಯನ್ನು ತೆಗೆದುಕೊಳ್ಳುತ್ತದೆ ಎಂದು ನಾನು ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ" ಎಂದು ಸಿಂಗ್ ಹೇಳಿದರು.

"ಮತ್ತು ನಾವು ಈ ಘಟನೆಯನ್ನು ಮಾಡಿದವರನ್ನು ಪತ್ತೆಹಚ್ಚುವುದಲ್ಲದೆ, ಭಾರತದ ನೆಲದಲ್ಲಿ ಈ ದುಷ್ಕೃತ್ಯವನ್ನು ನಡೆಸಲು ಸಂಚು ರೂಪಿಸಿದವರನ್ನು ಸಹ ನಾವು ಬಿಡುವುದಿಲ್ಲ" ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

"ಭಾರತವು ತುಂಬಾ ಹಳೆಯ ನಾಗರಿಕತೆ ಮತ್ತು ದೊಡ್ಡ ದೇಶವಾಗಿದ್ದು, ಯಾವುದೇ ಭಯೋತ್ಪಾದಕ ಚಟುವಟಿಕೆಗಳಿಂದ ಅದನ್ನು ಬೆದರಿಸಲು ಸಾಧ್ಯವಿಲ್ಲ" ಎಂದು ರಕ್ಷಣಾ ಸಚಿವರು ಹೇಳಿದರು.

ಪಹಲ್ಗಾಮ್‌ನಲ್ಲಿ ನಡೆದ ದಾಳಿಯನ್ನು "ಅತ್ಯಂತ ಅಮಾನವೀಯ" ಎಂದು ಸಿಂಗ್ ಹೇಳಿದ್ದು, "ನಮ್ಮೆಲ್ಲರನ್ನೂ ತೀವ್ರ ದುಃಖ ಮತ್ತು ನೋವಿಗೆ ತಳ್ಳಿದೆ" ಎಂದಿದ್ದಾರೆ.

"ಭಯೋತ್ಪಾದನೆಯ ವಿರುದ್ಧ ನಾವು ಶೂನ್ಯ ಸಹಿಷ್ಣುತಾ ನೀತಿಯನ್ನು ಹೊಂದಿದ್ದೇವೆ ಎಂಬ ಭಾರತದ ದೃಢ ಸಂಕಲ್ಪವನ್ನು ನಾನು ಪುನರುಚ್ಚರಿಸಲು ಬಯಸುತ್ತೇನೆ" ಎಂದು ಸಿಂಗ್ ಹೇಳಿದ್ದಾರೆ.

ಈ ಹೇಡಿತನದ ಕೃತ್ಯದ ವಿರುದ್ಧ ಭಾರತದ ಪ್ರತಿಯೊಬ್ಬ ನಾಗರಿಕನೂ ಒಗ್ಗಟ್ಟಾಗಿದ್ದಾರೆ ಎಂದು ಅವರು ಹೇಳಿದರು. ಪಹಲ್ಗಾಮ್‌ ಉಗ್ರ ದಾಳಿ ಇತ್ತೀಚಿನ ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿದೆ. ರಮಣೀಯ ಬೈಸರನ್ ಹುಲ್ಲುಗಾವಲಿನಲ್ಲಿ ಮಂಗಳವಾರ ಮಧ್ಯಾಹ್ನ ಶಂಕಿತ ಭಯೋತ್ಪಾದಕರು ಪ್ರವಾಸಿಗರ ಗುಂಪಿನ ಮೇಲೆ ಗುಂಡು ಹಾರಿಸಿ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ 26 ಜನರು ಸಾವನ್ನಪ್ಪಿದ್ದಾರೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (LeT) ನ ಹಿರಿಯ ಕಮಾಂಡರ್, ಅಲಿಯಾಸ್ ಖಾಲಿದ್ ಎಂದೂ ಕರೆಯಲ್ಪಡುವ ಸೈಫುಲ್ಲಾ ಕಸೂರಿಯನ್ನು ಈ ಹತ್ಯಾಕಾಂಡದ ಹಿಂದಿನ ಮಾಸ್ಟರ್ ಮೈಂಡ್ ಎಂದು ಗುಪ್ತಚರ ಸಂಸ್ಥೆಗಳು ಗುರುತಿಸಿವೆ.

ಗುಪ್ತಚರ ಮೂಲಗಳ ಪ್ರಕಾರ, ಐದರಿಂದ ಆರು ಉಗ್ರರು ದಾಳಿಯಲ್ಲಿ ಭಾಗಿಯಾಗಿದ್ದಾರೆ, ಇದರಲ್ಲಿ ಇತ್ತೀಚೆಗೆ ನಿಯಂತ್ರಣ ರೇಖೆ (LoC) ಆಚೆಯಿಂದ ಕಣಿವೆಗೆ ನುಸುಳಿದ ಹಲವರು ಸೇರಿದ್ದಾರೆ.

Minister Rajanath Singh
Pahalgam attack: ಪಹಲ್ಗಾಮ್ ಉಗ್ರ ದಾಳಿಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ನ್ಯಾಯ ಸಿಗಬೇಕು- ರಾಹುಲ್ ಗಾಂಧಿ

ಭದ್ರತಾ ಪಡೆಗಳು ಪಹಲ್ಗಾಮ್ ಪ್ರದೇಶ ಮತ್ತು ಸುತ್ತಮುತ್ತ ಬೃಹತ್ ಹುಡುಕಾಟವನ್ನು ಆರಂಭಿಸಿದ್ದು, ದುಷ್ಕರ್ಮಿಗಳನ್ನು ಪತ್ತೆಹಚ್ಚಲು ವೈಮಾನಿಕ ಕಣ್ಗಾವಲು ಮತ್ತು ನೆಲದ ಕಾರ್ಯಾಚರಣೆಗಳು ನಡೆಯುತ್ತಿವೆ.

ಘೋರ ದಾಳಿಯಲ್ಲಿ ಭಾಗಿಯಾಗಿರುವ ಮೂವರು ಭಯೋತ್ಪಾದಕರ ರೇಖಾಚಿತ್ರಗಳನ್ನು ಭದ್ರತಾ ಸಂಸ್ಥೆಗಳು ಬಿಡುಗಡೆ ಮಾಡಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com